ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ೪೩ ಕೂಡಲೇ ಸಮ್ಮತಿಸಿದನು. ಇಷ್ಟಾದಮೇಲೆ ಅವರು ಮಧುರಾನಾಥನ ಹತ್ತಿರಕ್ಕೆ ಹೋದರು. ಎಲ್ಲವೂ ಹಿಂದೆ ಯೋಚಿಸಿದ್ದಂತೆಯೇ ಆ ಯಿತು. ಮಧುರಾನಾಥನು ಬಲವಂತಮಾಡಿ ಕೆಲಸಕ್ಕೆ ಸೇರ ಬೇಕೆಂದು ಹೇಳಿದನು. ಪರಮಹಂಸರು ತಮ್ಮ ಅಭಿಪ್ರಾಯವನ್ನು ಸೂಚಿಸಿದರು. ಮಧುರನೂ ಅದಕ್ಕೆ ಒಪ್ಪಿ ಪರಮಹಂಸರಿಗೆ ದೇವ ನಾ ನದಲ್ಲಿ ಅಲಂಕಾರ ಮಾಡುವ ಕೆಲಸವನ್ನೂ ಹೃದಯನಿಗೆ ಸರಿ ಚಾರಿಕೆಯ ಕೆಲಸವನ್ನೂ ಗೊತ್ತು ಮಾಡಿದನು. ಹೃದಯನು ಸದಾ ಪರಮಹಂಸರ ಜೊತೆಯಲ್ಲಿಯೇ ಇರು ತಿದ್ದನು. ಇಬ್ಬರೂ ಒಟ್ಟಿಗೆ ಏಳುವರು. ಒಟ್ಟಿಗೆ ಸ್ನಾನಮಾಡು ವರು: ಜೊತೆಯಾಗಿ ತಿರುಗಾಡುವರು. ಹೀಗಿದ್ದರೂ ಹೃದಯನು ರಾಮಕುಮಾರನಿಗೆ ಏನಾದರೂ ಸಹಾಯಮಾಡುವುದಕ್ಕೆ ಹೋ ವಾಗ, ಮಧ್ಯಾಹ್ನ ಊಟವಾದಮೇಲೆ ಮಲಗಿದ್ದಾಗ, ಅಥವಾ ನಾಯಂಕಾಲದಲ್ಲಿ ದೇವಸ್ಥಾನಕ್ಕೆ ಮಂಗಳಾರತಿಗೆ ಹೋಗಿದ್ದಾಗ ಪರಮಹಂಸರು ಅವನ ಜೊತೆಯನ್ನು ತಪ್ಪಿಸಿಕೊಂಡು ಹೋಗಿ ಸ್ವಲ್ಪ ಹೊತ್ತು ಎಲ್ಲಿಯೋ ಮಾಯವಾಗುತ್ತಿದ್ದರು. ಎಷ್ಟು ಹುಡುಕಿದರೂ ಸಿಕ್ಕುತ್ತಿರಲಿಲ್ಲ. ಒಂದೆರಡು ಘಂಟೆಯಾದ ಮೇಲೆ ಎಲ್ಲಿಂದಲೋ ಹಿಂದಿರುಗಿ ಬರುತ್ತಿದ್ದರು. ಈ ಎಲ್ಲಿ ಹೋಗಿದ್ದೆ ?” ಎಂದು ಕೇಳಿದರೆ * ಎಲ್ಲೂ ಇಲ್ಲ. ಇಲ್ಲಿಇದೆ” ಎಂದು ಹೇಳುತ್ತಿದ್ದರು. ಹೃದಯನು ಪತ್ತೆ ಮಾಡಬೇಕೆಂದು ಹೊರಟು ಒಂದುದಿನ ಅವರು ಪಂಚ ನಟ ಯ ಕಡೆಯಿಂದ ಬರುತ್ತಿದ್ದದ್ದನ್ನು ಕಂಡು ಶೌಚಕ್ಕೆ ಹೋಗಿದ್ದಾ ರೆಂದುಕೊಂಡು ಸುಮ್ಮನಾದನು. ರಾಮಕುಮಾರನಿಗೆ ತಮ್ಮನ ಸ್ಥಿತಿಯನ್ನು ನೋಡಿ ಚಿಂತೆ ಹತ್ತಿತು. ಏಕೆಂದರೆ ಪರಮಹಂಸರು ಯಾವಾಗಲೂ ನಿರ್ಜನ ಸ್ಥಳ ಪ್ರಿಯರಾಗಿಯೂ ಸಂಸಾರ ವಿಚಾರಗಳಲ್ಲಿ ಉದಾಸೀನರಾಗಿ ಯೂ ಇದ್ದರು. ಬೆಳಗ್ಗೆ, ಸಂಜೆ, ಯಾವಾಗೆಂದರಾವಾಗ ದೇವ

  • ದಕ್ಷಿಣೇಶ್ವರದ ಹತ್ತಿರದಲ್ಲಿದ್ದ ಒ೦ದುತೋಪು.