ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಶ್ರೀಮದ್ಭಾಗವತವು [ಅಧ್ಯಾ, ೫೫. ಳಿಂದ ಆತನು ಕೃಷ್ಣನಲ್ಲವೆಂದು ತಿಳಿಯಿತು. ಶ್ರೀವತ್ಸ ಕೌಸ್ತುಭಾದಿಚಿ ಹ್ನೆಗಳೊಂದೂ ಅವನಲ್ಲಿ ಕಾಣದಿರುವುದನ್ನೂ, ಅವನೊಡನೆ ಸುಂದರಾಂಗಿ ಯಾದ ಬೇರೊಬ್ಬ ಹೊಸಹೆಂಗಸು ಬಂದಿರುವುದನ್ನೂ ನೋಡಿ, ಅವರಿಗೆ ಆತನು ಕೃಷ್ಣನಲ್ಲವೆಂಬ ನಿಶ್ಚಯವೂ ಹುಟ್ಟಿತು ಎಲ್ಲರೂ ಆಶ್ಚರದಿಂದ ನಗು ತ್ಯ ಮುಂದೆ ಬಂದರು, ರುಶ್ಮಿಣಿಯೂ ಮುಂದೆ ಬಂದಳು. ಆ ಪುರಷನನ್ನು ನೋಡಿದೊಡನೆ ರುಕ್ಕಿಣಿಗೆ ಯಾವುದೋ ಒಂದುವಿಧವಾದ ಪುತ್ರ ಸ್ನೇಹ ದಿಂದ ಸನಗಳಲ್ಲಿ ಹಾಲು ತೊರೆಯಿಕ್ಕುತಿತ್ತು. ಅದರಮೇಲೆ ಆಕೆಗೆ ಹಿಂದೆ ತಾನು ಪ್ರಸವಿಸಿದ ಹತ್ತು ದಿನಗಳೊಳಗಾಗಿಯೇ ಕೈತಪ್ಪಿ ಹೋದ ಮಗುವಿನ ಸ್ಮರಣೆಯುಂಟಾಯಿತು. ಆಗ ರುಕ್ಷ್ಮಿಣಿಯು ತನ್ನಲ್ಲಿ ತಾನು ಆಹಾ ! ಏನಿದು? ಈ ಪುರುಷರತ್ನ ವಾವುದು ? ಕಮಲನೇತ್ರನಾದ ಈ ಕುಮಾರನು ಯಾರ ಮಗನಾಗಿರಬಹುದು? ಇವನನ್ನು ಗರ್ಭದಲ್ಲಿ ಧರಿಸಿದ ಭಾಗ್ಯವತಿಯಾವಳೊ! ಇವನಿಗೆ ಈ ನಾರಿಮಣಿಯಲ್ಲಿ ಸಿಕ್ಕಿದಳು? ನಾನು ಪ್ರಸವಗೃಹದಲ್ಲಿದ್ದಾಗಲೇ ಯಾರೋ ಪಾಪಿಗಳು ನನ್ನ ಮಗುವನ್ನು ಮಾ ಯೆಯಿಂದ ಸಾಗಿಸಿ ಬಿಟ್ಟರು. ಆ ಮಗುವು ಇದುವರೆಗೂ ಎಲ್ಲಿಯಾದರೂ ಬದುಕಿದ್ದ ಪಕ್ಷದಲ್ಲಿ, ವಯಸ್ಸಿನಲ್ಲಿಯೂ, ಆಕೃತಿಯಲ್ಲಿಯೂ, ರೂಪದಲ್ಲಿ ಯೂ ಇವನಂತೆಯೇ ಆಗಿರಬೇಕು, ಅದೂ ಹಾಗಿರಲಿ ! ಇವನು ನನ್ನ ಮಗ ನಲ್ಲದಿದ್ದ ಪಕ್ಷದಲ್ಲಿ, ನನ್ನ ಪತಿಯಾದ ಶ್ರೀಕೃಷ್ಣನ ರೂಪಸಾದೃಶ್ಯವು ಇವ ನಲ್ಲಿ ತೋರುವುದಕ್ಕೆ ಕಾರಣವೇನು? ಅವಯವಸನ್ನಿವೇಶಗಳಿಂದಲೂ, ನಡೆ ನುಡಿಗಳಿಂದಲೂ, ನಗೆನೋಟಗಳಿಂದಲೂ, ಇವನು ನನ್ನ ಪತಿಯಾದ ಕೃಷ್ಣ ನನ್ನೆ ಹೋಲುತ್ತಿರುವನು, ಓಹೋ ! ಇನ್ನು ಸಂದೇಹವೇಕೆ ? ಕೃಷ್ಣಾ ಶದಿಂದ ನನ್ನ ಗರ್ಭದಲ್ಲಿ ಹುಟ್ಟಿದ ಕುಮಾರನೇ ಇವನಾಗಿರಬೇಕು ! ಇದ ರಲ್ಲಿ ಸಂದೇಹವೇ ಇಲ್ಲ. ನನಗೆ ಆಕಸ್ಮಿಕವಾಗಿ ಇವನಲ್ಲಿ ಹುಟ್ಟಿದ ಪತ್ರ ಸ್ನೇಹವೇ ಇದಕ್ಕೆ ಸೂಚಕವಾಗಿರುವುದು. ಇದಲ್ಲದೆ ಈಗ ನನಗೆ ಶುಭ ವನ್ನು ಸೂಚಿಸುವಂತೆ ಎಡದ ಭುಜವು ಅದಿರುತ್ತಿರುವುದು ” ಎಂದು ಮನಸ್ಸಿನಲ್ಲಿ ನಾನಾವಿಧವಾಗಿ ಆಲೋಚಿಸುತ್ತಿರುವಾಗಲೇ, ದೇವಕೀವ ಸುದೇವರೊಡನೆ ಶ್ರೀಕೃಷ್ಣನೂ ಆ ಸಲಕ್ಕೆ ಬಂದನು, ಸತ್ವಜ್ಞನಾದ ತಿ