ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫O ಶ್ರೀಮದ್ಭಾಗವತವು [ಅಧ್ಯಾ, ೫೭. ಶ್ರಫಲ್ಯನೆಂಬವನಿಗೆ ಗಾಂಧಿನಿಯೆಂಬ ತನ್ನ ಮಗಳನ್ನು ಕೊಟ್ಟು ಮದಿವೆ. ಮಾಡಿದಮೇಲೆ, ಅಲ್ಲಿ ಮಳೆಯಾಯಿತೆಂದು ಹೇಳುವರು. ಅ ಶೈಫಲ್ಯನ ಮಗ ನಾದ ಅಕ್ರೂರನಲ್ಲಿಯೂ ಆ ವಿಧವಾದ ಮಹಿಮೆಯೇ ಇರಬೇಕೆಂ ದೂ, ಅವನಿದ್ದ ಕಡೆಯಲ್ಲಿ ಯಾವಾಗಲೂ ಸುವೃಷ್ಟಿಯಾಗುವುದೆಂದೂ, ಅಲ್ಲಿ ಅಪಮೃತ್ಯುಗಳೊಂದೂ ತಲೆದೋರಲಾರವೆಂದೂ ಹೇಳಿ ಕೊಳ್ಳುತ್ತಿದ್ದರು. ಈ ಮಾತು ಕರ್ಣಾಕರ್ಣಿಕೆಯಾಗಿ ಕೃಷ್ಣನ ಕಿವಿಗೂ ಬಿದ್ದಿತು. ಕೃಷ್ಣನು ಸರಜ್ಞನಾದುದರಿಂದ, ಅಕ್ರೂರನಿದ್ದ ಕಡೆಯಲ್ಲಿ ಸುವೃಷ್ಟಿ ಮೊದ ಲಾದ ಶುಭಗಳೆಲ್ಲವೂ ಕಾಣುವುದು ಸ್ಯಮಂತಕಮಣಿಯ ಪ್ರಭಾವವಾಗಿರ ಬೇಕೇಹೊರತು, ಆಕೂರನ ಪ್ರಭಾವವಲ್ಲವೆಂಬುದನ್ನು ತಿಳಿದುಕೊಂಡು, ಮೇಲೆಮಾತ್ರ ಅಲ್ಲಿನ ಜನಗಳನ್ನು ಮೆಚ್ಚಿಸುವುದಕ್ಕಾಗಿ ಅವರ ಅಭಿಪ್ರಾಯ ವನ್ನೇ ಅನುಮೋದಿಸುತ್ಯ, ದೂತರನ್ನು ಕಳುಹಿಸಿ ಆಕ್ರನನ್ನು ಕರೆತರಿಸಿ ದನು, ಮತ್ತು ಅವನನ್ನು ಯಥೋಚಿತವಾಗಿ ಪೂಜಿಸಿ, ಪ್ರಿಯವಾಕ್ಯಗಳಿಂದ ಸಂತೋಷಪಡಿಸಿದಮೇಲೆ, ಮಂದಹಾಸಪೂರಕವಾಗಿ ಅವನನ್ನು ಕುರಿತು (( ಶತಧನ್ವನು ನಿನ್ನ ಬ್ಲಿಟ್ಟುಹೋದ ರತ್ನವು ಈಗಲೂ ನಿನ್ನ ಸ್ಥಿರಬೇಕಲ್ಲವೆ ? ಈ ಸಂಗತಿಯನ್ನು ನಾನು ಮೊದಲೇ ಬಲ್ಲೆನು ? ಸತ್ರಾಜಿಗೆ ಮಕ್ಕಳಿಲ್ಲದು ದರಿಂದ, ಅವನ ದೌಹಿತ್ರರೇ ಅವನಿಗೆ ಪಿಂಡತಿಲೋದಕಾರಿಗಳನ್ನು ಕೊಟ್ಟು ಪಿತೃಋಣವನ್ನು ತೀರಿಸಿರುವುದರಿಂದ, ಅವನ ಸ್ವತ್ತಿಗೆಲ್ಲಾ ಅವರೇ ಬಾಧ್ಯ ರೆಂಬುದನ್ನು ನೀನೂ ಬಲ್ಲೆಯಷ್ಟೆ ! ಆದರೆ ಆ ರತ್ನ ವನ್ನು ಮಾತ್ರ ಇಟ್ಟುಕೊಳ್ಳುವುದಕ್ಕೆ, ಅವರಿಗೆ ಸಾಧ್ಯವಲ್ಲ, ಕೊಟ್ಟರೂ ಅದನ್ನು ಅವರು ಧರಿ ಸಲಾರರು. ಆದುದರಿಂದ ಮಹಾವ್ರತನಿಷ್ಠನಾದ ನಿನ್ನಲ್ಲಿಯೇ ಆ ರತ್ನ ವಿರಲಿ ! ಆದರೆ ಒಂದು ಸಂಗತಿಯುಂಟು. ಈ ರತ್ನದ ವಿಷಯವಾಗಿ ಬಲರಾಮನು ನನ್ನಲ್ಲಿ ಬಹಳವಾಗಿ ಸಂದೇಹಿಸುತ್ತಿರುವನು. ಆದುದರಿಂದ ಆ ರತ್ನವು ನಿನ್ನಲ್ಲಿರುವುದೆಂಬುದನ್ನು ತಿಳಿಸುವುದಕ್ಕಾಗಿ, ನಮ್ಮ ಬಂಧುಗ ಬೆಲ್ಲರಿಗೂ ಅದನ್ನು ನೀನು ಒಂದಾವರ್ತಿ ತೋರಿಸಿ ಬಿಟ್ಟರೆ ಸಾಕು ! ನನ್ನ ಮೇಲಿನ ಅಪವಾದವು ತಪ್ಪಿ, ಎಲ್ಲರಿಗೂ ನಂಬಿಕೆಯುಂಟಾಗುವುದು. ನನ್ನ ಮನಸ್ಸಿಗೂ ನೆಮ್ಮದಿಯುಂಟಾಗುವುದು, ಅಕ್ಕೂರಾ ! ಆ ರತ್ನದ ಸಂಗತಿಯು