ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


ಮೊದಲನೆಯ ಅಧ್ಯಾಯ
ರಾಮಕೃಷ್ಣಪರಮಹಂಸರ ತಾಯಿತಂದೆಗಳು

ಬಂಗಾಳದೇಶದ ಬರ್ದನ್ರ ಡಿಸ್ಪಿಗೆ ಸೇರಿದ 'ಬೇರೆ' ಎಂಬ ಗ್ರಾಮದಲ್ಲಿ ಸುಮಾರು ನೂರೈವತ್ತು ವರ್ಷಗಳ ಹಿಂದೆ ಮಾಣಿಕರಾಮಚಟೋಪಾಧ್ಯಾಯನೆಂಬ ಒಬ್ಬ ವೈದಿಕ ಬ್ರಾಹ್ಮಣ ಸಿದನು. ಆತನಿಗೆ ಖುಧಿರಾನು, ನಿಧಿರಾಮ, ಕಸೈ, ರಾಮ ಎಂಬ ಮೂರು ಜನ ಗಂಡುಮಕ್ಕಳ, ರಾಮಶಿಲಾ ಎ೦ಬ ಒಬ್ಬ ಹೆಣ್ಣು ಮಗ ಇದರು. ಹಿರಿಯಮಗನಾದ ಖುದಿರಾಮನು ಕ್ರಿ. ಶ. ೧೬೭೫ ರಲ್ಲಿ ಹುಟ್ಟಿ ದನು. ಆತನು ಜೀವನೋಪಾಯಕ್ಕೆ ಅನು ಕೂಲಿನಾದ ಯಾವುದಾದರೂ ಲೌಕಿಕವಿದ್ಯೆಯನ್ನು ಕಲಿತಿದ್ದನೋ ಇಲ್ಲವೋ ತಿಳಿಯದು. ಆದರೆ ಶಾಸ್ತ್ರದಲ್ಲಿ ಸಾಹ್ಮಣರಿಗೆ ಸ್ವ ಭಾವಸಿದ ವಾಗಿ ಇರಬೇಕೆಂದು ಹೇಳಿರುವ ಸತ್ಯ ನಿನ್ನೆ, ತೃಪ್ತಿ, ತಾಳ್ಮೆ, ವೈರಾಗ್ಯ ಮುಂತಾದ ಗುಣಗಳನ್ನು ವಿಧಾತನು ಆತನಿಗೆ ಯಥೇಚ್ಛವಾಗಿ ಕೊಟ್ಟಿದನು. ಪ್ರತಿನಿತ್ಯವೂ ಸಂಧ್ಯಾವಂದನಾದಿ. ನಿತ್ಯಕರ್ಮಗಳನ್ನು ಮುಗಿಸಿಕೊಂಡು ಮನೆದೇವರಾದ ಶ್ರೀರಾಮ ಚಂದ್ರನನ್ನು ಭಕ್ತಿಪೂರ್ವಕವಾಗಿ ಪೂಜೆಮಾಡಿದಹೊರತು ಒಂದು ತೊಟ್ಟು ನೀರನ್ನು ಸಹ ಕುಡಿಯುತ್ತಿರಲಿಲ್ಲ. ಶೂದ್ರರ ಮನೆಯಲ್ಲಿ ದಾನವನ್ನು ತೆಗೆದುಕೊಳ್ಳುತ್ತಿರಲಿಲ್ಲ. ತೂದ್ರರ ಮನೆಯಲ್ಲಿ ಪೌರೋಹಿತ್ಯ, ಪೂಜೆಮುಂತಾದವನ್ನು ಮಾಡಿಸುತ್ತಿದ್ದ ಬ್ರಾಹ್ಮಣರ ಮನೆಗೆ ಊಟ ಉಪಚಾರಗಳಿಗೆ ಹೋಗುತ್ತಿರಲಿಲ್ಲ. ಈ ವಿಧ ವಾದ ನಿಷೆ ಮತ್ತು ಸದಾಚಾರವನ್ನು ನೋಡಿ ಆಗ್ರಾಮದವ ರೆಲ್ಲರೂ ಅವನಲ್ಲಿ ವಿಶೇಷ ಭಕ್ತಿಯನ್ನೂ ಗೌರವವನ್ನೂ ಇಟ್ಟು ಕೊ೦ಡಿದ್ದರು.