ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೬೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಚರಿತ್ರೆ ನೀನೂ ತಿನ್ನು, ” ಎಂದು ಹೇಳುವರು. ಅಥವಾ ಪೂಜಾಸನವನ್ನು ಬಿಟ್ಟು ತೂರಾಡುತ್ತ ದೇವಿಯ ಸಿಂಹಾಸನದ ಮೇಲೆ ಹತ್ತಿ ಗಾನ ಮಾಡುತ್ತ ದೇವಿಯ ಕೈ ಹಿಡಿದುಕೊಂಡು ಕುಣಿಯುವರು; ಹಾಸ್ಯ ಪರಿಹಾಸ್ಯ ಮಾಡುವರು; ಮಾತನಾಡುವರು; ಅಥವಾ ದೇವಿಯ ಪೂಜೆಗಾಗಿ ತಂದ ಹೂವನ್ನು ಮೊದಲು ತಮ್ಮ ತಲೆ, ಹೃದಯ, ಕಾಲುಗಳ ಮೇಲೆ ಪೂಜೆಮಾಡಿಕೊಂಡು ಆಮೇಲೆ ಅವನ್ನು ದೇವಿಯ ಪಾದಪದ್ಮದಲ್ಲಿ ಅರ್ಪಣಮಾಡುವರು. ಇದನ್ನೆಲ್ಲ ನೋಡುತ್ತಿದ್ದ ಹೃದಯನು ಮನಸ್ಸಿನಲ್ಲಿ “ ಮಾವ ನಿಗೆ ಖಂಡಿತವಾಗಿ ಹುಚ್ಚು ಹಿಡಿದಿರಬೇಕು ; ಇಲ್ಲದೆ ಹೋದರೆ ಪೂಜೆ ಯಲ್ಲಿ ಎಲ್ಲಾದರೂ ಹೀಗೆ ಅನಾಚಾರ ಮಾಡುವುದುಂಟಿ ! ರಾಣಿಗೂ ಮಧುರಾನಾಥನಿಗೂ ಈ ವಿಧವಾದ ಪೂಜೆಯ ಸುದ್ದಿ ಗೊತ್ತಾದರೆ ಅವರೇನು ತಿಳಿದುಕೊಳ್ಳು ತ್ತಾರೆ!” ಎಂದ೦ದುಕೊ೦ಡು' ಭಯಪಡು ತಿದನು. ಯಾವಾಗ ನೋಡಿದರೂ ಪರಮಹಂಸರ ಅರ್ಚನೆಯು ಹೀಗೆ ವಿಲಕ್ಷಣವಾಗಿರಲು ಅದನ್ನು ಮುಚ್ಚು ಮರೆಮಾಡುವುದು ತಾನೇ ಹೇಗೆ? ಹೃದಯನ ಹಾಗೆಯೇ ಅನೇಕರು ಪೂಜಾಕಾಲದಲ್ಲಿ ದೇವಸ್ಥಾನಕ್ಕೆ ಬಂದು ಈ ವಿಚಿತ್ರವಾದ ಆಚರಣೆಯನ್ನು ನೋಡಿ ದೇವಸ್ಥಾನದ ಅಧಿಕಾರಿಗಳಿಗೆ ತಿಳಿಸಿದರು. ಅಧಿಕಾರಿಗಳೂ ಬಂದು ನೋಡಿದರು; ಆದರೆ ಆವೇಶಬಂದಂತಿದ್ದ ಪರಮಹಂಸರನ್ನು ಧಿಕ್ಕ ರಿಸುವುದಕ್ಕೆ ಧೈರ್ಯವಿಲ್ಲದೆ " ಪೂಜಾರಿಗೆ ಹುಚ್ಚು ಹಿಡಿದಿದೆ, ಇಲ್ಲವೇ ಪಿಶಾಚಿ ಮೆಟ್ಟಿಕೊಂಡಿದೆ; ಹಾಗಲ್ಲದೆ ಪೂಜಾಕಾಲದಲ್ಲಿ ಯಾರೂ ಯಾವಾಗಲೂ ಹೀಗೆ ಸ್ನೇಚ್ಚಾಚಾರಮಾಡಲಾರರು; ಯಜಮಾನ ರಿಗೆ ಈ ವಿಷಯವನ್ನು ತಿಳಿಸಬೇಕು.” ಎಂದೆಂದುಕೊಂಡರು. ಮಧುರಾನಾಥನಿಗೆ ಈ ವರ್ತಮಾನವು ಹೋಯಿತು. ಆತನು ತಾನೇ ಶೀಘ್ರದಲ್ಲಿ ದಕ್ಷಿಣೇಶ್ವರಕ್ಕೆ ಬರುವುದಾಗಿಯೂ ಅದುವರೆಗೆ ಅರ್ಚಕನು ತನ್ನ ಮನಸ್ಸಿಗೆ ಬಂದಂತೆ ಪೂಜೆಮಾಡುತ್ತಿರಬೇಕೆಂದೂ ಅದಕ್ಕೆ ಯಾರೂ ಯಾವವಿಧವಾದ ಪ್ರತಿಬಂಧಕ ಮಾಡಕೂಡ