ಪುಟ:ಶ್ರೀ ಕೃಷ್ಣ ಲೀಲೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೯೯ಚತುರ್ಥಾಂಕಂ

ಬಂಧನಗಳನ್ನಪಹರಿಸುವ ವಿಶ್ವನಾಟಕ ಸೂತ್ರಧಾರಿಯೂ ಆದ ಕೃಷ್ಣಾ!
ನಿನ್ನ ಪಾದಾರವಿಂದಗಳಿಗೆ ವಂದಿಸುವೆನು.
(ಎಂದು ನಾರದರು ಕೃಷ್ಣ ಮೂರ್ತಿಗೆ ವಂದಿಸುವರು. ಯಶೋದೆ
ಮುಂತಾದ ಸ್ತ್ರೀಯರು ನಾರದರಿಗೆ ವಂದಿಸಿ ಅವರಿಂದ ಆಶೀರ್ವಾ
ದವನ್ನು ಪಡೆಯುವರು.)

ಶ್ರೀಕೃಷ್ಣ:- ಎಲೈ ತ್ರಿಲೋಕ ಸಂಚಾರಿಯೆ! ಪ್ರಪಂಚ ವರ್ತ
ಮಾನ ವಿಶೇಷಗಳೇನು ?

ನಾರದ:- ಸರ್ವಜ್ಞನೇ! ಈಗ್ಗೆ ಎರಡು ವಿಶೇಷಗಳು ನಡೆ
ದಿರುವುವು.

ಶ್ರೀಕೃಷ್ಣ:- ಯಾವ ವಿಶೇಷಗಳು ?
ನಾರದ :- ಮಾಯಾ ಕಾಮಿನಿಯಾಗಿ ಬಂದ ಪೂತನೆಯನ್ನು
ಯಮಸದನಕ್ಕೆ ಕಳುಹಿಸಿದುದೊಂದು. ಮಾಯಾವಿಯಾದ ಶಕಟಾಸುರ
ನನ್ನು ಮೃತ್ಯುದೇವತೆಗೆ ತುತ್ತು ಮಾಡಿದುದೊಂದು.
ಶ್ರೀಕೃಷ್ಣ:- (ನಸುನಗುವನು.) .
ನಾರದ:- ಮತ್ತೊಂದು ಈಗ ನಡೆಯುತ್ತಿರುವುದು.
ಶ್ರೀಕೃಷ್ಣ:- ಎಲ್ಲಿ?
ನಾರದ:-ಇಲ್ಲಿಯೇ.
ಶ್ರೀಕೃಷ್ಟ:-ಏನು ?
ನಾರದ:-ಗೋಪ ಲತಾಂಗಿಯರು ನಿನ್ನ ವಿಚಿತ್ರ ಕಾರ್ಯಗಳನ್ನು
ನಿನ್ನ ತಾಯೊಂದಿಗೆ ದೂರು ಹೇಳುತ್ತಿರುವುದು.

ಯಶೋದೆ:- ನಾರದರೆ ! ಈ ಕೃಷ್ಣನ ಚರ್ಯೆಗಳೆಲ್ಲವೂ ಅಪೂರ್ವ
ವಾಗಿರುವುವು. ನನಗೇನೋ ಒಂದಾದರೂ ಗ್ರಾಹ್ಯವಾಗುವುದಿಲ್ಲ.
ಅದೇನು ವಿಚಿತ್ರ ಚರ್ಯೆಗಳೋ ನಾನು ಬೇರೆ ಗ್ರಹಿಸಲಾರೆನು.

ನಾರದ:- ಅಮ್ಮಾ ಯಶೋದೆ ! ಬಾಲ ಗೋಪಾಲನ ಲೀಲಾ
ವಿನೋದಗಳನ್ನು ಕಣ್ಣಾರ ನೋಡುತ್ತ, ಕೈಯ್ಯಾರ ಸಲಹುವ ನಿನ್ನ
ಪುಣ್ಯವೇ ಪುಣ್ಯವು. ಈ ಪುಣ್ಯವು ಇಂದ್ರಾದಿ ಬೃಂದಾರಕರಿಗೆ ಸಹ ಲಭಿ
ಸ ತಕ್ಕುದಲ್ಲ. ನೀನೇ ಧನ್ಯಳು!
      [ಎಂದುತ್ತರವಿತ್ತು ಕೃಷ್ಣನನ್ನು ತಿಲಕಿಸುವರು.)