ಅದನ್ನು ಇಲ್ಲಿ ವಿವರಿಸಿಲ್ಲ. ಆದರೆ ತಂತ್ರಶಾಸ್ತ್ರಗಳಲ್ಲಿ ಹೇಳಿರುವ ರೀತಿ ಅನುಷ್ಟಾನಮಾಡುವುದರ ಉದ್ದೇಶವನ್ನು ಮಾತ್ರ ಇಲ್ಲಿ ಸೂಚಿಸುತ್ತೇವೆ. ರೂಪರಸಾದಿಗಳು ಜನರ ಮನಸ್ಸನ್ನು ಆಕರ್ಷಣ ಮಾಡಿ ಪುನಃಪುನಃ ಅವರನ್ನು ಜನನಮರಣಗಳಲ್ಲಿ ಸಿಕ್ಕಿಸುತ್ತವೆ. ಮತ್ತು ಜ್ಞಾನಸಂಪಾದನೆ ಮಾಡಗೊಡದೆ ಈಶ್ವರಸಾಕ್ಷಾತ್ಕಾರಕ್ಕೆ ಅಡ್ಡಿಯಾಗಿಬರುತ್ತವೆ; ಅಪೂರ್ವವಾದ ಇಂದ್ರಿಯನಿಗ್ರಹದ ಮೂಲಕ ಆ ರೂಪ ರಸಾದಿಗಳನ್ನೂ ಈಶ್ವರಸ್ವರೂಪವೆಂದು ಅಭ್ಯಾಸ ಮಾಡಿಸುವುದೇ ತಾಂತ್ರಿಕ ಕ್ರಿಯೆಗಳ ಸಾಮಾನ್ಯವಾದ ಉದ್ದೇಶ. ಕಠೋರವಾದ ಇಂದ್ರಿಯನಿಗ್ರಹ ಮಾಡಿಕೊಂಡೇ ತಂತ್ರೋಕ್ತ ಸಾಧನಗಳನ್ನು ಅನುಷ್ಟಾನಮಾಡಲು ಮೊದಲುಮಾಡಬೇಕು.ರಿಂದ ಸಾಮಾನ್ಯರಿಗೆ ಇದು ಅತ್ಯಂತ ಕಠಿಣ ತಂತ್ರ ಸಾಧಕನು ಇಂದ್ರಿಯಗಳಿಗೆ ಸ್ವಲ್ಪ ವಶನಾದರೂ ಅವನಿಗೆ ಭಯಂಕರವಾದ ಅಧಃಪತನವಾಗುವುದು. ಬಹುಶಃ ಈ ಕಾರಣದಿಂದಲೇ, ಪರನು ಹಂಸರು ಅವುಗಳನ್ನು ತಮ್ಮ ಶಿಷ್ಯರೆದುರಿಗೆ ವಿಸ್ತಾರವಾಗಿ ಹೇಳಿರಲಾರರು.
ಈ ಸಾಧನೆಗಳು ಮುಗಿದಮೇಲೆ ಪರಮಹಂಸರಿಗೆ ಅಣಿ ಮಾದ್ಯಷ್ಟಸಿದ್ದಿಗಳೂ ಸ್ವಾಧೀನವಾದುವು. ಆದರೆ ಅವರು ಅವುಗಳನ್ನು ಅಮೇಧದಂತೆ ಹೇಯವೆಂದು ತಿಳಿದು ಅವುಗಳ ಕಡೆಗೆ ಸ್ವಲ್ಪವೂ ಲಕ್ಷ್ಯ ಕೊಡುತ್ತಿರಲಿಲ್ಲ. ಮುಂದೆ ಇವೆಲ್ಲ ನಡೆದ ಅನೇಕ ದಿನಗಳಮೇಲೆ ಒಂದುದಿವಸ ಅವರು ಪಂಚವಟಿಯಲ್ಲಿ ತಮ್ಮ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಕರೆದು “ ನೋಡೋ ! ನನ್ನಲ್ಲಿ ಪ್ರಸಿದ್ಧವಾದ ಅಣಿಮಾದ್ಯಷ್ಟಸಿದ್ಧಿಗಳು ಇವೆ. ಆದರೆ ಅವುಗಳನ್ನು ನಾನು ಯಾವಾಗಲೂ ಪ್ರಯೋಗಮಾಡುವುದಿಲ್ಲ ಎಂದು ಮೊದಲಿ ನಿಂದಲೂ ಸಂಕಲ್ಪ ಮಾಡಿದ್ದೆ. ಅವುಗಳನ್ನು ಉಪಯೋಗಿಸಬೇಕಾದ ಅಗತ್ಯವೂ ಬರಲಿಲ್ಲ. ನೀನು ಧರ್ಮ ಪ್ರಚಾರ ಮೊದಲಾದ ಅನೇಕ ಕಾರ್ಯಗಳನ್ನು ಮಾಡಬೇಕಾಗುತ್ತೆ. ಆದ್ದರಿಂದ ನಿನಗೇ ಇವ