ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ ದಿ೦ದ ಬ೦ದ ಭಯಂಕರವಾದ ಧರ್ಮಗ್ಲಾನಿಯನ್ನು ನಿಗ್ರಹ ಮಾಡಿ ಶಾಂತಿಯನ್ನು ನೆಲೆಗೊಳಿಸುವರಾರು ? ಈ ದುಸ್ಥಿತಿಯು ಆ ಕರುಣಾಸಾಗರನಾದ ಭಗವಂತನ ಕಣ್ಣಿಗೆ ಬೀಳಲಾರದೇ? ಅವೆ ನನ್ನು ಬಿಟ್ಟರೆ ಇದು ಮತ್ತಾರಿಂದ ತಾನೇ ಸಾಧ್ಯ? ಆಯಾ ಕಾಲಕ್ಕೆ ತಕ್ಕಂತೆ ಮನುಷ್ಯ ರೂಪದಿಂದ ಅವತಾರಮಾಡಿ ಗೋಳ ಡುತ್ತಿರುವ ಪ್ರಾಣಿಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಉದ್ದಾರ ಮಾಡುವನು ಭಗವಂತನಲ್ಲವೇ ! ಇಲ್ಲದಿದ್ದರೆ ಶ್ರೀ ಕೃಷ್ಣನು “ ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ : ಅಭ್ಯುತ್ಥಾನವು ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ" ಎಂದು ಹೇಳಿರುವ ಮಾ ತುಸುಳೆ ? ಭಗವಾಕ್ಯವೂ ಎಂದಿಗೂ ಸುಳ್ಳಾಗದು. ಆದ ರಂತೆ ಈಗಲೂ ಭಾರತೇಯಧರ್ಮವು ಸಂಪೂರ್ಣವಾಗಿ ಗ್ಲಾಸಿ ಹೊಂದಲು ಮೊದಲು ಮಾಡಿದೊಡನೆಯೇ ಈಶ್ವರನು ಧರ್ಮೋ ದಾರಕ್ಕಾಗಿ ಯಾವಣ್ಯ ಸ್ವರುಷನಾಗಿ ಅವತರಿಸಿದನೋ ಆ ಮಹಾತ್ಮನ ಪವಿತ್ರ ಚರಿತ್ರೆಯನ್ನು ಭಕ್ತಿಯಿಂದ ಓದೋಣ. C .