ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಪh R, 3 ೧೦೦ ಶ್ರೀ ರಾಮಕೃಷ್ಣ ಪರಮಹಂಸರ ಸ್ವವೇ ಇವರಲ್ಲಿ ವಿಶೇಷ. ಅವರು ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಸಾರಿ ಸಾರಿ ಹೇಳುತ್ತಿದ್ದರೋ ಹಾಗೆ ಯೇ ಸಾರಿಸಾರಿ “ ಎಲ್ಲಾ ಧರ್ಮವೂ ಸತ್ಯ ; ಎಷ್ಟು ಮತವೋ ಅಷ್ಟು ಪಥ ; ನಮ್ಮ ದೇವರು ಹೆಚ್ಚು ನಿಮ್ಮ ದೇವರು ಕಡಿಮೆ ಎಂದು ಕೀಳುಬುದ್ಧಿಯಿಂದ ಜಗಳವಾಡಬಾರದು, ಯಾರು ಯಾವ ಮಾರ್ಗವನ್ನು ಅನುಸರಿಸಿದ್ದರೆ ಆ ಮಾರ್ಗವನ್ನೇ ಅನುಸರಿಸಲಿ, ಅವರ ಮಾರ್ಗವನ್ನು ಕೆಡಿಸಬೇಡಿ, ಹಿಂದೂ ಮತದಲ್ಲಿಯೂ ದೈತಾ

  • ಯಾರಾದರೂ ಕಾಳಿ ಹೆಚ್ಚು- ಕೃಷ್ಣ ಹೆಚ್ಚು ಎ೦ದು ಜಗಳವಾಡು ತಿದ್ದದ್ದನ್ನು ಕಂಡರೆ ಪರಮಹ೦ಸ ರು " ಇದೇನೋ ನಿನ್ನ ಹೀನ ಬುದ್ದಿ ! ನಿನ್ನ ಇಷ್ಟ ದೇವತೆಯೇ ಕಾಳಿ ಕೃಷ್ಣ ಎಲ್ಲ ಆಗಿದ್ದಾನೆಂದು ತಿಳಿದುಕೊ೦ ಡಿ ರು. ಹಾಗೆ೦ದರೆ ನಿನ್ನ ಇಷ್ಟದೇವತೆಯನ್ನು ಬಿಟ್ಟು ಮತ್ತೊಂದನ್ನು ಪೂಜಿಸಬೇಕೆಂದು ಹೇಳಿದ್ದಲ್ಲ. ದ್ವೇಷ ಬುದ್ದಿಯನ್ನು ಬಿಟ್ಟು ಬಿಡಬೇಕೆ೦ ದರ್ಥ, ನಿನ್ನ ಇಷ್ಟದೇವತೆಯ ಕೃಷ್ಣನೂ, ಗೌರಾಂಗನೂ ಆಗಿದ್ದಾನೆ ಈ ಜ್ಞಾನವನ್ನು ಒಳಗೆ ನಿಶ್ಚಯಬುದ್ದಿ ಯಿ೦ದ ಇಟ್ಟು ಕೊಳ್ಳಬೇಕು. ನೋಡು ! ಹೆ೦ಗಸು ಗಂಡನ ಮನೆಗೆ ಹೋದರೆ, ಮಾನ, ಅತ್ತೆ, ಅತ್ತಿಗೆ, ಮೈ ದನ ಮು೦ತಾದವರೆಲ್ಲರಲ್ಲಿಯೂ ಮರ್ಯಾದೆಯಿ೦ದಲೂ, ಭಕ್ತಿಯಿಂದ ಯಥಾಯೋಗ್ಯವಾಗಿ ನಡೆದುಕೊಳ್ಳು ತ್ತಾಳೆ. ಆದರೆ ತನ್ನ ಮನಸ್ಸಿ ನಲ್ಲಿದ್ದದ್ದನ್ನೆಲ್ಲಾ ನಿಸ್ಸಂಕೋಚವಾಗಿ ಹೇಳುವುದು ಮಲಗುವುದು ಕೂರು ವುದು ಇದೆಲ್ಲ ಕೇವಲ ತನ್ನ ಗ೦ಡನ ಸ೦ಗಡ ಮಾತ್ರ. ತನ್ನ ಗ೦ಡ ಸಿ೦ದ ಅತ್ತೆ ಮಾವ ಮು೦ತಾದವರೆಲ್ಲರೂ ತನ್ನ ವರಾಗಿದ್ದಾರೆ೦ದು ಅವಳಿಗೆ ಗೊತ್ತಿ ರುತ್ತದೆ. ಅದರ ಹಾಗೆ ನಿನ್ನ ಇಷ್ಟ ದೇವತೆ ಯನ್ನು ಗ೦ಡನ ಹಾಗೆ ಸೇವಿಸು. ನಿನ್ನ ಇಷ್ಟದೇವತೆ ಯೊಡನೆ ಸಂಬಂಧವಿರುವದ್ದರಿಂದಲೇ ಅದರ ಇತರ ರೂಪಗಳೊಡನೆ ಸ೦ಬ೦ಧ ; ಅವುಗಳಲ್ಲೆಲ್ಲಾ ಏಕ ರೀತಿಯಾಗಿ ಶ್ರದ್ಧಾ ಭಕ್ತಿಯನ್ನು ಇಟ್ಟುಕೊಂಡಿರಬೇಕು. ಹೀಗೆ೦ದು ತಿಳಿದುಕೊ. ಹೀಗೆ ತಿಳಿದುಕೊ೦ಡು ದ್ವೇಷಬುದ್ದಿಯನ್ನು ದೂರಮಾಡು : ಗಾರೀ ಪ೦ಡಿ ತನು ಹೇಳುತ್ತಿದ್ದದ್ದೇನೆಂದರೆ “ ಕಾಳಿ ಮತ್ತು ಗೌರಾ೦ಗ ಇಬ್ಬರೂ ಒಂದೇ ಎಂದು ತಿಳಿದು ಬಿಟ್ಟರೆ ಆಗ ನಿಜವಾದ ಜ್ಞಾನವು ಉತ್ಪನ್ನವಾಯಿತೆಂದು ಹೇಳ ಬಹುದು - ಎ೦ದು ಹೇಳುತ್ತಿದ್ದರು.