ಪುಟ:ಶ್ರೀ ಕೃಷ್ಣ ಲೀಲೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೮೭ಚತುರ್ಥಾoಕಂ

ನಮಗೀ ಕಾರಾಗೃಹವಾಸವು ತಪ್ಪಲಾರದು. ಪ್ರಾಣೇಶ್ವರಾ ! ಎಂದಿ
ಗಾದರೂ ಈ ಬಂಧನದಿಂದ ಬಿಡುಗಡೆಯಾಗುವ ಪಕ್ಷಕ್ಕೆ, ನಾವೀ
ಮಧುರಾಪುರವನ್ನು ಬಿಟ್ಟು ಮತ್ತೆಲ್ಲಿಗಾದರೂ ಹೋಗಬೇಕು. ಕಡೆಗೆ
ಸಿಂಹ ಶಾರ್ದೂಲಾದಿ ದುಷ್ಟಮೃಗಗಳಿರುವ ಘೋರಾರಣ್ಯದಲ್ಲಾದರೂ
ವಾಸಮಾಡಬಹುದೇ ಹೊರತು ಕ್ರೂರ ಕಿರಾತರಾದ ಮಾನವಪಶುಗಳ
ನೆರೆಯಲ್ಲಿ ವಾಸಮಾಡಬಾರದು. ನನ್ನ ಮನಸ್ಸಿಗೆ ಅಷ್ಟು ಬೇಸರಿಕೆ
ಯುಂಟಾಗಿರುವುದು!

ವಸುದೇವ:-ಸಾಧ್ವೀಮಣೀ! ನನ್ನ ಮಾತನ್ನು ಲಾಲಿಸಿ ಕೇಳು.

ಶ್ಲೋ|| ಪಾತಾಳೇ ಬ್ರಹ್ಮ ಲೋಕೇಸುರ ಪತಿಭವನೇ ಸಾಗರಾ೦ತೇದಿಗಂತೇ।
       ಶೈಲಾಗ್ರೇವಹ್ನಿ ಮಧ್ಯೇ ಗಹನ ಹಿಮಗಿರೌ ತೀವ್ರ ವಜ್ರಾಸಿ ದುರ್ಗೇ||
       ಭೂಗರ್ಭೇ ಸನ್ನಿವೇಶೇ ಮದಕರಿ ಘಟೇಸ೦ಕಟೇವಾ ಬಲೇವಾ|
       ಸಾವಶ್ಯ ಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ||

ಪಾತಾಳದಲ್ಲಿಯೂ, ಬ್ರಹ್ಮಲೋಕದಲ್ಲಿಯೂ, ಸ್ಪರ್ಗಲೋಕದ
ಲ್ಲಿಯೂ, ಸಮುದ್ರದಾಚೆಯೂ, ಚಕ್ರವಾಳದಲ್ಲಿಯೂ, ಬೆಟ್ಟದ ಮೇ
ಲೆಯೂ, ಅಗ್ನಿ ಮಧ್ಯದಲ್ಲಿಯೂ, ಹಿಮಾಲಯದಲ್ಲಿಯೂ, ಮತ್ತೆ ಬೇ
ಕಾದ ಸ್ಥಳದಲ್ಲಿಯೂ, ಮನುಷ್ಯರು ಎಲ್ಲಿದ್ದರೂ ಪೂರ್ವಕರ್ಮವು
ಮಾತ್ರ ಬಿಡಲಾರದು. ಸರ್ವದಾ ಹಿಂಬಾಲಿಸುತ್ತದೆ. ಆವರವರು ಮಾ
ಡಿದ ಶುಭಾಶುಭ ಕರ್ಮಗಳಿಗೆ ತಕ್ಕ ಫಲವನ್ನು ಅನುಭವಿಸಿಯೇ ತೀರ
ಬೇಕು. ಪ್ರಾಣೇಶ್ವರೀ ! ಭಕ್ತವತ್ಸಲನಾದ ಭಗವಂತನಲ್ಲಿ ದೃಢವಾದ
ಭಕ್ತಿಯನ್ನಿಟ್ಟು ನೆಮ್ಮದಿಯಾಗಿರು!

  (ಎಂದು ಮಾತನಾಡುತ್ತಿರುವಾಗ್ಗೆ ನಾರದರು ಪ್ರವೇಶಿಸುವರು.)

ವಸುದೇವ:ತಪೋಧನರಿಗೆ ವಂದಿಸುವೆನು.
ನಾರದ-ಜಯವಿಜಯೀಭವ!
ದೇವಕಿ: ಪೂಜ್ಯರಿಗೆ ನಮಸ್ಕರಿಸುವೆನು.
ನಾರದ:-ದೀರ್ಘ ಸುಮಂಗಲೀಭವ!
ವಸುದೇವ-ಮಹಾತ್ಮರೆ! ತಮ್ಮ ಸಂದರ್ಶನವು ಸಾಮಾನ್ಯ
ವಾಗಿ ಲಭಿಸತಕ್ಕುದಲ್ಲ! ನಾವೀ ಸೆರೆಮನೆಯಲ್ಲಿದ್ದಾಗ್ಯೂ, ನಮ್ಮ