ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«೧೩೨೨ ಶ್ರೀಮದ್ರಾಮಾಯಣವು [ಅವತಾರಿಕೆ' ನಿವೃತ್ತಾಂತದಿಂದ ನಮಶ್ಯಬ್ದಾರ್ಥವೂ ಸೂಚಿತವೆಂದು ಗ್ರಾಹ್ಯವು ಪೂರ ಕಾಂಡದಲ್ಲಿ ರಾಮಾಯಣಕಥಾವಿಸ್ಕತಿಗೆ ಬೀಜಭೂತವಾದ ಸೀತಾಪಹರ ಣವು ಪ್ರತಿಪಾದಿಸಲ್ಪಟ್ಟಿರುವುದು, ಈ ಕಾಂಡದಲ್ಲಿ ಆ ಸೀತಾಪ್ರಾಪ್ತಿಗೆ ಬೇಕಾದ ಸಹಾಯಸಂಗ್ರಹಣವೂ, ಶತ್ರುನಿರಸನಕ್ಕೆ ಬೇಕಾದ ಸೈನ್ಯ ಸಂಗ್ರಹವೂ ನಿರೂಪಿಸಲ್ಪಡುವುದು ಇದರಿಂದ ಧ್ವನಿತವಾಗುವ ಬೇರೊಂ ದು ವಾಸ್ತವಾಂಶವೇನೆಂದರೆ :- ಹಿಂದೆ ಆರಣ್ಯಕಾಂಡದಲ್ಲಿ ಮಾರೀಚವೃತ್ತಾಂತವೇ ಮೊದಲಾದು ವುಗಳಿಂದ, ಚೇತನನ ಉಜೀವನಪ್ರಕಾರಗಳು ನಿರೂಪಿಸಲ್ಪಟ್ಟಿರುವುವು ಅವುಗಳಲ್ಲಿ ಮಾರೀಚದರ್ಶನವೃತ್ತಾಂತದಿಂದ ಭಗವನ್ನಿತ್ಯಾನುಭವಕ್ಕೆ ಯೋಗ್ಯನಾದ ಚೇತನನಿಗೆ, ಅಪ್ರಾಪ್ಯವಾದ ವಿಷಯದಲ್ಲಿ ಆಸಕ್ತಿಯೂ,ಅ ದರಿಂದ ರಾವಣನೆಂಬ ಮಹಾಮೋಹವು ಆಕ್ರಮಿಸಿಕೊಳ್ಳುವುದೂ, ಜಟಾ ಯುವು ಎಷ್ಪ್ರಯತ್ನ ಮಾಡಿದರೂ ರಾವಣನ ಕೈಯಿಂದ ಸೀತೆಯನ್ನು ಬಿಡಿಸಲಾರದೆ ಹೋದನೆಂಬುದರಿಂದ, ಕೇವಲಕರಮಾತ್ರದಿಂದ ಸಂಸಾರ ವನ್ನು ಬಿಡಿಸುವುದು ಸಾಧ್ಯವಲ್ಲವೆಂಬುದೂ, ಸೀತೆಗೆ ಲಂಕಾಪ್ರವೇಶದಿಂದ ಜೀವಕ್ಕೆ ಸಾಂಸಾರಿಕಶರೀರಪ್ರವೇಶವೂ, ಏಕಾಕ್ಷಿ, ಏಕಕರ್ಣಿ, ಮೊದಲಾದ ವರ ಪೀಡನದಿಂದ ತಾಪತ್ರಯಗಳಿಗೆ ಸಿಕ್ಕಿ ಸಂಕಟಪಡುವುದೂ, ರಾಮನು ಅಲ್ಲಲ್ಲಿ ಹುಡುಕುತ್ತಿರುವನೆಂಬು೬ರಿಂದ, ಭಗವಂತನು ತಾನಾಗಿಯೇ ಚೇತ ನೋಜೀವನಕ್ಕಾಗಿ ಉಪಾಯಗಳನ್ನಾಲೋಚಿಸುತ್ತಿರುವನೆಂಬುದೂಸೂಚಿ ತವಾಗುವುವು ಇನ್ನು ಮೇಲೆ ಈ ಕಿಷಿಂಧಾಕಾಂಡದಲ್ಲಿ, ರಾಮನು ಹನು ಮಂತನ ಮೂಲಕವಾಗಿ ಸೀತಾನ್ವೇಷಣವನ್ನು ಮಾಡಿಸಿದುಬಾಗಿ ನಿರೂಪಿ ಸಲ್ಪಡುವುದರಿಂದ, ಭಗವಂತನು ಚೇತನಸಿಗೆ ತನ್ನಲ್ಲಿ ಭಕ್ತಿಯನ್ನು ಹುಟ್ಟಿಸಿ ಅವನನ್ನು ಜೀವಿಸುವುದಕ್ಕಾಗಿ ಆಚಾರಮುಖರಿಂದ ಪ್ರೇರಿಸುತ್ತಿರುವನೆಂ ದೂ ಧ್ವನಿತವಾಗುವುದು ಅದರಲ್ಲಿಯೂ ಪ್ರಥಮಸರ್ಗದಲ್ಲಿ ರಾಮನು ಪಂಪಾಸರೋವರಾದಿಸನ್ನಿವೇಶಗಳನ್ನು ನೋಡಿ ಸೀತೆಯನ್ನು ನೆನೆಸಿಕೊಂಡು ದುಃಖಿಸುವುದರಿಂದ 14 ಸ ಏಕಾಕೀ ನ ರಮತೇ” ಎಂಬ ಶ್ರತ್ಯನುಸಾರ