ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬ ಸರ್ಗ, ೧.] ಅಯೋಧ್ಯಾಕಾಂಡವು. ಯಾದರೂ ಎಣಿಸತಕ್ಕವನು. ಆತನು ಯಾವಕಾಲದಲ್ಲಿಯೇ ಆಗಲಿ, ಕೊನೆಗೆ ಶಸ್ತ್ರಾಭ್ಯಾಸವನ್ನು ಮಾಡುತ್ತಿರುವಾಗಲೂ, ನಡುನಡುವೆ ಅವಕಾಶ ಸಿಕ್ಕಿದಾಗ, ಸಜ್ಜನರೆಡನೆ ಕಲೆತು ಮಾತಾಡುತ್ತಿರುವನು. ಒಳ್ಳೇ ಸದಾ ಚಾರಸಂಪನ್ನರಾದವರು ಸಿಕ್ಕಿದಾಗ, ಅವರೊಡನೆ ಸೇರಿ ಅತಿಸೂಕ್ಷಗ ಳಾದ ಆಚಾರಧವ್ಯಗಳನ್ನು ವಿಚಾರಿಸುತ್ತಿರುವನು. ಜ್ಞಾನವೃದ್ಧರಾದವರು ಸಿಕ್ಕಿದಾಗ ಅವರೆಡನೆ ಕಲೆತು ವೇದಾ೦ತವಿಚಾರಗಳನ್ನು ಇಲ್ಲಿ ಸುತ್ತಿರು ವನು. ವಯೋವೃದ್ಧರೊಡನೆ ಕಲೆತು ಪರಂಪರಾಗತವಾದ ಪೂರೈಸಂಪ್ರ ದಾಯವಿಶೇಷಗಳನ್ನು ಕೇಳಿ ತಿಳಿಯುತ್ತಿರುವನು. ಸತ್ಸಹವಾಸವಿಲ್ಲದೆ ಒಂದು ನಿಮಿಷಮಾತ್ರವಾದರೂ ಆತನ ಮನಸ್ಸು ನಿಲ್ಲದು. ಆತನು ಅತಿಸೂಕ್ಷ್ಮ ವಾದ ಬುವಿಕಾಸವುಳ್ಳವನಾದುದರಿಂದ, ಸಮಸ್ತಜನಗಳನ್ನೂ ಸುಖಂ ಓರಿಸುವುದಕ್ಕೆ ಉಪಾಯವೇನೆಂದು ಯಾವಾಗಲೂ ಲೋಕರಕ್ಷಣಚಿಂತಾ ಪರನಾಗಿಯೇ ಇರುವನ, ಕಿವಿಗಿoದ ಆತನ ಮಾತುಗಳು ಯಾರ ಮನ ಸ್ಪನ್ನೂ ಆಕರ್ಷಿಸಸುವುವು. ಅತ್ಯಲ್ಪನಾದವನನ್ನೂ ಕೊಡ, ಸೌಲಭ್ಯದಿಂದ ತಾನೇ ಮಾತಾಡಿಸಿಕೊಂಡು ಹೋಗುವನು. ಅವನು ಆಡತಕ್ಕ ಮಾತುಗ ಳೆಲ್ಲವೂ ಸಜನಪ್ರಿಯವಾಗಿರುವುವು. ಆಿತವಿರೋಧಿಗಳನ್ನು ಹುಟ್ಟಡಗಿಸ ತಕ್ಕ ಮಹಾಪೀರವುಳ್ಳವನು. ಅಷ್ಟು ಸೀರವುಳ್ಳವನಾಗಿದ್ದರೂ, ತನ್ನ ವೀರವನ್ನು ನೋಡಿ ತಾನೇ ಹಿಗ್ಗುವವನಲ್ಲ. ಆತನು ಏಶೇಷವಿದ್ವತ್ಯ ವುಳ್ಳವನಾದುದರಿಂದ, ಆವೃತಾರವನ್ನು ಹೇಳುವ ಅಸತಾವ್ಯಗಳಿಗೆ ಎಂ ನಗೂ ಮನಸ್ಸು ಕೊಡುವವನು.ಯಾವಾಗಲೂ ಸುಳ್ಳಾಡಿದವನಲ್ಲ. ಜ್ಞಾನ ವೈದ್ಯರನ್ನೂ, ವಯೋವೃದ್ಧರನ್ನೂ , ತೀಲವೃದ್ಧರನ್ನೂ ಕಂಡಕಂಡ ಕಡೆಯ ಅತಿಪ್ರೀತಿಯಿಂದ ಮ ಸುವನು. ಪಂಡಿತಪಾಮರರೆಂಬ ತಾರತಮ್ಯವನ್ನಿ ಡದೆ ಸಮಸ್ತ ಪ್ರಜೆಗಳನ್ನೂ ಸಮಪ್ರೇಮದಿಂದ ರಂಜನೆಗೊಳಿಸುವನು. ಇದರಿಂದ ಪ್ರಜೆಗಳೆಲ್ಲರಿಗೂ ಅವನ ಪರಿಶ್ರವಾದ ವಿಶ್ವಾಸವಿರು ವದು. ಆತನು ಬಹಳ ದಯಾಳು. ಕೋಪವನ್ನು ಸಂಪೂವಾಗಿ ಸಿಗ್ರ ಹಿಸಿದವನು. ಬ್ರಾಹ್ಮಣರನ್ನು ಬಹುಮರಾದೆಯಿಂದ ಪೂಜಿಸುವನು. ಬಡವ ರಲ್ಲಿ ಬಹಳ ಮರುಕವುಳ್ಳವನು. ಆತನಿಗೆ ತಿಳಿಯದ ಧಸೂಕ್ಷವಾವುದೂ