ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ನೊಡನೆ ಬಹುಕಾಲ ಘೋರಯುದ್ದ ಮಾಡಬೇಕಾಗುತ್ತದೆ. ಅವ ತಾರ ಪುರುಷರ ಮಾತೇ ಬೇರೆ. ಸ್ವಸುಖನಿರಭಿಲಾಷೆಯೂ, ಪರ ಹಿತಾಕಾಂಕ್ಷೆಯೂ, ವೈರಾಗ್ಯವೂ ಅವರ ಹುಟ್ಟುಗುಣಗಳಾಗಿರು ತವೆ. ಆದ್ದರಿಂದ ಸಾಮಾನ್ಯರು ನೂರುಜನ್ಮಗಳಲ್ಲಿ ಮಾಡಿದರೂ ತೀರದಷ್ಟು ಸಾಧನೆಯನ್ನು ಒಂದೇಜನ್ಮದ ಅತ್ಯಲ್ಪ ಕಾಲದಲ್ಲಿ ಅವತಾರ ಪುರುಷರು ಮಾಡಿ ಮುಗಿಸಿ ಬಿಡುತ್ತಾರೆ. ಅವರು ಮಾಡುವ ನಾಧನೆಯಲ್ಲಿ ಒಂದಂಶವನ್ನು ಮಾಡಿದರೂ ಸಾಮಾನ್ಯರು ಧನ್ಯ ರಾಗುತ್ತಾರೆ. ಸಾಧನಪಥದಲ್ಲಿ ಒ೦ದು ಹೆಜ್ಜೆಯನ್ನಾದರೂ ಇಟ್ಟಿರತಕ್ಕ ವಾಚಕರಿಗೆ ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಸಾಧನಚರಿತ್ರೆ ಯನ್ನು ಓದಿದಮೇಲೆ ಅವರು ಮಹಾಪುರುಷರೆಂಬುದು ಗೊತ್ತಾಗದೆ ಇರದು.