ಬಹುದು. ಆದರೆ ಇದರಲ್ಲಿ ವೈಚಿತ್ಯವೇನೂ ಇಲ್ಲ. ಏಕೆಂದರೆ, ಕರುಣಾಸಾಗರನಾದ ಈಶ್ವರನು ಧರ್ಮಸಂಸ್ಥಾಪನೆಗಾಗಿ ಮನುಷ್ಯ ಜನ್ಮವೆತ್ತುವಾಗ ಮಾನವದೇಹಕ್ಕೂ ಮನಸ್ಸಿಗೂ ಸ್ವಾಭಾವಿಕವಾದ ದೌರ್ಬಲ್ಯವನ್ನು ತಾನಾಗಿಯೇ ಸ್ವೀಕಾರಮಾಡುತ್ತಾನೆ. ಹೀಗೆ. ಮಾನುಷ ಸಾಮಾನ್ಯವಾದ ಅಸಂಪೂರ್ಣತೆಯನ್ನು ಧಾರಣಮಾಡದೆ ಹೋದರೆ ಈಶ್ವರನು ಅವತಾರಮಾಡುವುದೇ ಒಂದು ವಿಧವಲ್ಲಿ ನಿರರ್ಥಕವಾಗುತ್ತದೆ. ಹೇಗೆಂದರೆ, ಮಾನವ ಸುಲಭವಾದ ದೌರ್ಬಲ್ಯವನ್ನು ವಹಿಸಿ, ಸಾಧನಮೂಲಕ ಆ ದೌರ್ಬಲ್ಯವನ್ನು ಧ್ವಂಸಮಾಡಿ “ ಕ್ಷುದ್ರಂ ಹೃದಯ ದೌರ್ಬಲ್ಯಂ ತ್ವಕ್ಕೊತಿಷ್ಟ” ಎಂದು ಜನಗಳಿಗೆ ಬೋಧಿಸಿದರೆ ತಾನೇ ಅವರು ದೌರ್ಬಲ್ಯವನ್ನು ಬಿಡುವುದು ಸಾಧ್ಯವೆಂದು ತಿಳಿದು ಸಾಧನಮಾಡುವರು. ಇಲ್ಲದೇ ಹೋದರೆ “ ಆತನೇನು ಸರ್ವಶಕ್ತ! ದೌರ್ಬಲ್ಯವು ಅವನಿಗೇನಿದೆ! ಆತನು ಏನಾದರೂ ಮಾಡಬಹುದು, ಅದೆಲ್ಲಾ ನಮಗೆ ಸಾಧ್ಯವೇ ?” ಎಂದು ನಿರಾಶರಾಗಿ ಆತನು ಉಪದೇಶಮಾಡಿದ ಸಾಧನ ಪಥದಲ್ಲಿ ಒಂದು ಹೆಜ್ಜೆಯನ್ನೂ ಇಡದೇ ಹೋಗಬಹುದು. ಅವತಾರ ಪುರುಷರು ಸಾಮಾನ್ಯರಂತೆ ಸಾಧನ ಮಾಡುವುದು ಆವಶ್ಯಕವಾದರೂ ಅವರಿಗೂ ಸಾಮಾನ್ಯರಿಗೂ ವಿಶೇಷ ಪ್ರಭೇದವಿದೆ. ಸಾಮಾನ್ಯರು ಪೂರ್ವಜನ್ಮಸಂಸ್ಕಾರದೊಡನೆ ಹುಟ್ಟುವುದರಿಂದ ಸಾಧನ ಮಾಡುವುದರಲ್ಲಿ ಬೆನ್ನಿಗೆ ಬೀಸುವಕಲ್ಲನ್ನು ಕಟ್ಟಿಕೊಂಡು ಈ ಜುವವರಂತೆ ಇರುತ್ತಾರೆ. ಅವತಾರ ಪುರುಷರಿಗೆ ಈ ವಿಧವಾದ ಪೂರ್ವಜನ್ಮ ಸಂಸ್ಕಾರ ರೂಪವಾದ ಹೊರೆಯಿರುವುದಿಲ್ಲ. ಸಾಮಾನ್ಯ ಜನರು ಸ್ವಾರ್ಥಪರರಾಗಿಯೂ ಸ್ವಸುಖಾಭಿಲಾಷಿಗಳಾಗಿಯೂ ಇರುತ್ತಾರೆ. ಹೀಗಿರುವುದರಿಂದ ವಿಷಯಗಳಿಗೆ ದಾಸರಾಗಿರುತ್ತಾರೆ. ಒಂದೊಂದುವೇಳೆ ವಿಷಯ ವಾಸನೆಯನ್ನು ಬಿಡಬೇಕೆಂದು ಅವರಿಗೆ ಮನಸ್ಸಾದರೂ ವಿಷಯ ವಾಸನೆಯು ಅವರನ್ನು ಬಿಡುವುದಿಲ್ಲ. ವಿಷಯ ವಾಸನೆಯನ್ನು ತ್ಯಾಗ ಮಾಡಬೇಕಾದರೆ ಅವರು ಮನಸ್ಸಿ