ಆ ವಿವರ ವೇನೆಂದರೆ- “ಕೃಷ್ಣೋ ಬ್ರಹ್ಮೈವಶಾಶ್ವತಂ|
ರುಕ್ಮಿಣೀ ಭಾರ್ಗವೀ ಸ್ವಯಂ ಶೇಷೋನಾಗೋಭವೇದ್ರಾಮಃ|
ನಿಗಮೋ ವಸುದೇವೋಯ:| ದೇವಕೀ ಬ್ರಹ್ಮಪತ್ನೀಸಾ|
ಯೋನಂದಃ ಪರಮಾನಂದಃ | ಯಶೋದಾ ಮುಕ್ತಿಗೇಹಿನೀ| ಗೋ
ಕುಲಂ ವರವೈಕುಂಠಂ| ಗಾವೋಋಚಃ| ಗೋಪ್ಯೋ ಬ್ರಹ್ಮವಾದಿ
ನಃ | ವಂಶಸ್ತು ಭಗರ್ವಾ ರುದ್ರಃ | ಅಂಬಿಕಾಯೋಗಮಾಯಾಸಾ|
ದಯಾಸಾರೋಹಿಣೀ | ಕಲಿಃ ಕಂಸಸ್ಸಭೂವತಿಃ| ಲೋಭಕ್ರೋಡ
ಭಯದೈತ್ಯಾಃ|| (ಶ್ರೀಕೃಷ್ಣೋಪನಿಷತ್ತು)
ಶ್ರೀಹರಿಯು ಕೃಷ್ಣನಾಗಿಯೂ, ಲಕ್ಷ್ಮಿಯು ರುಕ್ಕಿಣಿಯಾಗಿ
ಯೂ, ಶೇಷನು ಬಲರಾಮನಾಗಿಯೂ, ಋಕ್ಕುಗಳು ಗೋವುಗಳಾಗಿ
ಯೂ, ಖುಷಿಗಳು ಗೋಪಿಯರಾಗಿಯೂ, ನಿಗಮಗಳು ವಸುದೇವ
ನಾಗಿಯೂ,ಸರಸ್ವತಿಯು ದೇವಕಿಯಾಗಿಯೂ,:ಆನಂದವು ನಂದವಾಗಿ
ಯೂ,ಮುಕ್ತಿಕಾಂತೆಯು ಯಶೋದೆಯಾಗಿಯೂ, ವೈಕುಂಠವು
ಗೋಕುಲವಾಗಿಯೂ, ಪರಮಶಿವನು ಮುರಳಿಯಾಗಿಯೂ, ಪಾರ್ವತಿ
ಯು ಯೋಗಮಾಯೆಯಾಗಿಯೂ, ದಯೆಯು ರೋಹಿಣಿಯಾಗಿ
ಯೂ, ಕಲಿಯು ಕಂಸನಾಗಿಯೂ, ಲೋಭ-ಕ್ರೋಧ-ಭಯಾದಿಗಳು
ಮಿಕ್ಕ ರಾಕ್ಷಸರಾಗಿಯೂ ಜನಿಸಿದರು.
ಇಂತು ಷಡ್ಗುಣೈಶ್ವರ್ಯಸಂಪನ್ನನಾದ ಪರಮಾತ್ಮನು ಲೀಲಾಮಾ
ನುಷ ಶರೀರವನ್ನು ಪರಿಗ್ರಹಿಸಿ ಗೋಕುಲದಲ್ಲಿ ತೋರ್ಪಡಿಸಿದ ವರಮಾ
ದ್ಭುತ ಕಾರ್ಯಗಳು ಆದಿಯಲ್ಲಿ ಶ್ರೀ ವೇದವ್ಯಾಸರಿಂದ ಭಾಗವತರೊಡ
ವಾಗಿ ವಿರಚಿಸಲ್ಪಟ್ಟು, ವ್ಯಾಸಪುತ್ರರಾದ, ಶ್ರೀಶುಕಾಚಾರ್ಯರಿಂದ ಪರೀಕ್ಷಿ ದ್ರಾಜನಿಗುವದೇಶಿಸಲ್ಪಟ್ಟು, ವ್ಯಾಸಶಿಷ್ಯರಾದ ಸೂತಪೌರಾಣಿಕರಿಂದ
ನೈಮಿಶಾರಣ್ಯವಾಸಿಗಳಾದ ಶೌನಕಾದಿಮಹರ್ಷಿಗಳಿಗೆ ತಿಳುಹಿಸಲ್ಪಟ್ಟ
ಈ ಪುಣ್ಯಚರಿತ್ರೆಯನ್ನು "ಶ್ರೀ ಕೃಷ್ಣ ಲೀಲೆ” ಎಂಬೀಗ್ರಂಥರೂಪವಾಗಿ
ವಿರಚಿಸಿರುವೆನು. “ಪ್ರಮಾದೋಧೀಮತಾಮಪಿ” ಎಂಬಂತೆ, ಈ ಗ್ರಂಥ
ದಲ್ಲಿ ಭ್ರಮಪ್ರಮಾದಾದಿಗಳು ಸೇರಿರಬಹುದು. ಪರಶ್ರೇಯೋಭಾಲಾಷಿ
ಗಳಾದ ಪಂಡಿತರು, ರಾಜಹಂಸಗಳಂದದಿ ಸಾರವನ್ನು ಗ್ರಹಿಸಿ ಆನಂದಿಸ