ವಿಷಯಕ್ಕೆ ಹೋಗು

ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ
೯೭

ಮಂದಟ್ಟು ಮಾಡಿಕೊಳ್ಳತಕ್ಕದು. ಇವುಗಳಿಂದ ಅಹಂಕಾರ ವೃದ್ಧಿಯಾಗಿ, ದೇಹಬುದ್ದಿ ಬಲವಾಗಿ, ಮನಸ್ಸು ಹೆಚ್ಚು ಆಸೆಗೊಳಗಾಗಿ, ಸ್ವಾರ್ಥ ಹೆಚ್ಚಿ, ಕಾಮಿನೀಕಾಂಚನಗಳಲ್ಲಿ ಆಸಕ್ತಿ ಹುಟ್ಟುವುದು. ಪರಲೋಕಸಾಧನೆಗೆ ಅಡಚಣೆಯಾಗುವದಷ್ಟೇ ಅಲ್ಲ. ಅದರಿಂದ ಕೇವಲ ಅವನತಿಯೇ ಉಂಟಾಗುವುದು. ಕ್ರಮೇಣ ಅವನಲ್ಲಿದ್ದ ಶಕ್ತಿ ಯೂ ವೆಚ್ಚವಾಗಿ ಹೋಗಿ “ ಇತೋಭ್ರಷ್ಟ ಸ್ತತೋ ಭ್ರಷ್ಟ: ” ಎ೦ಬಂತಾಗುವುದು.[] ಆದ್ದರಿಂದ ಈ ಸಿದ್ಧಿಗಳಿಗೆ ಗಮನಕೊಡದಂತೆಯೂ ಶ್ರದ್ಧೆ ಭಕ್ತಿ ಪವಿತ್ರತೆ ವೈರಾಗ್ಯ ಚಿತ್ತಸಂಯಮ ಇವು ಗಳನ್ನು ಪಡೆದುಕೊಳ್ಳುವಂತೆಯೂ ಎಲ್ಲರಿಗೂ ಹೇಳುತ್ತಿದ್ದರು. ಅವರ ಹತ್ತಿರಕ್ಕೆ ಇಂಥ ಶಕ್ತಿಯುಳ್ಳವರಾರಾದರೂ ಬಂದರೆ ಅವರ ಕ್ಷೇಮ ಲಾಭಕ್ಕಾಗಿ ಆಶಕ್ತಿಯನ್ನು ಕಿತ್ತುಕೊಂಡು ಬಿಡುತ್ತಿದ್ದರು. ಅಲ್ಲದೆ ನೀರಿನಮೇಲೆ ನಡೆಯುವುದು, ಬೆಂಕಿಯಮೇಲೆ ನಡೆಯುವುದು, ಒಂದು ಪ್ರಾಣಿಯನ್ನು ಸಾಯಿಸುವುದು, ಬದುಕಿಸುವುದು ಮುಂತಾದ ದೊಂಬರಾಟವನ್ನು ಆಡಬಹುದಾದ ಶಕ್ತಿಯಿಂದ ಬಂದ ಫಲ ವೇನು? ನೋಡತಕ್ಕವರಿಗೆ ಆಶ್ಚರ್ಯವೂ ಹೊಸವೂ ಹೊರತು ಮಾಡತಕ್ಕವನಿಗೆ ಏನೂ ಲಾಭವಿಲ್ಲ. ಯೋಗಶಕ್ತಿಯನ್ನು ಇದರಲ್ಲೆಲ್ಲಾ ವೆಚ್ಚ ಮಾಡತಕ್ಕವನು ಮೇರುಪರ್ವತವನ್ನೇ ಹೊತ್ತು ತರುವುದಕ್ಕೆ ಹೋಗಿ ಒಂದು ಕಬ್ಬಿಣದ ಮೊಳೆಯನ್ನು ಹಿಡಿದು ತಂದಂತಾಗುವುದು.

ವಿಚಾರಶೀಲವಾದ ಈಗಿನ ಕಾಲದಲ್ಲಿ ಶ್ರದ್ಧಾ ಭಕ್ತಿಗಳು ಬೇಕೆಂದು ಹೇಳಿದೊಡನೆಯೇ ಅನೇಕರು ಇದಕ್ಕೆ ಒಡಂಬಡುವುದಿಲ್ಲ. “ ಇದೆಲ್ಲಾ (Blind belief) ಕುರುಡುನಂಬಿಕೆ, ಮೂಢಭಕ್ತಿ; ಯಾರುಯಾರು ಏನು ಏನು ಹೇಳಿದರೆ ಅದನ್ನು ಶುದ್ದಗಗ್ಗರಹಾಗೆ ನಂಬುವುದಕ್ಕಾದೀತೆ ??” ಎನ್ನುವರು. ಅದನ್ನು ಸ್ವಲ್ಪ ವಿಚಾರ ಮಾಡಬೇಕು. ಮೊದಲು ಗಗ್ಗರಹಾಗೆ ನಂಬಬೇಕೆಂದು ಹೇಳಿದವ


  1. ತೇ ಸಮಾಧಾವು ಪಸರ್ಗಾವು ತಾನೇ ಸಿದ್ಧಯಃ--ಯೋ. ಸೂ.