ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೯೮ಕೃಷ್ಣಲೀಲೆ

ಓಡಿಹೋಗುವನು. ಯಶೋದಮ್ಮಾ!ಮಗನಿಗೆ ನೀನಾದರೂ ಬುದ್ದಿ
ಹೇಳಬಾರದೇನಮ್ಮ?

    ಯಶೋದೆ:- ರಾಗ - ಮಧ್ಯಮಾವತಿ - ಅಟ

 ಯಾಕೆ ದೂರುವಿರಮ್ಮ| ಶ್ರೀ ಕೃಷ್ಣನು ಏನು ಮಾಡಿದನಮ್ಮ ||ಪ||
 ಶ್ರೀಕರ ಮೂರ್ತಿಯು ಪುಟ್ಟಿದ ಸಲುವಾಗಿ| ಗೋಕುಲವೀಗ ಮಂಗಳದಿ ಶೋಭಿ
                                  ಪುದು||ಯಾಕೆ||ಅ-ಪ |
 ಮನೆಯೊಳಗಾಡುವನು | ಎಂದಿಗು ನೆರಮನೆಗಳಿಗೆ ಪೋಗನು | ವನಜಲೋ
ಚನೆಯರೆ | ಬರಿದೆ ದೂರುವಿರೇಕೆ ಅನುದಿನ ಶಿವರಾಮ ದಾಸ ಪೋಷಕನನ್ನು||ಯಾಕೆ||

   ಅಮ್ಮಾ ಗೋಪ ಲತಾಂಗಿಯರೆ! ನಮ್ಮ ಕೃಷ್ಣನು ಯಾವಾಗ
ಲೂ ಮನೆಯಲ್ಲಿಯೇ ಆಡುತ್ತಿರುವನು. ಒಮ್ಮೆಯಾದರೂ ಮನೆಯ
ನ್ನು ಬಿಟ್ಟು ಹೊರಗೆ ಹೋದವನಲ್ಲ. ಮುದ್ದು ಬಾಲಕನಾದ ಕೃಷ್ಣ
ನನ್ನು ಸುಮ್ಮನೆ ದೂರುವುದರಿಂದೇನು ಪ್ರಯೋಜನವಮ್ಮ, ಸುಂದರಿ
ಯರೆ! ಕೃಷ್ಣನನ್ನು ಬರಿದೆ ದೂರಬೇಡಿರಮ್ಮ.
     [ಎಂದು ಯಶೋದೆಯು ಗೋಪಿಯರಿಗೆ ಸಮಾಧಾನ ಹೇಳುವ
ಳು. ಕೃಷ್ಣನು ಏನೂ ಅರಿಯದಂತೆ ಗಂಭೀರವಾಗಿ ಕುಳಿತಿರುವನು.]

ಗೋಪಿಯರು:- ಯಶೋದಮ್ಮಾ ! ನೋಡಿದೆಯೋ ? ಮನೆ
ಮನೆಯಲ್ಲಿಯೂ ಸುಳಿದಾಡುವ "ನವನೀತ ಪಂಡಿತನು” ನಿನ್ನ ಬಳಿಯಲ್ಲಿ
ಏನೂ ಅರಿಯದಂತೆ ಬಹಳ ಸಂಭಾವಿತನಾಗಿ ಕುಳಿತಿರುವ ಸೊಬಗು |
ಎಲವೋ ಚೋರ ಶಿಖಾಮಣಿ !
     [ಅನ್ನುವಾಗ್ಗೆ ನಾರದರು ಪ್ರವೇಶಿಸುವರು.]

ನಾರದ:-
ಶ್ಲೋ|| ವ್ರಜೇವ ಸಂತಂ ಭವನೀತ ಚೋರಂ | ಗೋಪಾಂಗನಾ ಮಾನಸಭಾಗ್ಯ ಚೋ
      ರಂ | ಅನೇಕ ಜನ್ಮಾರ್ಜಿತ ಪಾಪಚೋರಂ | ಚೂರಾಗ್ರಗಣ್ಯಂ ಕೃಷ್ಣಂ
      ನಮಾಮಿ ||
     
     ಗೋಕುಲವೆಂಬ ಮಧುವನಕ್ಕೆ ವಸಂತನೂ, ಗೋಪಿಯರ ಮನೋ
ಭಾಗ್ಯವನ್ನಪಹರಿಸಿದವನೂ, ಶರಣಾಗತರ ಅನೇಕ ಜನ್ಮಾರ್ಜಿತ ಪಾಪ