ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೫೭.) | ದಶಮಸ್ಕಂಧವು. ೨೧೪೬ ಜ್ಞನಾದ ಬಲರಾಮನೊಡನೆ (1 ಆಹಾ! ನಮಗೆ ಎಂತಹ ಕಷ್ಟವು ಬಂದೆ ದಗಿತು!” ಎಂದು ಕಣ್ಣೀರುಬಿಟ್ಟು ರೋದಿಸಿದನು, ಒಡನೆಯೇ ಕೃಷ್ಣನು ಬಲರಾಮನನ್ನೂ, ಸತ್ಯಭಾಮೆಯನ್ನೂ ತನ್ನ ಸಂಗಡ ಕರೆದುಕೊಂಡು ಬ್ಯಾ ರಕೆಗೆ ಬಂದನು. ಅಲ್ಲಿ ಶತಧನ್ವನನ್ನು ಕೊಂದು ಅವನಲ್ಲಿದ್ದ ಮನೆಯನ್ನು ತರ ಬೇಕೆಂದು ಯತ್ನಿಸುತ್ತಿದ್ದಾಗ, ಶತಧನ್ಯನು ಹೇಗೋ ಈ ಸಂಚನ್ನು ತಿಳಿದು, ಹಿಂದೆ ತನ್ನನ್ನು ಆ ದುಷ್ಕಾರಕ್ಕೆ ಪ್ರೇರಿಸಿದ ತನ್ನ ಮಿತ್ರನಾದ ಕೃತವಮ್ಮ ಸಿಗೆ ಈ ವಿಚಾರವನ್ನು ತಿಳಿಸಿ, ತನ್ನ ಪ್ರಾಣರಕ್ಷಣೆಗಾಗಿ ಅವನ ಸಹಾಯವ ನ್ನು ಬೇಡಿದನು. ಆಗ ಕೃತವನು (4 ಓ ಮಿತ್ರನೆ ! ಬೇರೆ ಯಾವ ಕೆಲಸವ ಸ್ನಾ ದರೂ ಹೇಳು, ಲೋಕೇಶ್ವರರಾದ ಆ ರಾಮಕೃಷ್ಣರೊಡನೆಮಾತ್ರ ನಾನು ವೈರವನ್ನು ಬೆಳೆಸಲಾರೆನು. ಅವರನ್ನು ವಿರೋಧಿಸಿಕೊಂಡಮೇಲೆ ಲೋಕದಲ್ಲಿ ಕ್ಷೇಮದಿಂದ ಬದುಕಿದವರುಂಟೆ? ಆಕೃಷ್ಣನು ನಡೆಸಿದ ಅದ್ಭು ತಕಾರಗಳನ್ನು ನೀನು ಇದುವರೆಗೆ ಕಿವಿಯಿಂದಾದರೂ ಕೇಳಿಲ್ಲವೆ ! ಆತನ ವಿರೋಧಂದಲ್ಲವೇ ಮಹಾಬಲಾಢನಾದ ಕಂಸನು, ತನ್ನ ಸಮಸ್ತರಾ "ಸಂಪತ್ತನ್ನೂ ಕಳೆದುಕೊಂಡು, ತನ್ನ ಸಮಸ್ಯಪರಿವಾರಗಳೊಡನೆ ಹತ ನಾದನು. ಜರಾಸಂಧನು ಹದಿನೇಳಾವರ್ತಿ ಯುದ್ಧದಲ್ಲಿ ಅವನಿಂದ ಪರಾಜಿತ ನಾಗಿ ಓಡಿಹೋದನು, ಅವರ ಸ್ಥಿತಿಯೇ ಹೀಗಿರುವಾಗ, ಇನ್ನು ನಮ್ಮ ಪಾ ಡೇನು ?” ಎಂದನು. ಆಮೇಲೆ ಶತಧನ್ಯನು ಅರನಬಳಿಗೆ ಹೋಗಿ 11 ಅ ಯಾ ! ನೀನಾದರೂ ಈಗ ನನಗೆ ಸಹಾಯಮಾಡಲಾರೆಯಾ ?” ಎಂದು ಕೇಳಲು,ಅದಕ್ಕಾ ಆಕ್ರನು 14 ಓ : ಶತಧನ್ನಾ ! ಆ ಬಲರಾಮಕೃಷ್ಣರ ಶಕ್ತಿಯನ್ನು ತಿಳಿದವನೊಬ್ಬನೂ ಆವರಸಂಗಡ ವಿರೋಧಿಸಲಾರನು. ಆತ ನನ್ನು ಸಾಮಾನ್ಯಯಾದವನೆಂದು ತಿಳಿಯಬೇಡ: ತನ್ನ ಲೀಲೆಯಿಂದ ಲೋಕದ ಸೃಷಿಸ್ಥಿತಿಸಂಹಾರಗಳನ್ನು ನಡೆಸತಕ್ಕ ಸತ್ಯೇಶ್ವರನೇ ಅವನು! ಆತನ ಮಾ ಯೆಯಿಂದ ಮೋಹಿತರಾದವರಿಗೆ ಇದು ತಿಳಿಯಲಾರದು. ಆಕೃಷ್ಣನು ಏಳುವರುಷದ ಬಾಲಕನಾಗಿರುವಾಗಲೇ ತನ್ನ ಒಂದೇ ಕೈಯಿಂದ ಗೋವ ರ್ಧನಪಲ್ವೇತವನ್ನು ಕಿತ್ತು, ಸಣ್ಣ ಮಕ್ಕಳು ಹೂವಿನ ಚಂಡನ್ನು ಎತ್ತಿಹಿಡಿಯು ವಂತೆ ತನ್ನ ಕಿರುಬೆರಳಿನಿಂದ ಹಿಡಿದು ನಿಂತನು.” ಎಂದು ಹೇಳಿ ಹಾಗೆಯೇ