ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಶ್ರೀ ರಾಮಕೃಷ್ಣ ಪರಮಹಂಸರ ರಾರು ? ವಿಚಾರಮಾಡಿಯೇ ನಂಬಬಹುದು. ಸ್ವಲ್ಪ ವಿಚಾರ ಬುದ್ದಿಯೂ ಬೇಕು. ಅದಕ್ಕಾಗಿಯೇ ವಿವೇಕಾನಂದಸ್ವಾಮಿಗಳು ಜ್ಞಾನಮಿಶ್ರವಾದ ಭಕ್ತಿಯೇ ಉತ್ತಮವೆಂದು ಬೋಧಿಸುತ್ತಿದ್ದರು. ರಾಮಕೃಷ್ಣ ಪರಮಹಂಸರೂ ಒಂದುದಿನ ತಮ್ಮ ಶಿಷ್ಯರಿಬ್ಬರು ಅಜಾಗರೂಕತೆಯಿಂದ ಏನೋ ಒಂದು ತಪ್ಪು ಮಾಡಿದ್ದನ್ನು ಕಂಡು “ ಭಕ್ತನಾಗಿರು ಎಂದರೆ ಗಗ್ಗ ನೇಕೆ ಆದೆಯೊ? ” ಎಂದು, ತಾವು ಹೇಗೆ ಮೂರುಹೊತ್ತೂ ದೇವರ ಮೇಲೆ ಮನಸ್ಸಿದ್ದರೂ ಸರ್ವಕಾರ್ಯ ಗಳಲ್ಲಿಯೂ ಜಾಗರೂಕರಾಗಿರುತ್ತಿದ್ದರೆಂದು ಬೋಧಿಸಿದರಂತೆ. ಈ ಸಂದರ್ಭದಲ್ಲಿಯೇ “ ಯಾವಾಗಲೂ ವಿಚಾರಮಾಡುತ್ತಿರಬೇಕು. ಯಾವುದು ಸತ್ಪದಾರ್ಥ, ಯಾವುದು ಅಸತ್ಪದಾರ್ಥ, ಯಾವುದು ನಿತ್ಯ, ಯಾವುದು ಅನಿತ್ಯ ಎಂದು ವಿಚಾರಮಾಡುತ್ತಾ, ಅನಿತ್ತ ವಾದುವುಗಳನ್ನು ತ್ಯಜಿಸುತ್ತ, ನಿತ್ಯವಾದುವುಗಳಮೇಲೆ ಮನಸ್ಸಿ ಡುತ್ತಾ ಬರಬೇಕು” ಎಂದು ಹೇಳುತ್ತಿದ್ದರು. ಆದ್ದರಿಂದ ವಿಚಾರ ಬುದ್ದಿಯೇನೋ ಆವಶ್ಯಕ. ಆದರೆ ಆಧ್ಯಾತ್ಮಿಕ ವಿಚಾರಗಳಲ್ಲಿ ಮಾತ್ರ ವಿಚಾರಮಾಡುತ್ತ ಹೋದರೆ ಕೊನೆಮೊದಲಿಲ್ಲದೇ ಹೋಗು ತದೆ. ಅನೇಕ ಸಂಶಯಗಳು ಹುಟ್ಟಿ ಅವು ಪರಿಹಾರವಾಗುವುದೇ ಇಲ್ಲ. “ ಮದುವೆಯಾದಹೊರತು ಹುಚ್ಚು ಬಿಡದು ಹುಚ್ಚು ಬಿಟ್ಟ ಹೊರತು ಮದುವೆಯಾಗದು' ಎಂಬುದೊಂದು ಗಾದೆಯುಂಟು. ಹಾಗೆ ಈ ಸಂಶಯ ನಿವಾರಣೆಯಾದ ಹೊರತು ನಮಗೆ ಶ್ರದ್ಧಾ ಭಕ್ತಿಗಳು ಹುಟ್ಟುವಹಾಗಿಲ್ಲ. ಶ್ರದ್ಧಾಭಕ್ತಿಗಳು ಹುಟ್ಟಿದಹೊರತು ಜ್ಞಾನ ಸಂಪಾದನೆಯಾಗುವಹಾಗಿಲ್ಲ. ಜ್ಞಾನವುಂಟಾಗಿ ಇಂದ್ರಿಯಾ ತೀತವಾದ ಪರಬ್ರಹ್ಮವಸ್ತುವಿನ ಅನುಭವವಾದ ಹೊರತು ಸಂಶಯ ಗಳು ದೂರವಾಗುವುದಿಲ್ಲ. * ಇದರ ಮೇಲೆ “ ಕುರುಡುನಂಬಿಕೆ ”

  • ಜ್ಞಾನಸ೦ಭಿನ್ನ ಸ೦ಶಯಂ-ಗೀತಾ,

ಭದ್ಯತೆ ಹೃದಯಗ್ರ೦ಥಿಸ್ಪಿದ೦ತೆ ಸರ್ವಸ೦ಶಯಾಃ 1 • ತಸ್ಮಿನ್ ದೃಷ್ಟೆ ಪರಾವರೆ.-ಮುಂಡಕೋಪನಿಷತ್ತು.