ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೧೮ ಶ್ರೀ ರಾಮಕೃಷ್ಣ ಪರಮಹಂಸರ ಗಳಲ್ಲಿಯೂ ಭಕ್ತಿ ಪುರಸ್ಸರವಾದ ಈಶ್ವರ ಪೂಜೆಯೇ ಮೋಕ್ಷವನ್ನು ಪಡೆಯುವುದಕ್ಕೆ ಸುಲಭವಾದ ಮಾರ್ಗವೆಂದು ಹೇಳಿದೆ. ಇದಕ್ಕೆ ಸಾಮಾನ್ಯವಾಗಿ ಯಾರೂ ಆಕ್ಷೇಪ ಮಾಡುವುದಿಲ್ಲ. ಆದರೆ ಇವೇ ಧರ್ಮ ಗ್ರಂಥಗಳೇ ಅವತಾರ ಪುರುಷರ ಜನಕ ಜನನಿಯರಿಗೆ ದಿವ್ಯ ದರ್ಶನ ಮತ್ತು ಅನುಭವಗಳಾದುವೆಂದು ಏಕ ಕಂಠದಿಂದ ಹೇಳು ತ್ತವೆ. ಇದನ್ನು ಮಾತ್ರ ಸಾಮಾನ್ಯವಾಗಿ ಯಾರೂ ನಂಬುವುದಿಲ್ಲ. ಏಕೆಂದರೆ, ಇವೆಲ್ಲಾ ಜನಸಾಮಾನ್ಯದ ಅನುಭವಕ್ಕೆ ಮಾರಿದ್ದಾಗಿವೆ. ಆದರೆ ನಮ್ಮ ಅನುಭವಕ್ಕೆ ಮಾರಿದುವುಗಳನ್ನೆಲ್ಲಾ ನಾವು ಶುದ. ಸುಳ್ಳೆಂದು ಹೇಳುವುದು ಅಸಂಗತ, ಆತ್ಮ, ಮುಕ್ತಿ, ಈಶ್ವರ ಮುಂ ತಾದ ಆಧ್ಯಾತ್ಮಿಕ ವಿಚಾರಗಳನ್ನು ನಾವೇ ಅನುಭವಮಾಡಿದ ಹೊರತು ಎಂದೂ ಪೂರ್ಣವಾಗಿ ನಂಬುವುದಕ್ಕಾಗುವುದಿಲ್ಲ. ಹೀಗೆಂದು ಸಾರ ಲೌಕಿಕ ವಿಷಯಗಳನ್ನು ಬಿಟ್ಟು ಬಿಡಲಾಗದು. ಇದರ ನಿಜಸ್ಥಿತಿ ಯನ್ನು ತಿಳಿಯಬೇಕಾದರೆ ಶ್ರದ್ಧೆ ವಹಿಸಿ ಅವುಗಳ ಸಾಧಕ ಬಾಧಕ ಗಳನ್ನೆಲ್ಲಾ ಸಂಗ್ರಹಿಸಿ ನಿಷ್ಪಕ್ಷಪಾತವಾಗಿ ವಿಚಾರಮಾಡಿ, ಆಮೇಲೆ ಬೇಕಾದರೆ ಅವುಗಳನ್ನು ಒಪ್ಪಬಹುದು, ಬಿಟ್ಟರೆ ಬಿಡಬಹುದು. ಅದು ಹೇಗಾದರೂ ಇರಲಿ. ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆಯಲ್ಲಿಯೂ ಈ ಸಂಗತಿಗಳು ನಂಬುಗೆಗೆ ಅರ್ಹರಾದ ಜನ ರಿಂದ ತಿಳಿಯಬಂದಿರುವುದರಿಂದ ಅವುಗಳನ್ನು ಇಲ್ಲಿ ಬರೆದಿದ್ದೇವೆ.