ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


೧೦೧ಚತುರ್ಥಾಂಕಂ.

ಶ್ರೀ ಕೃಷ್ಣ:- ನೋಡಮ್ಮ! (ಎಂದು ಬಾಯನ್ನು ತೆರೆವನು.)
               ವಿಶ್ವರೂಪ ಸಂದರ್ಶನ.

Insert picture >>

    (ಯಶೋದೆಗೆ ಶ್ರೀಕೃಷ್ಣನ ಬಾಯಲ್ಲಿ ಸಮಸ್ತ ಪ್ರಪಂಚವೂ
ಕಾಣಿಸುವುದು. ಅದ್ಭುತ ಪ್ರಮೋದ ಮಗ್ನಳಾದ ಯಶೋದೆಯು ತನ್ನಲ್ಲಿ
ವಿತರ್ಕಿಸುವಳು.)

ಮ|| ಕನಸೋ ವೈಷ್ಣವ ಮಾಯೆಯೋ! ಇತರ ಸಂಕಲ್ಪಾರ್ಥವೋ! ಸತ್ಯವೋ|
     ಘನ ಸೂರ್ಯಾಗ್ನಿ ಶಶಾಂಕತಾರಕ ಮಹಾ ಕೂರ್ಮಾಹಿ ಭೂತಾದಿಗಳ್| ಮುನಿ
     ಗಂಧರ್ವ ಚರಾಚರಾದಿ ಭುವನಂಗಳ್ ತೋರ್ಪವೀ ಮೂರ್ತಿ ಯೋಳ್ |
     ಮನ ವಿಭ್ರಾಂತಿಯೋ ಕಾಣೆನಾಂ ವರಯಶೋದಾ ದೇವಿಯೋ ಅಲ್ಲವೋ||

     ಆಹಾ! ಇದೇನಾಶ್ಚರ್ಯ! ಇದೇನದ್ಭುತ! ಏನಿದು ! ಈ ಬಾಲ
ಕನ ಬಾಯಲ್ಲಿ ಸಕಲ ಚರಾಚರ ಪ್ರಪಂಚವೂ ಕಾಣಿಸುತ್ತಿರುವುದಲ್ಲಾ !
ಚರಾಚರ ಭೂತಕೋಟಿಯ, ಅಂತರಿಕ್ಷವೂ, ದಿಕ್ಕುಗಳೂ, ಬೆಟ್ಟ
ಗಳೂ, ದ್ವೀಪಗಳೂ, ಸಮುದ್ರಗಳೂ, ಭೂಮಂಡಲವೂ, ವಾಯು
ವೂ, ಅಗ್ನಿಯೂ ಸೂರ್ಯಚಂದ್ರ ನಕ್ಷತ್ರಾದಿಗಳೂ ಸ್ವರ್ಗಾದಿ ತೇಜೋ