ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಶ್ರೀ ರಾಮಕೃಷ್ಣ ಪರಮಹಂಸರ ಅದನ್ನು ಇಲ್ಲಿ ವಿವರಿಸಿಲ್ಲ. ಆದರೆ ತಂತ್ರಶಾಸ್ತ್ರಗಳಲ್ಲಿ ಹೇಳಿರುವ ರೀತಿ ಅನುಷ್ಟಾನಮಾಡುವುದರ ಉದ್ದೇಶವನ್ನು ಮಾತ್ರ ಇಲ್ಲಿ ಸೂಚಿ ಸುತ್ತೇವೆ. ರೂಪರಸಾದಿಗಳು ಜನರ ಮನಸ್ಸನ್ನು ಆಕರ್ಷಣ ಮಾಡಿ ಪುನಃಪುನಃ ಅವರನ್ನು ಜನನಮರಣಗಳಲ್ಲಿ ಸಿಕ್ಕಿಸುತ್ತವೆ. ಮತ್ತು ಜ್ಞಾನಸಂಪಾದನೆ ಮಾಡಗೊಡದೆ ಈಶ್ವರಸಾಕ್ಷಾತ್ಕಾರಕ್ಕೆ ಅಡ್ಡಿಯಾಗಿ ಬರುತ್ತವೆ; ಅಪೂರ್ವವಾದ ಇಂದ್ರಿಯನಿಗ್ರಹದ ಮೂ ಲಕ ಆ ರೂಪ ರಸಾದಿಗಳನ್ನೂ ಈಶ್ವರಸ್ವರೂಪವೆಂದು ಅಭ್ಯಾಸ ಮಾಡಿಸುವುದೇ ತಾಂತ್ರಿಕ ಕ್ರಿಯೆಗಳ ಸಾಮಾನ್ಯವಾದ ಉದ್ದೇಶ. ಕಠೋರವಾದ ಇಂದ್ರಿಯನಿಗ್ರಹ ಮಾಡಿಕೊಂಡೇ ತ೦ತ್ರೋಕ್ತ ಸಾಧನ ಗಳನ್ನು ಅನುಷ್ಠಾನಮಾಡಲು ಮೊದಲುಮಾಡಬೇಕು. ಆದ್ದ ರಿಂದ ಸಾಮಾನ್ಯರಿಗೆ ಇದು ಅತ್ಯಂತ ಕಠಿಣ. ತಂತ್ರಸಾಧಕನು ಇಂದ್ರಿಯಗಳಿಗೆ ಸ್ವಲ್ಪ ವಶನಾದರೂ ಅವನಿಗೆ ಭಯಂಕರವಾದ ಅಧಃಪತನವಾಗುವುದು. ಬಹುಶಃ ಈ ಕಾರಣದಿಂದಲೇ, ಪರಮ ಹಂಸರು ಅವುಗಳನ್ನು ತಮ್ಮ ಶಿಷ್ಯರೆದುರಿಗೆ ವಿಸ್ತಾರವಾಗಿ ಹೇಳಿ ಲಾರರು.) * ಈ ಸಾಧನೆಗಳು ಮುಗಿದಮೇಲೆ ಪರಮಹಂಸರಿಗೆ ಅಣಿ ಮಾದ್ಯಷ್ಟಸಿದ್ದಿಗಳೂ ಸ್ವಾಧೀನವಾದುವು. ಆದರೆ ಅವರು ಅವು ಗಳನ್ನು ಅಮೇಧದಂತೆ ಹೇಯವೆಂದು ತಿಳಿದು ಅವುಗಳ ಕಡೆಗೆ ಸ್ವಲ್ಪವೂ ಲಕ್ಷಕೊಡುತ್ತಿರಲಿಲ್ಲ. ಮುಂದೆ ಇವೆಲ್ಲ ನಡೆದ ಅನೇಕ ದಿನಗಳ ಮೇಲೆ ಒಂದುದಿವಸ ಅವರು ಪಂಚವಟಿಯಲ್ಲಿ ತಮ್ಮ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಕರೆದು “ ನೋಡೋ ! ನನ್ನಲ್ಲಿ ಪ್ರಸಿದ್ದವಾದ ಅಣಿಮಾದ್ಯಷ್ಟಸಿದ್ದಿಗಳು ಇವೆ. ಆದರೆ ಅವುಗಳನ್ನು ನಾನು ಯಾವಾಗಲೂ ಪ್ರಯೋಗಮಾಡುವುದಿಲ್ಲ ಎಂದು ಮೊದಲಿ ನಿಂದಲೂ ಸಂಕಲ್ಪ ಮಾಡಿದ್ದೆ. ಅವುಗಳನ್ನು ಉಪಯೋಗಿಸಬೇಕಾದ ಅಗತ್ಯವೂ ಬರಲಿಲ್ಲ. ನೀನು ಧರ್ಮಪ್ರಚಾರ ಮೊದಲಾದ ಅನೇಕ ಕಾರ್ಯಗಳನ್ನು ಮಾಡಬೇಕಾಗುತ್ತೆ. ಆದ್ದರಿಂದ ನಿನಗೇ ಇವೆ