ಪುಟ:ಶ್ರೀಮದ್ಭಾಗವತವು ದಶಮಸ್ಕಂದದ ಉತ್ತರಾರ್ಧವು.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೬ ಶ್ರೀಮದ್ಭಾಗವತವು [ಅಧ್ಯಾ: ೫೮. ಏನೆಂದರೆ,ಆ ರಾಜನಲ್ಲಿ ಮಹಾಮದದಿಂದ ಕೊಬ್ಬಿದ ಏಳು ವೃಷಭಗಳುಂಟು. ತೀಕವಾದ ಕೊಂಬುಗಳುಳ್ಳ ಆ ವೃಷಭಗಳನ್ನು ನಿಗ್ರಹಿಸುವುದು ಯಾರಿಂ ದಲೂ ಸಾಧ್ಯವಿಲ್ಲ. ಆ ವೃಷಭಗಳು ತಮಗಿದಿರಾಗಿ ನಿಲ್ಲತಕ್ಕ ವೀರರ ಗಂಧ ಮಾತ್ರವನ್ನೂ ಸಹಿಸದೆ, ಯಾರ ಕೈಗೂ ಅಡಗದೆ, ಬಹಳ ದುಷ್ಟ ಸ್ವಭಾವ ವುಳ್ಳವುಗಳಾಗಿದ್ದುವು. ಆ ಏಳುವೃಷಭಗಳನ್ನು ಯಾರು ಜಯಿಸುವರೋ, ಅಂತವರೇ ಆ ಸತ್ಯೆಯೆಂಬವಳನ್ನು ವರಿಸಬಹುದೆಂಬ ನಿಯಮವಿತ್ತು. ಇದಕ್ಕಾಗಿ ಎಷ್ಟೋ ರಾಜರು ಪ್ರಯತ್ನಿಸಿ, ವಿಫಲಪ್ರಯತ್ತ ರಾಗಿ ಹೊರಟು ಹೋದರು. ಈಸಂಗತಿಯು ಕೃಷ್ಣನಿಗೆ ತಿಳಿಯಿತು. ಆಗ ಕೃಷ್ಣನು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಕೋಸಲದೇಶಕ್ಕೆ ಹೋದನು. ಕೃಷ್ಣನನ್ನು ಕಂಡೊಡನೆ, ಧಾರಿ ಕನಾದ ಕೋಸಲರಾಜನು ಇಡಿರೆದ್ದು ಬಂದು,ಆಸನಾ ದಿಗಳನ್ನು ಕೊಟ್ಟು, ಅವನನ್ನು ಪೂಜಿಸಿದನು. ಆಗ ಆ ರಾಜನ ಮಗಳೂ ಕೂಡ, ಕೃಷ್ಣನ ರೂಪವನ್ನು ನೋಡಿ, ತನ್ನ ಮನಸ್ಸಿಗೆ ಒಪ್ಪಿದ ವರನು ಆತನೇ ಎಂದು ನಿಶ್ಚಯಿಸಿ, ಅವನಲ್ಲಿ ಮೋಹವನ್ನು ತೋರಿಸಿದಳು, ಈ ಮೋಹದಿಂದ ಆಕೆಯು 11 ಈತನೇ ನನಗೆ ಪತಿಯಾಗಲಿ! ನಾನು ಪೂರೈ ಜನ್ಮದಲ್ಲಿ ಯಾವುದಾದರೂ ವ್ರತವನ್ನು ನಡೆಸಿದ್ದರೆ, ಅದರ ಫಲದಿಂದ ಸಾಕ್ಷಾಞ್ಚಪತಿಯಾದ ಈತನೇ ನನ್ನ ಮನಸ್ಸಿನ ಕೋರಿಕೆಯನ್ನು ಈಡೇ ರಿಸಲಿ ” ಎಂದು ಧ್ಯಾನಿಸುತಿದ್ದಳು. ಇಷ್ಟರಲ್ಲಿ ನನ್ನ ಜಿತ್ತು ಕೃಷ್ಣನನ್ನು , ನೋಡಿ, ಓ ! ನಾರಾಯಣಾ ! ಜಗತ್ಪತೇ ! ನೈಜಾನಂದಪೂರ್ಣನಾದ ನಿನ್ನನ್ನು ,ಅತ್ಯಲ್ಪನಾದ ನಾನು ಯಾವವಿಧದಿಂದ ಸಂತೋಷಪಡಿಸಬಲ್ಲೆನು! ಸಾಕ್ಷಾನ್ಮಹಾಲಕ್ಷ್ಮಿಯೂ, ಬ್ರಹ್ಮರುದ್ರರೂ, ಇಂದ್ರಾದಿಲೋಕಪಾಲ ಕರೂ, ಯಾವನ ಫಾದಧೂಳಿಯನ್ನು ತಿರಸಾಧಾರಣಮಾಡುವರೋ, ಯಾವನು, ತಾನು ಮೊದಲು ವೇದದಮೂಲಕವಾಗಿ ನಿರ್ಣಯಿಸಿದ ಧರ ಮರ್ಯಾದೆಯನ್ನು ಕಾಪಾಡುವುದಕ್ಕಾಗಿ, ಆಗಾಗ ಲೀಲಾರ್ಥವಾದ ಬೇರೆ ಬೇರೆ ಶರೀರಗಳನ್ನು ಪರಿಗ್ರಹಿಸುವನೋ, ಅಂತಹ ಭಗವಂತನನ್ನು , ಈಗ ನಾನು ಯಾವವಿಧವಾದ ಸೇವೆಯಿಂದ ಸಂತೋಷಪಡಿಸಬಲೆ ನು” ಎಂದು ಹಿಂದುಮುಂಹುತೋರದೆ ಚಿಂತಿಸುತ್ತಿದ್ದನು. ಆಗ ಸುಖಾ