ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೬೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೫೨
ಶ್ರೀ ರಾಮಕೃಷ್ಣ ಪರಮಹಂಸರ

ಕೆಂಪೇರಿರುತ್ತಿದ್ದುವು. ಮೈಯಲ್ಲಿ ಬೆಂಕಿ ಬಿದ್ದ ಹಾಗೆ ತಾಪವಿರುತ್ತಿತ್ತು. ಹೀಗಿರಲು ಕೆಲವು ದಿನಗಳ ಮೇಲೆ ದೇವೀಮೂರ್ತಿಯ ಪ್ರಥಮದರ್ಶನವಾಯಿತು. ಅದನ್ನು ಕುರಿತು ಪರಮಹಂಸರು ಹೀಗೆ ಹೇಳುತ್ತಿದ್ದರು:- ಒಂದುದಿನ ದೇವಿಯ ಎದುರಿಗೆ ಕೀರ್ತನೆಯನ್ನು ಹಾಡುತ್ತಾ ಹಾಡುತ್ತಾ-ಅಮ್ಮಾ, ನಾನು ಎಷ್ಟು ಪ್ರಾರ್ಥಿಸಿದರೂ ನೀನೇಕೆ ಅದನ್ನು ಕಿವಿಯಮೇಲೆ ಹಾಕಿಕೊಳ್ಳುವಹಾಗಿಲ್ಲ ? ರಾಮಪ್ರಸಾದರಿಗೆ ಪ್ರತ್ಯಕ್ಷಳಾಗಲಿಲ್ಲವೇ! ನನಗೆ ಯಾಕೆ ಆಗುವುದಿಲ್ಲ?-ಎಂದು ಬಹಳವಾಗಿ ಕೇಳಿಕೊಂಡೆ ; ಆದರೂ ದೇವಿಯ ದರ್ಶನವಾಗಲಿಲ್ಲ. ದೇವಿಯು ದರ್ಶನವಾಗದಿದ್ದ ಮೇಲೆ ಈ ಜೀವ ನಿದ್ದೇನುಪ್ರಯೋಜನವೆಂದಂದುಕೊಂಡೆ ; ಮನಸ್ಸಿಗೆ ಬಹು ಸಂಕಟವಾಯಿತು. ಕೂಡಲೆ ಗರ್ಭಗುಡಿಗೆ ಎದ್ದು ಹೋಗಿ ದೇವಿಯ ಕೈಯಲ್ಲಿದ್ದ ಕತ್ತಿಯನ್ನು ತಂದು ಹುಚ್ಚನಹಾಗೆ ಪ್ರಾಣಕಳೆದು ಕೊಳ್ಳುವುದಕ್ಕೆ ಹೋದೆನು. ಆ ಸಮಯದಲ್ಲಿ ತಾಯಿಯ ಅದ್ಭುತ ದರ್ಶನವಾಯಿತು. ಒಡನೆಯೇ ಸಂಜ್ಞಾಶೂನ್ಯನಾಗಿ ಬಿದ್ದು ಬಿಟ್ಟೆನು. ಆ ದಿನವೂ ಮರುದಿನವೂ ಏನು ನಡೆಯಿತೋ ನನಗೊಂದೂ ಗೊತ್ತಾಗಲಿಲ್ಲ. ಮನಸ್ಸಿನಲ್ಲಿ ಒ೦ದ ಪೂರ್ವವಾದ ಆನಂದವನ್ನು ಅನುಭವಿಸಿದ್ದು ಮಾತ್ರ ಜ್ಞಾಪಕವಿದೆ."

ದೇವಿಯ ಪ್ರಥಮದರ್ಶನವಾದಂದಿನಿಂದ ಪರಮಹಂಸರು ಪೂರ್ವದಂತೆ ಯಥಾವಿಧಿಯಾಗಿ ಪೂಜೆಮಾಡಲಾರದವರಾದರು. ಅವರ ಪೂಜೆಯು ವಿಚಿತ್ರವಾಗುತ್ತ ಬಂತು. ಮಾಡುವಾಗ ಒಂದು ತುತ್ತು ಅನ್ನವನ್ನು ಕೈಯಲ್ಲಿ ತೆಗೆದುಕೊಂಡು ದೇವಿಯ ಬಾಯಿಯಹತ್ತಿರಕ್ಕೆ ತೆಗೆದುಕೊಂಡು ಹೋಗಿ ತಾಯಿ, ತಿನ್ನು; ಚೆನ್ನಾಗಿದೆ, ತಿನ್ನು;” ಎಂದು ಹೇಳಿ ಆಮೇಲೆ “ ನನ್ನನ್ನು ತಿನ್ನು ಅಂತ ಹೇಳುತ್ತೀ ಏನು ? ಮೊದಲು ನಾನು ತಿನ್ನಬೇಕೆ ? ಆಗಲಿ, ತಿನ್ನುತ್ತೇನೆ” ಎಂದು ಹೇಳಿ ಅದರಲ್ಲಿ ಸ್ವಲ್ಪ ತಿಂದು ಮಿಕ್ಕಿದ್ದನ್ನು ದೇವಿಯ ಬಾಯಹತ್ತಿರ ಹಿಡಿದು " ನಾನೇನೊ ತಿ೦ದೆ, ಇನ್ನು ದೇವಿಗೆ ನೈವೇದ್ಯ