ಪುಟ:ಶ್ರೀ ಕೃಷ್ಣ ಲೀಲೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬೇಕಾಗಿ ಪ್ರಾರ್ಥಿಸುವೆನು, ಭಕ್ತಿರಸಭರಿತವಾದ ಕವಿತ್ವರಚನೆಯಲ್ಲಿ
ಅಗ್ರಗಣ್ಯರೆನಿಸಿದ ಶ್ರೀ ಪೋತನಾಮಾತ್ಯರಿಗೂ , ಶ್ರೀ ಪುರಂದರದಾಸರಿ
ಗೂ, ವಿನಯಪೂರ್ವಕವಾಗಿ ನಮಸ್ಕರಿಸುವೆನು.

ಸಹಾಯಕ ಪ್ರಶಂಸೆ
     
     “ಶ್ರೀ ಕೃಷ್ಣ ಲೀಲೆ' ಯೆಂಬೀ ಗ್ರಂಥವನ್ನು ಭಕ್ತಿವಿಶ್ವಾಸಗಳಿಂದ
ಗೌರವಿಸಿ, ಶ್ರೀ ಕೃಷ್ಣಕಧಾಮೃತವನ್ನು ಸವಿದು ಆನಂದಿಸುತ್ತ,
ತಮ್ಮ೦ತೆಯೇ ಭಕ್ತಜನರೆಲ್ಲರೂ ವಾಸಿ ಆನಂದಿಸಬೇಕೆಂಬ ಸದುದ್ದೇಶ
ದಿಂದ ಈ ಗ್ರಂಥಮುದ್ರಣಕ್ಕೆ ಧನಸಹಾಯವನ್ನು ಮಾಡಿರುವ ನನ್ನ
ಪ್ರಿಯಮಿತ್ರರಾದ, ಬೆಂಗಳೂರು ಸಿಟಿ ದೊಡ್ಡದೇಟಿಯಲ್ಲಿ ಕಂಬಳಿ ವರ್ತಕ
ರಾಗಿರುವ ಶ್ರೀಯುತಹನುಮಪ್ಪನವರ ಕುಮಾರರು ಶ್ರೀರ್ಮಾ ಸಂಜೀ
ವಪ್ಪ ನವರಿಗೂ, ಇವರ ಭಾಗಸ್ತರಾದ ಶ್ರೀಯುತ ಗಾಳೆಪ್ಪನವರಿಗೂ,
ಕೃತಜ್ಞತಾ ಸೂಚಕವಾದ ನನ್ನ ಪ್ರೇಮಾರಗಳನ್ನು ಸಮರ್ಪಿಸುತ್ತಿ
ರುವೆನು. ಈ ಪುಣ್ಯಾತ್ಮರ ಸಹಾಯದಿಂದಲೂ, ಈ ಗ್ರಂಥವನ್ನು
ಪ್ರೀತಿ ವಿಶ್ವಾಸಗಳಿಂದ ಮುದ್ರಣಕ್ಕೆ ಸ್ವೀಕರಿಸಿ, ಒಂದು ತಿಂಗಳ ಅವಧಿ
ಯೊಳಗಾಗಿ, ಅಂದವಾಗಿ ಮುದ್ರಿಸಿಕೊಟ್ಟ ನನ್ನ ಹಿತೈಷಿಗಳಾದ
ಮೆಸರ್ಸ್, ವೆ. ಬಿ. ಸುಬ್ಬಯ್ಯ ಅಂಡ್ ರ್ಸಸ್ ಮುದ್ರಾಕ್ಷರಶಾಲಾ
ಪ್ರೊದ್ರೈಟರವರಾದ ಮ|| ರಾ|| ರಾ||ವಿ. ಬಿ. ಶ್ರೀಕಂಠಯ್ಯನವರಿಗೂ
ನನ್ನ ಮನಃಪೂರ್ವಕವಾದ ಧನ್ಯವಾದಗಳನ್ನು ಸಮರ್ಪಿಸುತ್ತಿರುವೆನು.
ಸತ್ಕಾರ್ಯ ಪ್ರೊತ್ಸಾಹಕರಾದ ಈ ನನ್ನ ಹಿತಮಿತ್ರರ ಸುಹೃದ್ಭಾವವು
ಶ್ರೀ ಕೃಷ್ಣಪರಮಾತ್ಮನ ಸೇವಾರೂಪವಾಗಿ, ಸದಾ ಸಂತೋಷದಾಯ
ಕವಾಗಲೆಂದು ಹಾರೈಸುತ್ತಿರುವೆನು.

ಸರ್ವೆಜನಾಸ್ಸುಖಿನೋಭವಂತು!
ಪರಮ ಭಾಗವತರ ಪಾದಧೂಳಿ
ಕಾ, ಶಿಮಾಮದಾಸ
ಗ್ರ೦ಥಕರ್ತ.