'''ಎರಡನೆಯ ಅಧ್ಯಾಯ.''' [[:ವರ್ಗ:|]]
ಚಂದ್ರಾದೇವಿಗೆ ನವಮಾಸತುಂಬಿತು. ಒಂದುದಿನ ಬೆಳಿಗ್ಗೆ ದೇಹದಲ್ಲಿ ಅಶಕ್ತಿ ತೋರಿ ಪ್ರಸವವೇದನೆಯ ಚಿಹ್ನೆಗಳು ಕಂಡುಬಂದುವು. ಆಗ ಆಕೆಯು ಖುದಿರಾಮನಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿ "ಮನೆಯಲ್ಲಿ ಮತ್ತೊಬ್ಬರೂ ಇಲ್ಲ; ನೀನು ಈಗ ಹೆತ್ತರೆ ಇಂದು ರಘುವೀರನ ಪೂಜೆ ನಿಂತುಹೋಗುತ್ತದೆಯಲ್ಲ, ಏನುಮಾಡೋಣ ?" ಎಂದು ಕೇಳಿದಳು. ಖುದಿರಾಮನು ಅದಕ್ಕೆ 'ನಾವೇಕೆ ಯೋಚಿಸಬೇಕು? ನಿನ್ನ ಹೊಟ್ಟೆಯಲ್ಲಿ ಹುಟ್ಟುವ ಮಹಾಪುರುಷನು ರಘುವೀರನ ಪೂಜೆಗೆ ನಿಪ್ಪವನ್ನು ಎಂದಿಗೂ ಉಂಟುಮಾಡುವುದಿಲ್ಲ ಈದಿನ ಎಂದಿನಂತೆ ರಘುವೀರನ ಸೇವೆಯನ್ನು ಮಾಡು. ನಾಳೆ ಇನ್ನೇನಾದರೂ ಏರ್ಪಾಡನ್ನು ಮಾಡೋಣ. ಸಾಯಂಕಾಲಕ್ಕೆ ಧನಿಯನ್ನು ಕರೆದು ಇಲ್ಲಿಯೇ ಮಲಗಿರುಹಾಗೆ ಹೇಳೋಣ' ಎಂದು ಹೇಳಿದನು. ಈ ಮಾತನ್ನು ಕೇಳಿ ಚಂದ್ರಾದೇವಿಗೆ ದೇಹದಲ್ಲಿ ಬಲಬಂದಂತಾಗಿ ಮತ್ತೆ ಮನೆ ಕೆಲಸಗಳನ್ನು ಮಾಡತೊಡಗಿದಳು. ರಘುವೀರಸಿಗೆ ಮಧ್ಯಾಹ್ನವೂ ಸಾಯಂಕಾಲವೂ ನಡೆಯಬೇಕಾದ ಪೂಜೋಪಚಾರಗಳಿಲ್ಲಾ ಕ್ರಮವಾಗಿ ನಡೆದುವು. ರಾತ್ರಿಯ ಊಟವಾದಮೇಲೆ ಖುದಿರಾಮನು ಹೋಗಿ ಧನಿ[೧]ಯನ್ನು ಕರೆದುಕೊಂಡು ಬಂದನು. ಮರುದಿನ ಸೂರ್ಯೋ
- ↑ ಅವರ ನೆರೆಯಲ್ಲಿ ಪರಿಚಿತಳಾಗಿದ್ದ ಒಬ್ಬ ಕಮ್ಮಾರ ಜಾತಿಯ ಹೆಂಗಸು.