ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೭೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೬೬
ಚರಿತ್ರೆ

ನೋಡಿ ಅವರು ಅವತಾರ ಪುರುಷರಿರಬೇಕೆಂದು ನಿರ್ಧರಿಸಿದಳು. ಈ ಕಾಲದಲ್ಲಿ ಒಂದುದಿನ ಪರಮಹಂಸರು ಪಂಚವಟಿಯ ಒಳಗೆ ಮಧುರಾನಾಥನೊಡನೆ ಕುಳಿತುಕೊಂಡು ಮಾತನಾಡುತ್ತ, ಮಾತಿಗೆ ಮಾತು ಬಂದು ಭೈರವಿಯು ತಮ್ಮ ವಿಚಾರವಾಗಿ ಹೇಳಿದ್ದನ್ನೆಲ್ಲ ಅನನಿಗೆ ತಿಳಿಸಿದರು. ಅದನ್ನು ಕೇಳಿ ಮಧುರನು “ ಆಕೆ ಏನು ಹೇಳಿದರೇನು? ಅವತಾರಗಳು ಹತ್ತಕ್ಕಿಂತ ಹೆಚ್ಚು ಉಂಟೇನು? ಆದ್ದರಿ೦ದ ಆಕೆಯ ಮಾತು ಹೇಗೆ ಸತ್ಯವಾದೀತು? ಆದರೆ ನಿಮ್ಮ ಮೇಲೆ ಜಗದಂಬೆಯ ಕೃಪೆಯಿದೆ ಎಂಬುದೇನೋ ಸತ್ಯ. ಎಂದು ಹೇಳಿದನು. ಇದಾದ ಸ್ವಲ್ಪ ಹೊತ್ತಿನಮೇಲೆ ಬ್ರಾಹ್ಮಣಿಯು ಅಲ್ಲಿಗೆ ಬಂದಳು. ಪರಮಹಂಸರು ಆಕೆಗೆ ಮಧುರಾನಾಥನ ಪರಿಚಯ ಮಾಡಿಕೊಟ್ಟು ಆಕೆಯನ್ನು ಕುರಿತು “ ಅಮಾ, ನೀನು ನನ್ನ ಸಂಬಂಧವಾಗಿ ಹೇಳಿದ್ದನ್ನೆಲ್ಲ ಈತನಿಗೆ ಹೇಳಿದೆ. ಅದಕ್ಕೆ ಈತನು ಅವತಾರಗಳು ಹತ್ತೇ ಹೊರತು ಹೆಚ್ಚೆಲ್ಲಾದರೂ ಉಂಟೆ ಎಂದನು” ಎಂದು ಹೇಳಿದರು. ಆಗ ಬ್ರಾಹ್ಮಣಿಯು ಮಧುರನಿಗೆ ಆಶೀರ್ವಾದ ಮಾಡಿ "ಯಾಕೆ ? ಭಾಗವತದಲ್ಲಿ ಇಪ್ಪತ್ತನಾಲ್ಕು ಮುಖ್ಯ ಮುಖ್ಯವಾದ ಅವತಾರಗಳಜಿ ಎಂದೂ ಅಲ್ಲದೆ ಅಸಂಖ್ಯ ಅವತಾರಗಳಿವೆ ಎಂದೂ ಹೇಳಿಲ್ಲವೆ? ವೈಷ್ಣವಗ್ರಂಥಗಳಲ್ಲಿ ಚೈತನ್ಯದೇವನ ಪುನರಾಗಮನದ ಮಾತು ಸ್ಪಷ್ಟವಾಗಿದೆಯಲ್ಲ!" ಎಂದು ಹೇಳಲು ಮಧುರನು ಅದಕ್ಕೆ ಪ್ರತ್ಯುತ್ತರ ಹೇಳುವುದಕ್ಕೆ ತೋರದೆ ಸುಮ್ಮನಾದನು.

ಬ್ರಾಹ್ಮಣಿಯು ಶಾಸ್ತ್ರಜ್ಞಾನವನ್ನು ಪಡೆದ ಪಂಡಿತಳಷ್ಟೇ ಅಲ್ಲ. ಶಾಸ್ತ್ರದಲ್ಲಿ ಹೇಳಿದ ಸಾಧನಗಳನ್ನು ಅನುಷ್ಠಾನಮಾಡಿ ತಿಳಿದುಕೊಂಡಿದ್ದಳು. ಆದ್ದರಿಂದ ಪರಮಹಂಸರನ್ನು ತಂತ್ರಸಾಧನೆ ಮಾಡಲು ಪ್ರೇರೇಪಿಸಿ, ಗುರುರೂಪವಾಗಿ ನಿಂತು ಆತನಿಂದ ಎಲ್ಲ ವಿಧವಾದ (ಸುಮಾರು ಅರವತ್ತನಾಲ್ಕು) ತಂತ್ರಸಾಧನೆಗಳನ್ನೂ ಸಾಂಗೋಪಾಂಗವಾಗಿ ಮಾಡಿಸಿದಳು. ತಂತ್ರಸಾಧನೆಯು ನಮ್ಮ ದೇಶದಲ್ಲಿ ರೂಢಿಯಲ್ಲಿಲ್ಲದಿರುವುದೇ ಮುಂತಾದ ಕಾರಣಗಳಿಂದ