ಈ ಪುಟವನ್ನು ಪರಿಶೀಲಿಸಲಾಗಿದೆ
೪೫
ಚರಿತ್ರೆ
ದೇವಿಯನ್ನೂ ಪೂಜೆಮಾಡಬೇಕೆಂದು ವ್ಯವಸ್ಥೆ ಮಾಡಿದನು. ರಾಮ ಕುಮಾರನಿಗೂ ಇದರಿಂದ ಸಂತೋಷವಾಗಿ ತಾನೇ ನಿಂತುಕೊಂಡು ಪೂಜೆ ಪುರಸ್ಕಾರಗಳ ವಿಧಾನಗಳನ್ನೆಲ್ಲ ತಮ್ಮನಿಗೆ ಹೇಳಿಕೊಟ್ಟನು. ಇದೆಲ್ಲ ವ್ಯವಸ್ಥೆಯಾದಮೇಲೆ ರಾಮಕುಮಾರನು, ರಾಧಾಗೋ ವಿಂದನ ಪೂಜೆಗೆ ಹೃದಯನನ್ನು ನಿಲ್ಲಿಸಿ ಒಂದುಸಾರಿ ತಮ್ಮ ಊರಿಗೆ ಹೋಗಿಬರಬೇಕೆಂದು ಯೋಚಿಸುತ್ತಿದ್ದನು. ಆದರೆ ಅವನಿಗೆ ಮತ್ತೆ ಕಾಮಾರಪುಕುರವನ್ನು ನೋಡುವ ಋಣಾನುಬಂಧವಿರಲಿಲ್ಲ. ಕಾರ್ಯಾಂತರದಿಂದ ಹತ್ತಿರದಲ್ಲಿದ್ದ ಒ೦ದುಗ್ರಾಮಕ್ಕೆ ಹೋಗಿರಲು ಇದಕ್ಕಿದಹಾಗೆ ರಾಮಕುಮಾರನು ದೇಹತ್ಯಾಗ ಮಾಡಿದನು.
ಹೀಗೆ ವಿಧಿಯು ಪರಮಹಂಸರನ್ನು ಎಳೆದುತಂದು ದಕ್ಷಿಣೇ ಶ್ವರ ದೇವಸ್ಥಾನವು ಪ್ರತಿಷ್ಟಿತವಾದ ಒಂದುವರ್ಷದ ಒಳಗಾಗಿ ಅಲ್ಲಿನ ಕಾಳೀಪೂಜೆಗೆ ಗಂಟುಹಾಕಿತು.