ರಲ್ಲಿಯೂ ಸರಳವಾದ ನಡತೆ, ದೇವಭಕ್ತಿ, ಮಾತೃಭಕ್ತಿ ಇವುಗಳುಕಂಡು ಬರುತ್ತಿದ್ದವು.ಮತ್ತೆ ಕೆಲವು ಕಾಲಗಳಲ್ಲಿ ಎಲ್ಲ ವಿಷಯಗಳಲ್ಲಿಯೂ ಔದಾಸೀನ್ಯ, ಯಾರಿಗೂ ಗೊತ್ತಾಗದ ಒಂದು ವಿಷಯಕ್ಕಾಗಿ ವಿಶೇಷ ವ್ಯಾಕುಲತೆ, ಸ್ಮಶಾನಗಳಲ್ಲಿ ಹಗಲು ರಾತ್ರಿಯನ್ನದೆಏಕಾಕಿಯಾಗಿ ಹೋಗಿ ಕುಳಿತುಕೊಳ್ಳುವುದು, ಇದ್ದಕ್ಕಿದ್ದಹಾಗೆ.ತಾಯಿ, ತಾಯಿ, ಎಂದು ಅಳುವುದು ಇವು ಕಂಡುಬರುತ್ತಿದ್ದುವು.
ಕ್ರಮಕ್ರಮವಾಗಿ ದೇಹಸ್ಥಿತಿಯು ಮೊದಲಿನಂತೆ ಆಗುತ್ತಆದರೆ ಸಾಂಸಾರಿಕ ವಿಚಾರಗಳಲ್ಲಿ ಔದಾಸೀನ್ಯ ಬಾಲ್ಯದಲ್ಲಿ ಹೇಗೋ ಈಗ ಯೌವನದಲ್ಲಿಯೂ ಹಾಗೇ ; ಇದನ್ನೆಲ್ಲನೋಡಿ ಚ೦ದ್ರಾದೇವಿಯು ಮಗನಿಗೆ ಮದುವೆಮಾಡಿ ಬಿಡುವುದುಉತ್ತಮವೆಂದು ಸ್ಥಿರಮಾಡಿಕೊಂಡಳು.ಏಕೆಂದರೆ ಮನೆಯಲ್ಲಿಹೆಂಡಿರು ಮಕ್ಕಳಿದ್ದರೆ ಅವರ ಸುಖದುಃಖಗಳನ್ನು ನೋಡಿಕೊಳ್ಳಬೇಕಾದ ಆವಶ್ಯಕತೆ ಬೀಳುವುದರಿಂದ ಸಂಸಾರದಲ್ಲಿ ಔದಾಸೀನ್ಯವುತನ್ನಷ್ಟಕ್ಕೆ ತಾನೇ ಹೋಗುವುದೆಂದು ಭಾವಿಸಿದಳು.
ಹುಚ್ಚು ಬಿಡುವವರೆಗೂ ಮದುವೆಯಾಗದು, ಮದುವೆಯಾಗುವ ವರೆಗೂ ಹುಚ್ಚು ಬಿಡದು ಎಂಬ ಸಮಚಾರಕ್ಕೆ ಬಂತು.ಮೊದಲೇ ಬಡವರು; ಹುಡುಗನಸ್ಥಿತಿ ನೋಡಿದರೆ ಹೀಗೆ! ಇದನ್ನುಕಂಡು ಕಂಡು ಹೆಣ್ಣು ಕೊಡುವವರು ಯಾರು? ಎಷ್ಟೆಷ್ಟೋ ಕಡೆವಿಚಾರಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ. ಆದ್ದರಿಂದಆ ಮುದುಕಿಯು ಪುನಃ ಕೊರಗಲಾರಂಭಿಸಿದಳು. ಆಗ ಒಂದುದಿನ ಪರಮಹಂಸರು ಭಾವಾವಿಷ್ಟರಾಗಿ “ ಅಲ್ಲಿ ಇಲ್ಲಿ ಹುಡುಕಿಪ್ರಯೋಜನವಿಲ್ಲ; ಜಯರಾಮಬಾಟಿದ ಶ್ರೀರಾಮ ಮುಖ್ಯಪಾಧ್ಯಾಯನ ಮನೆಗೆ ಹೋಗಿ ನೋಡಿರಿ; ಮದುವೆಯಾಗುವಹುಡುಗಿಯನ್ನು ಮುಡುಪು ಕಟ್ಟಿಟ್ಟಿದ್ದಾರೆ”.ಎಂದು ಹೇಳಿದರು.ಆಗ ಆ ಮಾತನ್ನು ಯಾರೂ ಲಕ್ಷ್ಯ ಮಾಡಲಿಲ್ಲ. ಏನಾದರೂಆಗಲಿಎದ್ದು ಹೋಗುವ ಮಾತು ಬಿದ್ದು ಹೋಗಲಿ ಎಂದು ವಿಚಾ