ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ಗ್ರಹಣಮಾಡಿ ಈಶ್ವರ ಸಾಕ್ಷಾತ್ಕಾರವೇ ಮನುಷ್ಯನಿಗೆ ಮುಖ್ಯ ಲಕ್ಷ್ಮ ವಾಗಿರಬೇಕೆಂದೂ ಇದು ಪ್ರತಿಯೊಬ್ಬನಿಗೂ ಸಾಧ್ಯವೆಂದೂ ತೋರಿಸಿ ಈ ಲಕ್ಷವೂ ತಪ್ಪದಂತೆ ಕಾಪಾಡಿಕೊ೦ಡು ಒ೦ದಿದಾ ರೆ. ಎ೦ಥ ಸರ್ವೋತ್ತಮವಾದ ವಸ್ತುವಾದರೂ ಕಾಲಕ್ರಮದಲ್ಲಿ ಬದಲಾವಣೆಯನ್ನು ಹೊಂದಿ ಕೆಟ್ಟು ಹೋಗುವದು. ತಳತಳನೆ ಹೊಳೆಯುವ ಬೆಳ್ಳಿ, ಬಂಗಾರಗಳಾದರೂ ಬಹಳಕಾಲ ಹಾಗೇ ಬಿಟ್ಟರೆ ಮಲಿನ ವಾಗುವುವು. ಅಂಥದರಲ್ಲಿ ಕೊಳಕಾಗುವುದಕ್ಕೆ ಪ್ರಬಲ ವಾದ ಇತರ ಕಾರಣಗಳಿದ್ದರಂತೂ ಹೇಳಬೇಕಾಗಿಯೇ ಇಲ್ಲ. ಧರ್ಮದ ಸ್ಥಿತಿಯೂ ಹೀಗೆಯೇ, ಮಾಲಿನ್ಯಕ್ಕೆ ಇತರ ಯಾವ ಕಾರಣವಿಲ್ಲ ದಿದರೂ ಕಾಲಕ್ರಮದಲ್ಲಿ ಜನರು ಧರ್ಮದ ಸಾರವನ್ನು ಮರೆತು ಮುಖ್ಯವಾದದ್ದನ್ನು ತಾತ್ಕಾರಮಾಡಿ ಗೌಣವಾದದ ನೈಮುಖ್ಯವಾಗಿ ಮಾಡಿಕೊಂಡು, ಮೌಢ ದಲ್ಲಿ ಮುಳುಗಿ ಹೋಗುವರು. ಅದರಿಂದ ಧರ್ಮಗ್ಲಾನಿಯೂ ಅಧರ್ಮದ ಅನ್ನುತ್ತಾನವೂ ಉಂಟಾಗುವುವು. ಜನರಿಗೆ ನಾನಾವಿಧದಲ್ಲಿ ಮೊಗಸುತ್ತಾಗಿ ಎಲ್ಲೆಲ್ಲಿಯೂ ಅಶಾಂತಿಯೂ ಹಾಕಾಕಾರವೂ ಹುಟ್ಟುವುವು. ಆಗ ಈಶ್ವರನು ಅವತಾರಮಾಡಿ ಧರ್ಮಸಂಸ್ಥಾಪನೆಮಾಡಿ ಶಾಂತಿಯನ್ನು ನೆಲೆಗೊಳಿಸುವನು. ಆದರೆ ಕಾರಣವಿಲ್ಲದೆ ಕಾರ್ಯವಿರುವುದಿಲ್ಲ. ಅವತಾರಕ್ಕೆ ಆವಶ್ಯಕತೆ ಇಲ್ಲ ದಿದ್ದರೆ ಪರಮಾತ್ಮನೆಂದಿಗೂ ಅವತಾರಮಾಡುವುದಿಲ್ಲ. ಆವಶ್ಯಕತೆ ಇದ್ದರೆ ಎಂದಿಗೂ ಕಣ್ಣು ಮುಚ್ಚಿಕೊಂಡು ಸುಮ್ಮನೆ ಇರುವುದಿಲ್ಲ. ಶ್ರೀಕೃಷ್ಣ, ಬುದ್ಧ, ಶಂಕರಾಚಾರ ಮುಂತಾದವರು ಜನಿಸಿದ ಸಂದರ್ಭಗಳನ್ನೂ ಅವರ ಚರಿತ್ರೆಯನ್ನೂ ನೋಡಿದರೆ ಇದು ವಿಶದ ವಾಗುವುದು. ಮೇಲೆ ಹೇಳಿದ ಮೌಡ್ಯಕ್ಕೆ ನಮ್ಮ ಈಗಿನ ಸ್ಥಿತಿಯಿಂದ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಹುದು. ನಮಗೆ ಈಗ ಸಂಧ್ಯಾವಂದನೆಯು ನಿರರ್ಥಕವಾದ, ಉಚ್ಚಾರವನ್ನು ಮಾಡ ಲಾರದ, ಹಿರಿಯರು ಹೊರೆಸಿದ ಒಂದು ಭಾರವಾಗಿದೆ. ಅವರ