ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಎಂಟನೆಯ ಅಧ್ಯಾಯ ಸಾಧನಗಳು-ಮೂರನೆಯ ಭಾಗ : 1863-1866. ತಾಂತ್ರಿಕ ಸಾಧನೆಗಳನ್ನು ಮುಗಿಸಿದ ಮೇಲೆ ಪರಮಹಂಸರ ಮನಸ್ಸು ಪುನಃ ವೈಷ್ಣವ ಮತದ ಸಾಧನೆಗಳ ಕಡೆಗೆ ತಿರುಗಿತು. ಅವರು ಮೊದಲು ನಾಲ್ಕು ವರ್ಷಗಳಲ್ಲಿ ವೈಷ್ಣವ ಶಾಸ್ತ್ರಗಳಲ್ಲಿ ಹೇಳಿ ರುವ ಶಾಂತ, ದಾಸ್ಯ, ಸಖ್ಯ ಭಾವಗಳನ್ನು ಅವಲಂಬನ ಮಾಡಿ ಸಿದ್ಧಿ ಯನ್ನು ಪಡೆದಿದ್ದರು. ಆದ್ದರಿಂದ ಈಗ ವಾತ್ಸಲ್ಯ, ಮಧುರ ಎಂಬ ಮಿಕ್ಕೆರಡು ಭಾವಗಳ ಸಾಧನೆಯನ್ನು ಮಾಡಿಬಿಡಬೇಕೆಂದು ನಿರ್ಧರಿ ಸಿದರು. ಈ ಕಾಲದಲ್ಲಿ ಅವರು ಜಗನ್ಮಾತೆಯ ಸಖಿಯೆಂಬ ಭಾವನೆ ಯಿಂದ ಹುಬ್ಬಿನ ಸರಗಳನ್ನು ಕಟ, ದೇವಿಗೆ ಅಲಂಕಾರಗಳನ್ನು ಮಾಡುತ್ತಲೂ, ಚಾಮರ ಹಾಕುತ್ತಲೂ, ಸೇವೆಮಾಡುತ್ತಿರುವರು. ಮಧುರಾನಾಥನಿಗೆ ಹೇಳಿ ಹೊಸಹೊಸ ಒಡವೆಗಳನ್ನು ಮಾಡಿಸಿ ದೇವಿಗೆ ಅವುಗಳನ್ನು ಇಟ್ಟು ಕೃಂಗಾರಮಾಡುವರು ; ಮತ್ತು ಸ್ತ್ರೀ ವೇಷದಿಂದ ದೇವಿಯ ಎದುರಿಗೆ ನಿಂತು ನೃತ್ಯಗೀತಗಳನ್ನು ಮಾಡು ತಿರುವರು. ಹೀಗಿರಲು ಈ ಕಾಲಕ್ಕೆ ತಕ್ಕ ಹಾಗೆ ವಾತ್ಸಲ್ಯ ಭಾವ ಸಾಧಕನಾದ ಜಟಾಧಾರಿಯೆಂಬ ಒಬ್ಬ ಸಾಧುವು ದಕ್ಷಿಣೇಶ್ವರ ದೇವ ಸ್ಥಾನಕ್ಕೆ ಬಂದನು. ಜಟಾಧಾರಿಗೆ ಶ್ರೀರಾಮಚಂದ್ರನಲ್ಲಿ ಅದ್ಭುತವಾದ ಅನುರಾಗ ವಿತ್ತು. ಬಾಲಕ ರಾಮಚಂದ್ರಮೂರ್ತಿಯೇ ಅವನಿಗೆ ಅತ್ಯಂತ ಇಷ್ಟ. ಇಂಥ ರಾಮಚಂದ್ರಮೂರ್ತಿಯನ್ನು ಬಹುಕಾಲ ವಾತ್ಸಲ್ಯದಿಂದ ಸೇವೆಮಾಡಿದ್ದರಿಂದ ಆತನ ಮನಸ್ಸು ವಾತ್ಸಲ್ಯಭಾವದಿಂದ ತುಂಬಿ ಹೋಗಿತ್ತಲ್ಲದೆ ಶ್ರೀರಾಮಚಂದ್ರನ ಜ್ಯೋತಿರ್ವನ ಬಾಲವಿಗ್ರಹವು ಪ್ರತ್ಯಕ್ಷವಾಗಿ ಅವನ ಎದುರಿಗೆ ಬಂದು ಭಕ್ತಿಯುಕ್ತವಾದ ಸೇವೆ } \