ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೪ ಶ್ರೀಮದ್ಭಾಗವತವು [ಅಧ್ಯಾ ೫೪. ಆದರೇನು ? ಪೂರೈಜನ್ಮದಲ್ಲಿ ನೀನೇ ಕಾಮದೇವನು, ನಾನೇ ನಿನ್ನ ಪತ್ನಿ ಯಾದ ರತಿಯು, ಓ, ಭದ್ರಾ ! ಈ ಶಂಬರನು ನಿನಗೆ ಆಜನ್ಮ ಶತ್ರುವಾಗಿ ರುವನು, ಇವನು ಎಂತವರಿಗೂ ದುರ್ಜಯನಾಗಿ ವಿರಮದದಿಂದ ಬೀಗಿ ಬೆರೆಯುತ್ತಿರುವನು. ಈತನು ಅನೇಕಮಾಯೆಗಳನ್ನು ಬಲ್ಲವನು. ಆದುದರಿಂದ ಈಗ ನೀನೂ ಅವನಿಗೆ ತಕ್ಕ ಮಾಯೆಗಳನ್ನೇ ಉಪಯೋಗಿಸಿ, ಅವನನ್ನು ಕೊಲ್ಲುವ ಪ್ರಯತ್ನವನ್ನು ಮಾಡು, ಆತ್ತಲಾಗಿ ನಿನ್ನ ಹೆತ್ತ ತಾಯಿ ಯಾದ ರುಕ್ಕಿಣಿಯು ನಿನ್ನನ್ನು ಕಾಣದೆ, ಕರುವನ್ನು ಕಳೆದುಕೊಂಡ ಹೆಣ್ಣು ಜಿಂಕೆಯಂತೆ ಪರಿತಪಿಸುತ್ತ, ಪುತ್ರ ಸ್ನೇಹದಿಂದ ಕುದಿಯುತ್ತಿರುವಳು. ಆದುದರಿಂದ ಈಗಲೇ ನೀನು ನಿನ್ನ ಶತ್ರುವನ್ನು ಕೊಂದು, ನಿನ್ನ ತಾಯಿಗೆ ಸಂತೋಷವನ್ನುಂಟುಮಾಡು” ಎಂದಳು. ಹೀಗೆಂದು ಹೇಳಿ ಆ ಮಾಯಾ ವತಿಯು, ಮಹಾತ್ಮನಾದ ಆ ಪ್ರದ್ಯುಮ್ನ ನಿಗೆ, ಇತರಸಮಸ್ತ ಮಾಯೆಗ ಇನ್ನೂ ನಿಗ್ರಹಿಸತಕ್ಕ ಮಹಾಮಾಯೆಯೆಂಬ ಒಂದು ವಿದ್ಯೆಯನ್ನು ಉಪ ದೇಶಿಸಿದಳು. ಒಡನೆಯೇ ಪ್ರದ್ಯುಮ್ನನು, ಶಂಬರನ ಬಳಿಗೆ ಹೋಗಿ ಆತನಿಗೆ ಕಿವಿಯಿಂದ ಕೇಳಬಾರದ ನಿಂದಾ ವಾಕ್ಯಗಳಿಂದ ಕೋಪವನ್ನು ಹೆಚ್ಚಿಸಿ ಯುದ್ಧಕ್ಕಾಗಿ ಕರೆದನು, ಹೀಗೆ ಕ್ರೂರವಾಕ್ಯಗಳಿಂದ ತಿರಸ್ಕರಿಸಲ್ಪಟ್ಟ, ಅ ಶಂಬರನು, ಕಾಲಿಂದ ಮೆಟ್ಟಿದ ಸರ್ಪದಂತೆ ಕೋಪದಿಂದ ಬುಸುಗುಟ್ಟುತ್ತ, ಕೆಂಪೇರಿದ ಕಣ್ಣಾಲೆಗಳುಳ್ಳವನಾಗಿ, ಗದೆಯನ್ನು ಕೈಗೆತ್ತಿಕೊಂಡು ಹೊ ರಗೆ ಬಂದು, ಆ ಗದೆಯನ್ನು ಗಿರಗಿರನೆ ತಿರುಗಿಸಿ, ಪ್ರದ್ಯುಮ್ನ ನಮೇಲೆ ಪ್ರಯೋಗಿಸಿ, ವಜ್ರಫಾತಕ್ಕೆ ಸದೃಶವಾದ ಸಿಂಹನಾದದಿಂದ ಗರ್ಜಿಸಿದನು. ಇಷ್ಟರಲ್ಲಿಯೇ ಪ್ರದ್ಯುಮ್ನ ನ,ತನ್ನ ಕೈಯಲ್ಲಿದ್ದ ಗದೆಯಿಂದ ಆ ಶಂಬರನ ಗದೆಯನ್ನು ಎರಡುತುಂಡಾಗಿ ಕತ್ತರಿಸಿ, ಸಿಂಹನಾದದೊಡನೆ ಆದೇಗದೆಯನ್ನು ಶಂಬರನಮೇಲೆಯೂ ಪ್ರಯೋಗಿಸಿದನು. ಇಷ್ಟರಲ್ಲಿ ಶಂ ಬರನು,ಮಯನಿಂದ ತನಗೆ ಉಪದೇಶಿಸಲ್ಪಟ್ಟ ದೈತ್ಯಮಾಯೆಯನ್ನು ಹಿಡಿದು, ಕಣ್ಮರೆಯಾಗಿ ಆಕಾಶಕ್ಕೆ ಹಾರಿ, ಅಲ್ಲಿಂದ ಪ್ರದ್ಯುಮ್ಮನ ಮೇಲೆ ತಿಲಾವರ್ಷ ವನ್ನು ಕರೆಯಲಾರಂಭಿಸಿದನು. ಆಗ ಪ್ರದ್ಯುಮ್ಮನು ತನ್ನ ಮೇಲೆ ಬಿಳುತ್ತಿ ರುವ ತೆಲಾವರ್ಷವನ್ನು ತಡೆಯಲಾರದೆ, ಕೇವಲಸತ್ವಗುಣಪ್ರಚುರವಾಗಿ,