ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ

ದಿ೦ದ ಬ೦ದ ಭಯಂಕರವಾದ ಧರ್ಮಗ್ಲಾನಿಯನ್ನು ನಿಗ್ರಹಮಾಡಿ ಶಾಂತಿಯನ್ನು ನೆಲೆಗೊಳಿಸುವರಾರು ? ಈ ದುಸ್ಥಿತಿಯು ಆ ಕರುಣಾಸಾಗರನಾದ ಭಗವಂತನ ಕಣ್ಣಿಗೆ ಬೀಳಲಾರದೇ? ಅವನನ್ನು ಬಿಟ್ಟರೆ ಇದು ಮತ್ತಾರಿಂದ ತಾನೇ ಸಾಧ್ಯ? ಆಯಾ ಕಾಲಕ್ಕೆ ತಕ್ಕಂತೆ ಮನುಷ್ಯ ರೂಪದಿಂದ ಅವತಾರಮಾಡಿ ಗೋಳಾಡುತ್ತಿರುವ ಪ್ರಾಣಿಗಳನ್ನು ಕೈ ಹಿಡಿದು ಮೇಲಕ್ಕೆತ್ತಿ ಉದ್ದಾರ ಮಾಡುವನು ಭಗವಂತನಲ್ಲವೇ! ಇಲ್ಲದಿದ್ದರೆ ಶ್ರೀ ಕೃಷ್ಣನು "ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ : ಅಭ್ಯುತ್ಥಾನವು ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ" ಎಂದು ಹೇಳಿರುವ ಮಾತು ಸುಳ್ಳೇ? ಭಗವಾಕ್ಯವೂ ಎಂದಿಗೂ ಸುಳ್ಳಾಗದು. ಅದರಂತೆ ಈಗಲೂ ಭಾರತೇಯಧರ್ಮವು ಸಂಪೂರ್ಣವಾಗಿ ಗ್ಲಾನಿ ಹೊಂದಲು ಮೊದಲು ಮಾಡಿದೊಡನೆಯೇ ಈಶ್ವರನು ಧರ್ಮೋದ್ಧಾರಕ್ಕಾಗಿ ಯಾವಪುಣ್ಯ ಪುರುಷನಾಗಿ ಅವತರಿಸಿದನೋ ಆ ಮಹಾತ್ಮನ ಪವಿತ್ರ ಚರಿತ್ರೆಯನ್ನು ಭಕ್ತಿಯಿಂದ ಓದೋಣ.