ಈ ಪುಟವನ್ನು ಪರಿಶೀಲಿಸಲಾಗಿದೆ
೬೦
ಶ್ರೀ ರಾಮಕೃಷ್ಣ ಪರಮಹಂಸರ
ರಿಸುವುದಕ್ಕೆ ಹೋದರು. ಹೋಗುವುದೇತಡ, ಅವರು ಕನ್ನೆ, ಯನ್ನು ಕೊಡುವುದಕ್ಕೆ ಒಪ್ಪಿದರು. ಕೆಲವು ದಿನಗಳಲ್ಲಿ ವಿವಾಹವೂ ನೆರವೇರಿತು. (1859.)
ಮದುವೆಯಾದ ಮೇಲೆ ಪರಮಹಂಸರು ಆರೇಳು ತಿಂಗಳ ದಿವಸ ತಮ್ಮ ಊರಲ್ಲೇ ಇದ್ದರು. ಮನೆಯಲ್ಲಿದ್ದ ಬಡತನದ ತಾಪತ್ರಯಗಳನ್ನು ನೋಡಿ ಕಲ್ಕತ್ತೆಗೆ ಹಿಂತಿರುಗಿ ಬಂದು ಪುನಃ ಅರ್ಚಕನ ಕೆಲಸಕ್ಕೆ ನಿಂತರು. ಒಂದು ದಿನ ಸರಿಯಾಗಿ ಪೂಜೆ ಮಾಡಿದರೋ ಇಲ್ಲವೋ ಅವರ ಮನಸ್ಸು ದೇವರ ಪೂಜೆಯಲ್ಲಿ ಪೂರ್ತಿಯಾಗಿ ನಿಂತುಹೋಯಿತು. ತಾಯಿ, ಹೆಂಡತಿ, ಸಂಸಾರ. ಸಂಪಾದನೆ ಎಲ್ಲವೂ ಪೂರ್ತಿಯಾಗಿ ಮರೆತುಹೋದುವು. ಪುನಃ "ಏನುಮಾಡಿದರೆ ಸರ್ವದಾ ದೇವಿಯನ್ನು ನೋಡಿಯೇನು” ಎಂಬ ಯೋಚನೆಯು ಮನಸ್ಸನ್ನೆಲ್ಲ ತುಂಬಿಕೊಂಡಿತು. ಹಿಂದಿನ ಚಿಹ್ನೆಗಳೆಲ್ಲ ಮತ್ತೆ ಕಾಣಿಸಿಕೊಂಡುವು. ಎದೆ ಕೆಂಪಗಾಯಿತು; ಕಣ್ಣಿ ನಿಂದ ನೀರು ಸುರಿಯಲು ಮೊದಲಾಯಿತು ; ನಿದ್ರೆ ಹೋಯಿತು : ಗಾತ್ರ ದಾಹವು ಪ್ರಾರಂಭವಾಯಿತು.