ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೬೫
ಚರಿತ್ರೆ

ನ್ನೆಲ್ಲಾ ದಾನಮಾಡೋಣವೆಂದು ನಿಶ್ಚಯಮಾಡಿದ್ದೇನೆ ; ಹಿಡಿ ! ” ಎಂದು ಹೇಳಿದರು. ಅದಕ್ಕೆ ಸ್ವಾಮಿಗಳು “ ಮಹಾಶಯ, ಈಶ್ವರ ಲಾಭಮಾಡಿಕೊಳ್ಳಲು ಇವುಗಳಿಂದ ನನಗೇನಾದರೂ ಪ್ರಯೋಜನವಾಗುವುದೇ ? ” ಎಂದು ಕೇಳಿದರು. ಪರಮಹಂಸರು ಅದಕ್ಕೆ ಉತ್ತರವಾಗಿ “ ಧರ್ಮಪ್ರಚಾರ ಮುಂತಾದ ಕಾರ್ಯಗಳಿಗೆ ಅವುಗಳಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುವುದಾದರೂ ಈಶ್ವರಲಾಭಕ್ಕೆ ಯಾವವಿಧವಾದ ಪ್ರಯೋಜನವೂ ಆಗುವುದಿಲ್ಲ.” ಎಂದರು. ಅದನ್ನು ಕೇಳಿ ಸ್ವಾಮಿಗಳು “ ಹಾಗಾದರೆ ಅವುಗಳಿಂದ ನನಗೇನೂ ಕೆಲಸವಿಲ್ಲ” ಎಂದುಬಿಟ್ಟರು.