ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨೪ ಶ್ರೀಮದ್ಭಾಗವತವು - [ಅಧ್ಯಾ, ೫೪. ಲುತ್ತಿರುವುದು, ಕರ್ಮಾನುಸಾರವಾಗಿ ಸಂಭವಿಸತಕ್ಕ ಸುಖದುಃಖಗಳಿಗಾಗಿ ನಾವು ಚಿಂತಿಸಬಾರದು”ಎಂದರು.ಆಮೇಲೆ ಜರಾಸಂಧನು ಮುಂದೆ ಬಂದು, ಶಿಶುಪಾಲನ ಕೈಯನ್ನು ಹಿಡಿದು ಮಿಶ್ರನೆ! ನಾನು ಇದುವರೆಗೆ ಹದಿನೇಳಾ ವರ್ತಿ ಇಪ್ಪತ್ತು ಮೂರು ಅಕ್ಷೌಹಿಣೀಸೈನ್ಯಗಳೊಡನೆ ಹೋಗಿ ಆ ಕೃಷ್ಣ ನೊಡನೆ ಯುದ್ಧಮಾಡಿ, ಒಂದೊಂದುಸಲವೂ ಪರಾಜಿತನಾಗಿ ಬಂದೆನು. ಅದರೇನು ? ಹದಿನೆಂಟನೆಯಸಾರಿ ನಾನು ಯುದ್ಧಕ್ಕೆ ಹೋದಾಗ,ಅವನನ್ನು ಸಂಪೂರ್ಣವಾಗಿ ಸೋಲಿಸಿ ಬಂದೆನಲ್ಲವೆ? ಹಿಂದೆ ನನಗುಂಟಾದ ಅಪಜಯಗ ಳಿಗಾಗಿ ನಾನು ದುಃಖಿಸಿದವನೂ ಅಲ್ಲ. ಈಗಿನ ಜಯಕ್ಕಾಗಿ ಸಂತೋಷಿಸು ವವನೂ ಅಲ್ಲ! ಕಾಲರೂಪಿಯಾದ ಈಶ್ವರನೇ ಹೀಗೆ ಪ್ರಾಣಿಗಳಿಗೆ ಜಯ ಪರಾಜಯಗಳನ್ನುಂಟುಮಾಡುತ್ತಿರುವನೆಂಬುದನ್ನು ನಾನು ಬಲ್ಲೆನು, ನೀ ನೂ ಈಗ ಅದೇಭಾವವನ್ನಿ ಟ್ಟು ಧೈಲ್ಯವನ್ನು ವಹಿಸಬೇಕು, ರಾಜೇಂದ್ರಾ ! ಈಗಲೂ ಚಿಂತೆಯಿಲ್ಲ! ಯಾದವರು ಕೃಷ್ಣನ ಪ್ರೇರಣೆಯಿಂದ'ಏನೋ ಕಸ ಟತಂತ್ರಗಳನ್ನು ಮಾಡಿ, ಈ ಯುದ್ಧದಲ್ಲಿ ನಮ್ಮನ್ನು ಜಯಿಸಿಬಿಟ್ಟರು. ಅವ ರಿಗೆ ಈಗ ಕಾಲವು ಅನುಕೂಲವಾದುದರಿಂದ ಅವರು ಜಯಶೀಲರಾದರು. ಅದರಂತೆಯೇ ನಮಗೂ ಅನುಕೂಲಕಾಲವು ಒದಗಿಬಂದಾಗ, ನಾವು ಜಯಿ ಸುವುದರಲ್ಲಿ ಸಂದೇಹವೇನಿದೆ ? ಇದಕ್ಕಾಗಿ ಚಿಂತಿಸಬೇಡ” ಎಂದನು. ಓ ಪರೀಕ್ಷಿದ್ರಾಜಾ ! ಹೀಗೆ ಶಿಶುಪಾಲನಿಗೆ ಅವನ ಮಿತ್ರರಾದ ಜರಾಸಂಧಾ ದಿಗಳೆಲ್ಲರೂ ಬೋಧಿಸಿದಮೇಲೆ, ಆತನು ಮನಸ್ಸಿಗೆ ಸ್ವಲ್ಪ ಸಮಾಧಾ ನವನ್ನು ತಂದುಕೊಂಡು, ತನ್ನ ಸೈನ್ಯದೊಡನೆ ಪಟ್ಟಣಕ್ಕೆ ಹಿಂತಿರುಗಿ ಹೊ ರಟನು. ಆ ಯುದ್ಧದಲ್ಲಿ ಸತ್ತುಳಿದ ಇತರರಾಜರೂ ತಮ್ಮ ತಮ್ಮ ಪಟ್ಟಣಕ್ಕೆ ಹೋಗಿ ಸೇರಿದರು, ರುಕ್ಕಿಣೀದೇವಿಯ ಅಣ್ಣನಾದ ರುಕ್ಕಿಯೆಂಬವನಿಗೆ ಮಾತ್ರ, ಕೃಷ್ಣನಲ್ಲಿ ಪ್ರಬಲವಾದ ದ್ವೇಷವಿದ್ದುದರಿಂದ, ತನ್ನ ತಂಗಿಯನ್ನು ಕೃಷ್ಣನು ರಾಕ್ಷಸವಿವಾಹದಿಂದ ಅಪಹರಿಸಿಕೊಂಡು ಹೋದುದನ್ನು ಸ ಹಿಸಲಾರದೆ, ಒಂದಕೋಹಿಣಿಸೈನ್ಯವನ್ನು ತನ್ನೊಡನೆ ಕರೆದುಕೊಂಡು ಕೃಷ್ಣನನ್ನು ಬೆನ್ನಟ್ಟಿ ಹೊರಟನು. ಆ ರುಕ್ಕಿಯು ಬಿಲ್ಲು, ಕವಚ, ಮೊದ ಲಾದ ಯುದ್ಧಸಾಧನಗಳನ್ನು ಧರಿಸಿ, ತನ್ನ ಸುತ್ತಲೂ ನೆರೆದ ಸಮಸ್ತರಾ