ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩8 ಅಧ್ಯಾ, ೫೫.] ದಶಮಸ್ಕಂಧವು. ಸಮಸ್ತಮಾಯೆಗಳನ್ನೂ ನಿಗ್ರಹಿಸತಕ್ಕ ಮಹಾವಿದ್ಯೆಯೆಂಬ ತನ್ನ ಮಾಯೆಯನ್ನು ಪ್ರಯೋಗಿಸಿದನು. ಇದರಿಂದ ಶಂಬರನು ಪ್ರಯೋಗಿಸಿದ್ದ ದೈತ್ಯಮಾಯೆಯು ಅಡಗಿಹೋಯಿತು. ಆಗ ಶಂಬರನು, ಮೊದಲಿಗಿಂತಲೂ ಅಧಿಕವಾದ ಕೋಪಾವೇಶದಿಂದ, ಗುಹ್ಯಕ, ಗಂಧ, ಪಿಶಾಚ, ಉರಗ, ರಾಕ್ಷಸಜಾತಿಗಳಿಗೆ ಸಂಬಂಧಪಟ್ಟ ಬೇರೆಬೇರೆ ನೂರಾರುವಾಯೆಗಳನ್ನು ಪ್ರಯೋಗಿಸಲಾರಂಭಿಸಿದನು, ಅವೆಲ್ಲವನ್ನೂ ಪ್ರದ್ಯುಮ್ನ ನು ಮಾಯಾವತಿ ಯಿಂದ ತನಗೆ ಉಪದೇಶಿಸಲ್ಪಟ್ಟ ಮಹಾವಿದ್ಯೆಯೆಂಬ ಮಾಯೆಯಿಂದ ಕ್ಷಣಮಾತ್ರದಲ್ಲಿ ನಿಗ್ರಹಿಸುತ್ತ ಬಂದನು. ಹೀಗೆ ಶಂಬರನ ಮಾಯಾ ಬಲವೆಲ್ಲವೂ ಮುರಿದಮೇಲೆ, ಪ್ರದ್ಯುಮ್ನನು ತೀಕವಾದ ಒಂದಾನೊಂದು ಖಡ್ಗವನ್ನು ಕೈಗೆತ್ತಿಕೊಂಡು, ಕೆಂಪು ಮೀಸೆಗಳುಳ್ಳ ಆ ಶಂಬರನ ತಲೆಯನ್ನು ಕಿರೀಟಕುಂಡಲಗಳೊಡನೆ ಕತ್ತರಿಸಿ ಕೆಡಹಿದನು ಒಡನೆಯೇ ದೇವತೆಗಳು ಆಕಾಶದಿಂದ ಜಯಶಬ್ದಗಳೊಡನೆ ಪ್ರಮ್ಯಮ್ಮ ನಮೇಲೆ ಪ್ರಷ್ಟರ್ಷವನ್ನು ಕರೆ ದರು.ಆಗ ಮಾಯಾಬಲದಿಂದ ಗಗನಸಂಚಾರಿಣಿಯಾಗಿ ನೋಡುತಿದ್ದ ಮಾ ಯಾವತಿಯು, ಪ್ರದ್ಯುಮ್ನ ನನ್ನು ಆಕಾಶಮಾರ್ಗದಿಂದ ತನ್ನ ಪಟ್ಟಣಕ್ಕೆ ಕರೆತರುತಿದ್ದಳು, ಮಿಂಚಿನೊಡಗೂಡಿದ ಮೇಫುದಂತೆ, ಆ ಪ್ರದ್ಯು ಮ್ಯ ನು ತನ್ನ ಭಾರೆಯಾದ ಆಕೆಯೊಡನೆ ಆಕಾಶಮಾರ್ಗದಿಂದಲೇ ಬಂದು, ಅನೇಕರತ್ನಗಳಿಂದ ನಿಬಿಡವಾದ ತನ್ನ ಅಂತಃಪುರವನ್ನು ಪ್ರವೇಶಿಸಿ ದನು, ಆಗ ಆ ಪ್ರದ್ಯುಮ್ನ ನ ಸೌಂದ‌ವಿಲಾಸಗಳನ್ನು ಕೇಳಬೇಕೆ ? ಮೇ ಫುದಂತೆ ಶ್ಯಾಮಲವರ್ಣವಾದ ಮೈ ನಡುವಿನಲ್ಲಿ ಹೊಂಬಣ್ಣದ ಪಟ್ಟೆ ಮಡಿ! ನೀಡಿದ ತೋಳುಗಳು! ಕಮಲದಳದಂತೆ ಕೆಂಪಾದ ಕಣ್ಣುಗಳು ! ಮುಗುಳ್ಳ ಗೆಯಿಂದ ಕೂಡಿದ ಮುಖದ ಸೊಗಸು!ಸುರುಳಿಗಟ್ಟಿದ ಮುಂಗುರುಳುಗಳಿಂ ದ ಚಿತ್ರಿಸಿದಂತೆ ಶೋಭಿಸುತ್ತಿರುವ ಹಣೆ! ಹೀಗೆ ಆಪೂರೈಸೌಂದರವಿಶಿಷ್ಟ ನಾದ ಆ ಪ್ರದ್ಯುಮ್ನ ನನ್ನು ನೋಡಿದೊಡನೆ, ಅಲ್ಲಿದ್ದ ಅಂತಃಪುರಸ್ತಿ ಯರೆಲ್ಲರೂ ಆತನೇ ಕೃಷ್ಣನೆಂದು ಭ್ರಮಿಸಿ, ಲಜ್ಜೆಯಿಂದ ಅಲ್ಲಲ್ಲಿ ಆಡಗಿ ಕೊಂಡರು, ಆಮೇಲೆ ಆ ಸ್ತ್ರೀಯರು ಸ್ವಲ್ಪ ಸ್ವಲ್ಪವಾಗಿ ನಾಚಿಕೆಯನ್ನು ಬಿಟ್ಟು, ಅವನ ಮುಖವನ್ನು ಚೆನ್ನಾಗಿ ನೋಡಿದಾಗ, ಕೆಲವು ವೈಲಕ್ಷಣ್ಯಗ 135 B.