ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ಕೃಷ್ಣ ಪರಮಹಂಸರು ಹೇಳಿದ ಒಂದೊಂದು ವಿಷಯವನ್ನು ತೆಗೆದು ಕೊಂಡೂ ಒಂದೊಂದು ದೊಡ್ಡ ಗ್ರಂಥವನ್ನು ಬರೆಯಬಹುದೆಂದ ರ೦ತೆ. ಆಗ ಅವರು “ ಹಾಗೆ! ಎಲ್ಲಿ ನೋಡೋಣ; ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ ! ” ಎಂದರಂತೆ. ಆಗ ಸ್ವಾಮಿ ಗಳು - ಅದನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ತಕ್ಕ ಸಾಮರ್ಥ್ಯ ವಿರಬೇಕಷ್ಟೆ ! ” ಎ೦ದುಹೇಳಿ, ನಾರಾಯಣನು ಎಲ್ಲೆಲ್ಲಿಯೂ ಇದಾ ನೆ ಎಂದು ಬೋಧಿಸುವ “ ಆನೆಯೂ ನಾರಾಯಣ, ಮಾಹುತನೂ ನಾರಾಯಣ " ಎಂಬ ಕಥೆಯನ್ನು ಕುರಿತು ಹೇಳುವುದಕ್ಕೆ ಮೊದಲು ಮಾಡಿ, ದೈವಾಯತ್ತ ಪುರುಷಕಾರಗಳ ಪ್ರಸ್ತಾಪವನ್ನೆ, ಈ ವಿಚಾರ ವಾಗಿ ನಮ್ಮವರು ಮತ್ತು ಪರದೇಶದವರು ಬಹುಕಾಲದಿಂದಲೂ ಮಾಡುತ್ತಿರುವ ತರ್ಕ ವಿತರ್ಕ, ಆದರೂ ಯಾವಸಿದ್ಧಾಂತವೂ ಸರಿ ಯಾಗಿಲ್ಲದೆ ಶ್ರೀ ಶ್ರೀ ಪರಮಹಂಸರವರು ಹೇಳಿರುವ ಒಂದು ಅಪೂ ರ್ವವಾದ ಸಮಾಧಾನ ಮುಂತಾದ ವಿಷಯಗಳನ್ನು ಕುರಿತು ಮೂರುದಿವಸ ಒಂದೇ ಸಮನಾಗಿ ತಿಳಿಯಹೇಳಿದರಂತೆ. ಹೀಗೆ ಅವರ ವಾಕ್ಕುಗಳು ಅಷ್ಟು ಅರ್ಥಗರ್ಭಿತವಾಗಿರುತ್ತವೆ. ಪ್ರಾಯಶಃ ಪರಮಹಂಸರು ಹೊನ್ನು ಮಣ್ಣಗಳೆರಡೂ ಒಂದೇ ಎ೦ಬ ಬದಿ ಹುಟ್ಟುವುದಕ್ಕೆ ಮಾಡಿದ ಸಾಧನೆಯನ್ನು ಕೇಳದವರೇ ಇರಲಾರರು. ಹೀಗೆಯೇ ಪ್ರತಿಯೊಬ್ಬ ಸ್ತ್ರೀಯೂ ಜಗನ್ಮಾತೆಯ ರೂಪವೆಂಬ ಬುದ್ದಿ ಹುಟ್ಟುವಂತೆ ಸಾಧನೆ ಮಾಡಿ ಇವೆರಡರಲ್ಲಿಯೂ ತಾವು ಸಿದ್ಧರಾದ ಬಳಿಕ ಕೊನೆಯವರೆಗೂ “ ಕಾಮಿನೀಕಾಂಚನ ? ಗಳನ್ನು ತ್ಯಾಗಮಾಡಬೇಕೆಂದು ಸಾರಿ ಸಾರಿ ಹೇಳುತ್ತಿದ್ದರು. ಇದು ಎಷ್ಟು ಸಾಮಾನ್ಯವಾಗಿ ಕಾಣುತ್ತದೆ! ಆದರೆ ಇವುಗಳನ್ನು ಬಿಡ ಬೇಕೆಂದರೆ ಎಷ್ಟು ಕಷ್ಟ ! ಒಂದು ವೇಳೆ ನಾವು ಅವುಗಳನ್ನು ಬಿಟ್ಟ ರೂ ಅವು ನಮ್ಮನ್ನು ಬಿಡವು. ಬಾಯಲ್ಲಿ ಇವು ಬೇಡವೆಂದು ಹೇಳುವವರೇ ಅಪರೂಪ. ಆ೦ತರದಲ್ಲಿಯೂ ಇವುಗಳ ಮೇಲೆ ಆಶೆಯನ್ನು ಪೂರ್ತಿಯಾಗಿ ಬಿಡಬೇಕಾದರೆ ಎಲ್ಲರೂ ರಾಮಕೃಷ್ಣ