ಹೇಳಿದ್ದೇವೆ. ಹೀಗೆ ಪರಮಹಂಸರು ರಾತ್ರಿಯ ಹೊತ್ತು ಕಾಡಿ ನೊಳಗೆ ಹೋಗುತ್ತಿದ್ದದ್ದನ್ನು ನೋಡಿ ಹೃದಯನು ಒಂದು ದಿನ ಅವ ರನ್ನು ಹಿಂಬಾಲಿಸಿ ಹೋದನು. ಅವರು ಒಂದು ಬನ್ನಿ ಯಮರದ ಕೆಳಗೆ ಜನಿವಾರವನ್ನೂ ಉಟ್ಟಿದ್ದ ಬಟ್ಟೆಯನ್ನೂ ತೆಗೆದುಹಾಕಿ ಧ್ಯಾನ ಮಾಡುತ್ತ ಕುಳಿತರು. ಅದನ್ನು ನೋಡಿ ಹೃದಯನು ಮನಸ್ಸಿನಲ್ಲಿ "ಮಾವನಿಗೆ ಹುಚ್ಚು ಹಿಡಿಯಿತೋ ಏನೋ! ಹುಚ್ಚರೇ ಹೀಗೆ ಮಾಡುವುದು ; ಧ್ಯಾನಮಾಡಿದರೆಮಾಡಲಿ : ಆದರೆ ಹೀಗೆ ಬೆತ್ತಲೆ ಯಾಗಿ ಏಕೆ ಮಾಡಬೇಕು ?" ಎಂದಂದುಕೊಂಡು ಬೇಗನೆ ಅವರ ಹತ್ತಿರ ಹೋಗಿ "ಮಾವ ! ಇದೇನಿದು! ಜನಿವಾರವನ್ನು ತೆಗೆದು ಹಾಕಿ ಉಟ್ಟ ಬಟ್ಟಗಳನ್ನೂ ಬಿಚ್ಚಿ ಹೀಗೆ ಏಕೆ ಬೆತ್ತಲೆಕೂತೆ ?" ಎಂದು ಕೇಳಿದನು. ಅದಕ್ಕೆ ಅವರು ಕಣ್ಣು ಬಿಟ್ಟು ನೋಡಿ "ನಿನಗೇನು ಗೊತ್ತೋ? ಹೀಗೆ ಪಾರಮುಕ್ತನಾಗಿಯೇ ಧ್ಯಾನಮಾಡ ಬೇಕಾದದ್ದು. ಮನುಷ್ಯನು ಜನ್ಮಾವಧಿ ದ್ವೇಷ, ಲಜ್ಜೆ, ಕುಲ, ಶೀಲ, ಭಯ, ಮಾನ, ಜಾತಿ, ಅಭಿಮಾನ ಎಂಬ ಅಷ್ಟಪಾಶಗಳಿ೦ದ ಬದ್ಧನಾಗಿರು ತ್ತಾನೆ. ಯಜ್ಯೋಪವೀತವೂ ತಾನು ಬ್ರಾಹ್ಮಣ, ಎಲ್ಲರಿಗಿಂತಲೂ ದೊಡ್ಡವನು' ಎಂಬ ಅಭಿಮಾನದ ಗುರುತು, ಮತ್ತು ಒಂದು ಪಾಶ : ತಾಯಿಯನ್ನು ಕುರಿತು ಪ್ರಾರ್ಥಿಸಬೇಕಾದರೆ ಈ ಪಾಶಗಳ ನ್ನೆಲ್ಲಾ ಕಿತ್ತು ಬಿಸಾಡಿ ಏಕಮನಸ್ಸಿನಿಂದ ಪ್ರಾರ್ಥಿಸಬೇಕು. ಆದ್ದ ರಿಂದಲೇ ಇವನ್ನೆಲ್ಲ ತೆಗೆದುಹಾಕಿದ್ದೇನೆ. ಧ್ಯಾನ ಮುಗಿದು ಹಿಂದಕ್ಕೆ ಬರುವಾಗ ಪುನಃ ಅವುಗಳನ್ನೆಲ್ಲ ಹಾಕಿಕೊಂಡು ಬರು ತ್ತೇನೆ" ಎಂದು ಹೇಳಿದನು. ಹೃದಯನು ಮಾವನಿಗೆ ಏನೇನೋ ಬುದ್ದಿ ಹೇಳಬೇಕೆಂದು ನಿಶ್ಚಯಮಾಡಿಕೊಂಡು ಹೋಗಿದ್ದನು. ಆದರೆ ಆಗ ಏನೂ ತೋಚದೆ ಸುಮ್ಮನೆ ಹೊರಟು ಬಂದುಬಿಟ್ಟನು. ದಿನಗಳು ಕಳೆದಹಾಗೆಲ್ಲ ಪರಮಹಂಸರ ಮನಸ್ಸಿನಲ್ಲಿ ದೇವತಾ ನುರಾಗವೂ, ವ್ಯಾಕುಲತೆಯೂ ವೃದ್ಧಿಯಾಗುತ್ತ ಬಂದುವು. ನಿದ್ರಾ ಹಾರಗಳು ಬೇಕಿಲ್ಲವಾದುವು; ತಲೆಯೂ ಎದೆಯ ಯಾವಾಗಲೂ