ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೬೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೪೪
ಶ್ರೀ ರಾಮಕೃಷ್ಣ ಪರಮಹಂಸರ

ಸ್ಥಾನದಿಂದ ದೂರಹೋಗಿ ಗಂಗಾತೀರದಲ್ಲಿ ತಿರುಗಾಡುತ್ತಲೋ ಪಂಚವಟಿಯಲ್ಲಿ ಅಥವಾ ಅದರ ಹತ್ತಿರವಿದ್ದ ಕಾಡಿನಲ್ಲಿ ಕುಳಿತುಕೊಂಡೋ ಇರುತ್ತಿದ್ದರು. ತನಗೋ ವಯಸ್ಸಾಗುತ್ತ ಬಂದಿತ್ತು. ತಾನು ಹೋದರೆ ಸಂಸಾರ ನಡೆಸುವವರಾರು ? ಹೇಗಾದರೂ ಗದಾಧರನು ಎರಡು ಕಾಸು ಸಂಪಾದಿಸುವಂತಾಗಿ ಸಂಸಾರ ನಡೆಸುವ ಹಾಗಾದರೆ ತಾನು ನಿಶ್ಚಿಂತೆ ಯಾಗಿರಬಹುದು ಎಂದು ಅಂದುಕೊಳ್ಳುತ್ತಿದ್ದನು. ಈಗ ಮಧುರಾನಾಥನ ಬಲವಂತದಿಂದ ತಮ್ಮನು ನೌಕರಿಗೆ ಸೇರಲು ರಾಮಕುಮಾರನಿಗೆ ಚಿಂತೆಯು ಕಡಿಮೆಯಾಗಿ, ಅವನಿಗೆ ಚಂಡೀಪಾಠ, ಕಾಳಿಕಾಪೂಜೆಯ ಕ್ರಮ ಮುಂತಾದುವುಗಳನ್ನು ಕಲಿಸುತ್ತ ಬಂದನು. ಪರಮಹಂಸರೂ ಇವೆಲ್ಲವುಗಳನ್ನೂ ಬಲುಬೇಗ ಕಲಿತರು; ಮತ್ತು ಶಕ್ತಿ ದೀಕ್ಷೆಯನ್ನು ತೆಗೆದುಕೊಳ್ಳದಿದ್ದರೆ ದೇವಿಯಪೂಜೆಯು ಪ್ರಶಸ್ತವಾಗುವುದಿಲ್ಲವೆಂದಂದುಕೊಂಡು ಕೇನೋರಾಮಚಟ್ಟೋಪಾಧ್ಯಾಯನೆಂಬ ಪ್ರಸಿದ್ಧ ಶಕ್ತಿ ಸಾಧಕನಿಂದ ಶಕ್ತಿಮಂತ್ರವನ್ನು ಉಪದೇಶ ಮಾಡಿಸಿಕೊಂಡರು.

ಪರಮಹಂಸರು ಅಣ್ಣನಿಗೆ ಪೂಜೆಯ ಕೆಲಸದಲ್ಲಿ ಸಹಾಯಕರಾಗಿ ಬಂದ ಕೆಲವು ದಿನಗಳಮೇಲೆ ಅದೇ ದೇವಸ್ಥಾನದಲ್ಲಿದ್ದ ರಾಧಾಗೋವಿಂದದೇವರ ಅರ್ಚಕನು ಗೋವಿಂದದೇವರನ್ನು ಎತ್ತಿ ಹಾಕಿ ಭಿನ್ನಮಾಡಿದ ತಪ್ಪಿಗಾಗಿ ಆ ಕೆಲಸದಿಂದ ನಿವೃತ್ತನಾದನು. ಪರಮಹಂಸರು ಆತನ ಸ್ಥಾನದಲ್ಲಿ ನಿಯಮಿಸಲ್ಪಟ್ಟರು. ರಾಮಕುಮಾರನು ತನಗೆ ವಯಸ್ಸಾಗಿದ್ದದ್ದರಿಂದಲೋ ದೇಹ ಸ್ಥಿತಿಯು ನೆಟ್ಟಗಿಲ್ಲದ್ದರಿಂದಲೋ ಅಥವಾ ತಮ್ಮನಿಗೆ ಅಭ್ಯಾಸವಾಗಲಿಯೆಂಬ ಅಭಿಪ್ರಾಯದಿಂದಲೋ ಆಗಾಗ ಪರಮಹಂಸರನ್ನು ದೇವೀಪೂಜೆಗೆ ನಿಯಮಿಸಿ ತಾನು ರಾಧಾಗೋವಿಂದನ ಪೂಜೆಗೆ ಹೋಗುತ್ತಿದ್ದನು. ದೇವೀ ಪೂಜೆಗೆ ಬೇಕಾದಷ್ಟು ದೇಹಶಕ್ತಿಯು ರಾಮಕುಮಾರನಿಗೆ ಇಲ್ಲವೆಂದು ತಿಳಿದು ಮಧುರನು ರಾಣಿಗೆ ಹೇಳಿ? ರಾಮಕುಮಾರನು ರಾಧಾಗೋವಿಂದನನ್ನೂ ಪರಮಹಂಸರು ಕಾಳಿ