ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೫೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

೪೨ ಶ್ರೀ ರಾಮಕೃಷ್ಣ ಪರಮಹಂಸರ ಒಂದುದಿನ ಪರಮಹಂಸರೂ ಹೃದಯನೂ ದೇವಸ್ಥಾನದ ಹತ್ತಿರ ತಿರುಗಾಡುತ್ತಿದರು. ಮಧುರಾನಾಥನು ದೇವರದರ್ಶನ ಮಾಡಿಕೊಂಡು ಬರುತ್ತ ಪರಮಹಂಸರನ್ನು ನೋಡಿ, ಅವರನ್ನು ಕರೆದುಕೊಂಡು ಬರುವಹಾಗೆ ತನ್ನ ಸೇವಕನೊಬ್ಬನನ್ನು ಕಳುಹಿ ಸಿದನು. ಮಧುರನು ಕಣ್ಣಿಗೆ ಬಿದ್ದ ಒಡನೆಯೇ ಅವರು ಆ ಜಾಗ ವನ್ನೇ ಬಿಟ್ಟು ಹೊರಟು ಹೋಗುತ್ತಿದ್ದರು. ಅಷ್ಟರಲ್ಲಿಯೇ ಮಧುರಾ ನಾಥನ ಸೇವಕನು ಬಂದು " ಯಜಮಾನರು ತಮ್ಮನ್ನು ಕರೆಯು ತಾರೆ ” ಎಂದು ಹೇಳಿದನು. ಪರಮಹಂಸರು ಹೋಗಲು ಹಿಂಜರಿ ಯುತ್ತ ನಿಂತುಬಿಟ್ಟಿದ್ದನ್ನು ಕಂಡು, ಹೃದಯ:--- ಮಾನಾ, ಯಾಕೆ ಹೀಗೆ ಹಿಂದು ಮುಂದು ನೋಡುತಿ? ಪರನು:- ಹೋಯಿತು ಅ೦ದರೆ ಇಲ್ಲೇ ಇರು ಅಂತ ಹೇಳು ತಾನೆ. ಚಾಕರಿಗೆ ಸೇರಿಕೊ ಅಂತಾನೆ. ಹೃದಯ: -ಅದರಿಂದ ದೋಷವೇನು? ಇಂಥ ಸ್ಥಳದಲ್ಲಿ ಮಹದಾಶ್ರಯದಲ್ಲಿ ನೌಕರಿಗೆ ಸೇರುವುದು ಒಳ್ಳೆದೇ ಹೊರತು ಕೆಟ್ಟದ್ದೇನೂ ಅಲ್ಲ. ಇದಕ್ಕೇಕೆ ಹಿಂದು ಮುಂದು ನೋಡಬೇಕು ? ಪರಮ:-ಇಲ್ಲಿ ಸುಮ್ಮನೆ ಚಾಕರಿಯಿಂದ ಕಟ್ಟುಬಿದ್ದಿರು ವುದಕ್ಕೆ ನನಗೆ ಮನಸ್ಸಿಲ್ಲ. ಪೂಜೇಕೆಲಸಕ್ಕೆ ಒಪ್ಪಿಕೊಂಡರೆ ಆಭರಣಗಳ ಜವಾಬ್ದಾರಿ ಹೊತ್ತು ಕೋಬೇಕು, ಅದು ಮಹಾ ಹಂಗಿನ ಕೆಲಸ, ಅದು ನನ್ನಿಂದ ಸಾಧ್ಯವಲ್ಲ. ಆ ಭಾರ ನೀನು ಹೊತ್ತು ಕೊಳ್ಳುವಹಾಗಿದ್ದರೆ ನಾನು ಪೂಜೆ ಮಾಡುವುದಕ್ಕೆ ಅಡ್ಡಿಯಿಲ್ಲ. ಹೃದಯನು ಚಾಕರಿಗಾಗಿಯೇ ಬಂದಿದ್ದರಿಂದ ಅದಕ್ಕೆ AL L - 1 - - - - - -

  1. ಹೃದಯ ರಾಮಮುಖ್ಯೋಪಾಧ್ಯಾಯ, ಪರಮಹ೦ಸ ರ ಸೋದ ರತ್ತೆಯ ಮಗಳ ಮಗ; ಏನಾದರೂ ಒಂದು ನೌಕರಿಯನ್ನು ಸಂಪಾದಿಸ ಬೇಕೆಂದು ದಕ್ಷಿಣೇಶ್ವರಕ್ಕೆ ಬಂದಿದ್ದನು.