ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೮೬ಕೃಷ್ಣಲೀಲೆ

ಗಳನ್ನು ಸಾಧಿಸುವುದಕ್ಕಾಗಿ ಅರ್ಥಕಾಮಗಳನ್ನು ಪರಿತ್ಯಜಿಸುವರು. ಕಂಸ
ನಂತಹ ದುರಾತ್ಮರು ಅರ್ಥಕಾಮಗಳನ್ನು ಅನುಭವಿಸುವುದಕ್ಕಾಗಿ ಧರ್ಮ
ಮೋಕ್ಷಗಳನ್ನು ಪರಿತ್ಯಜಿಸುವರು. ಕಲ್ಯಾಣ ಗುಣ ಪರಿಪೂರ್ಣನಾದ
ಭಗವಂತನ ಕಥಾಶ್ರವಣದಿಂದ ಒಂದು ಕ್ಷಣವಾದರೂ ಆನಂದಿಸದಿರುವ
ಮೂಢಮನುಷ್ಯರು ಎಷ್ಟುಕಾಲ ಬದುಕಿದ್ದರೂ ಪ್ರಯೋಜನವಿಲ್ಲವು.
ಆವ ಪುಣ್ಯಾತ್ಮರು ಸಾಧು ಮಾರ್ಗವನ್ನವಲಂಬಿಸಿ ಸತ್ಕಥಾ ಶ್ರವಣದಲ್ಲಿ
ಕಾಲ ಕಳೆಯುವರೋ, ಅಂಥವರ ಆಯುಷ್ಯವು ಸಾರ್ಥಕವಾಗುವುದೇ
ಹೊರತು, ಮಿಕ್ಕವರ ಆಯುಷ್ಕಾಲವು ನಿರರ್ಥಕವಾದ ಕೇವಲ ಆಹಾರ
ನಿದ್ರಾದಿಗಳಲ್ಲಿ ವ್ಯರ್ಥವಾಗಿ ಕಳೆದುಹೋಗುವುದು.ಷಡ್ಗುಣೈಶ್ವರ್ಯ ಸಂಪನ್ನ
ನಾದ ಭಗವಂತನು ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ ಶ್ರೀ
ಕೃಷ್ಣರೂಪದಿಂದ ಪ್ರತ್ಯಕ್ಷವಾಗಿದ್ದಾಗ್ಯೂ, ಆತನನ್ನು ಪರಾಪರ ವಸ್ತು
ವೆಂದು ತಿಳಿದು ಭಜಿಸತಕ್ಕ ತಿಳಿವಳಿಕೆಯು ಉದ್ದವ-ಅಕ್ರೂರ ಮುಂ
ತಾದ ಕೆಲವರಿಗೆ ಹೊರತು ಮಿಕ್ಕವರಿಗಿಲ್ಲವು. ಪರಂತು ಯಾದವರಲ್ಲಿ
ದೇವಕೀ ವಸುದೇವರೂ, ಗೋಪರಲ್ಲಿ ಯಶೋದಾ ನಂದಗೋಪರೂ.
ಪರಮಭಾಗ್ಯಶಾಲಿಗಳು. ಜಗನ್ನಾಥನ ಸೇವೆಯು ಅವರಿಗೆ ಬಹು ಸು
ಲಭವಾಗಿ ಲಭಿಸಿರುವುದು. ಈ ರಹಸ್ಯವನ್ನರಿಯದೆ ಮದಾಂಧನಾದ
ಕಂಸನು ಬಾರಿ ಬಾರಿಗೂ ದೇವಕೀ ವಸುದೇವರನ್ನು ಕಾರಾಗೃಹದಲ್ಲಿ
ಬಂಧಿಸುತ್ತಿರುವನು. ಇದರಿಂದ ಅವನಿಗೆ ಲೇಶವಾದರೂ ಪ್ರಯೋಜನ
ವಿಲ್ಲವಾದಾಗ್ಗೂ, ಸಾಧು ಜನರನ್ನು ವೃಥಾ ಪ್ರಯಾಸಗೊಳಿಸಿ, ಪಾಪ ಕ್ಕೆ
ಗುರಿಯಾಗುತ್ತಿರುವನಷ್ಟೆ. ಆಗಲಿ! ಇನ್ನೇನು ಮಾಡಬಲ್ಲನು?
ದೈವದ್ವೇಷವು ಹೆಚ್ಚಿದಷ್ಟೂ ಅವನ ವಿನಾಶಕಾಲವು ಬಹಳ ಸಮೀಪ
ವಾಗುತ್ತಿದೆ. ಈಗ ನಾನು ದೇವಕೀ ವಸುದೇವರ ಬಳಿಗೆಹೋಗಿ
ಅವರ ಕ್ಷೇಮಲಾಭಗಳನ್ನು ವಿಚಾರಿಸಿಕೊಂಡು, ಅವರಿಗೆ ಧೈರ್ಯವನ್ನು
ಸೂಚಿಸಿ, ಅಲ್ಲಿಂದ ಗೋಕುಲಕ್ಕೆ ತರಳುವೆನು.
[ಎಂದು ನಿಶ್ಚಯಿಸಿ ನಾರದರು ದೇವಕೀ ವಸುದೇವರಿರುವ ಸೆರೆ
ಮನೆಯನ್ನು ಕುರಿತು ತೆರಳುವರು]

            ಪ್ರದೇಶ:- ಸೆರೆಮನೆ.
ದೇವಕಿ:-ನಾಥಾ! ನಮ್ಮ ಕಷ್ಟದಶೆಗೆ ಪರಿಹಾರವೇ ಇಲ್ಲವಾಗಿದೆ!
ದುರಾತ್ಮನಾದ ಕಂಸನ ಪ್ರತಾಪವು ನಿರ್ಮೂಲವಾಗುವವರೆಗೂ