ಚರಿತ್ರೆ ಅಂದಿನಿಂದ ಆಕೆಗೆ ತನ್ನ ಹೃದಯವನ್ನೇ ಹೊಕ್ಕು ನೋಡಿದ ಪರಮ ಹಂಸರಲ್ಲಿ ಪ್ರೇಮವೂ ಭಕ್ತಿಯೂ ಇನ್ನೂ ಹೆಚ್ಚಾದುವು. ದೇವಿಯ ದರ್ಶನವಾದ ಮೇಲೆ, ಪರಮಹಂಸರಿಗೆ ತಮ್ಮ ಮನೆ ದೇವರಾದ ರಘುವೀರನ ದರ್ಶನಮಾಡಬೇಕೆಂಬ ಇಚ್ಛೆ ಹುಟ್ಟಿತು. ಹನುಮ೦ತನಲ್ಲಿದ್ದಂಥ ಭಕ್ತಿಯಿಂದ ರಾಮಚಂದ್ರನ ದರ್ಶನಲಾಭವಾಗುವ ಸಂಭವವುಂಟೆಂದು ತೋರಿತು. ಆದ್ದರಿಂದ ತಮ್ಮಲ್ಲಿ ಹನುಮಂತನ ಭಾವಾರೋಪಮಾಡಿಕೊಂಡು ಸಾಧನೆಗೆ ಆರಂಭಿಸಿದರು. ಈ ಕಾಲದಲ್ಲಿ ಅವರು ನಿರಂತರವೂ ಆ೦ಜನೇ ಯನ ಚಿಂತೆ ಮಾಡುತ್ತ ಮಾಡುತ್ತ ತಮ್ಮನ್ನೇ ತಾವು ಮರೆತು ಹೋಗಿದ್ದರು. ಈ ವಿಚಾರವಾಗಿ ಅವರು ಹೇಳುತ್ತಿದದ್ದೇನೆಂದರೆ:- "ಆ ಕಾಲದಲ್ಲಿ ನಾನು ಆಹಾರವಿಹಾರಾದಿಗಳನ್ನೆಲ್ಲಾ ಹನುಮಂತನ ಹಾಗೆಯೇ ಮಾಡುತ್ತಿದೆ. ಮಾಡಬೇಕು ಅಂತ ಹಾಗೆ ಮಾಡುತ್ತಿರ ಲಿಲ್ಲ: ಆದರಷ್ಟಿಗದೇ ಹಾಗಾಗುತ್ತಿತ್ತು. ಹಾರಿ ಹಾರಿಕೊಂಡು ನಡೆಯುತ್ತಿದ್ದೆ. ಹಣ್ಣು ಹಂಪಲುಗಳನ್ನು ಹೊರತು ಮತ್ತೇನನ್ನೂ ತಿನ್ನುತ್ತಿರಲಿಲ್ಲ ; ಅವನ್ನೂ ಶಿಪ್ಪೆ ತೆಗೆದು ತಿನ್ನುವುದಕ್ಕೆ ಕೂಡ ಮನಸ್ಸು ಬರುತ್ತಿರಲಿಲ್ಲ : ಗಿಡದ ಮೇಲೆಯೇ ಬಹಳಕಾಲ ಇದ್ದುಬಿಡುತ್ತಿದ್ದೆ. ಮತ್ತು ಯಾವಾಗಲೂ 'ರಘುವೀರ' ' ರಘುವೀರ' ಎಂದು ಗಂಭೀರ ಸ್ವರದಿಂದ ಕಿರಿಚುತ್ತಿದ್ದೆ". ಇತ್ಯಾದಿ.
ಈ ದಾಸ್ಯ ಭಕ್ತಿ ಸಾಧನಮಾಡುವಾಗ ಅವರಿಗೆ ಮತ್ತೊಂದು ಅಪೂರ್ವವಾದ ಅನುಭವವು ಆಯಿತು. ಅದನ್ನು ಕುರಿತು ಪರಮ ಹಂಸರು ಹೇಳಿರುವುದೇನೆಂದರೆ : * ಒಂದು ದಿನ ಪಂಚವಟಿಯ ಕೆಳಗೆ ಕೂತಿದ್ದೆ. ನಾನೇನು ಆಗ ಧ್ಯಾನಮಾಡುತ್ತಿರಲಿಲ್ಲ, ಸುಮ್ಮನೆ ಕೂತಿದ್ದೆ. ಆಗ ನಿರುಪಮಯ ಜ್ಯೋತಿರ್ಮಯವಾದ ಸ್ತ್ರೀಮೂರ್ತಿ ನನ್ನ ಎದುರಿಗೆ ಪ್ರತ್ಯಕ್ಷಳಾಗಿ ಆ ಸ್ಥಳವನ್ನೆಲ್ಲ ಕಾಂತಿಯಿಂದ ತುಂಬಿ ದಳು. ಮೂರ್ತಿಯು ಮಾನವೀಮೂರ್ತಿ : ಯಾಕೆಂದರೆ ತ್ರಿನ ಯನಮುಂತಾದ ದೇವಿಯ ಲಕ್ಷಣಗಳು ಆ ಮೂರ್ತಿಗೆ ಇರಲಿಲ್ಲ.