೧೦೨ಕೃಷಲೀಲೆ.
ಲೋಕಗಳೂ, ಆತಲಾದಿ ಅಧೋಲೋಕಗಳೂ, ಸತ್ವರಜಸ್ತಮೋ
ಗುಣಗಳ, ಗರುಡ ಗಂಧರ್ವ ಕಿನ್ನರ ಕಿಂಪುರುಷಾದಿ ಸಮಸ್ತ ದೇವ
ರಾಕ್ಷಸ ಮನುಷ್ಯಾದಿ ಸೃಷ್ಟಿಯೂ, ಎಲ್ಲವೂ ಈತನ ಬಾಯಲ್ಲಿಯೇ
ಕಾಣುವುದಲ್ಲಾ ! ಇದೇನು ಕನಸಾಗಿರಬಹುದೆ? ಅಲ್ಲ! ಕನಸಲ್ಲ! ನಾನು
ಏಚ್ಚರವಾಗಿಯೇ ಇರುವಲ್ಲಿ ಕನಸಲ್ಲಿಂದ ಬಂದೀತು? ಇದೇನು ವಿಷ್ಣು
ಮಾಯೆಯೋ? ಅದೂ ಅಲ್ಲ. ಮಾಯೆಯಾಗಿದ್ದರೆ ಇಲ್ಲಿರುವ ಯಾ
ರಿಗೂ ಕಾಣದೇ ನನಗೊಬ್ಬಳಿಗೆ ಮಾತ್ರವೇ ಕಾಣಿಸುವುದೇಕೆ? ಅಥವಾ
ಮನಸ್ಸಿನ ಕಳವಳವೆ ? ಅಲ್ಲ, ಕಳವಳವೂ ಅಲ್ಲ. ಮನಸ್ಸು ನಿರ್ಮಲ
ವಾಗಿಯೇ ಇದೆ. ಯಾರ ಬಾಯೊಳಗೆ ಈ ವಿಚಿತ್ರವೆಲ್ಲವೂ ಕಾಣುವು
ದೊ ಆ ಶ್ರೀ ಕೃಷ್ಣನೂ ಕೂಡ ಅಲ್ಲಿಯೇ ಕಾಣ ಬರುತ್ತಿರುವನಲ್ಲಾ!
ಒಳಗೂ ಹೊರಗೂ ಒಂದೇ ವಿಧವಾಗಿ ಸಮಸ್ತ ಪ್ರಪಂಚವೂ ಈತನ
ಲ್ಲಿ ಕಾಣಿಸುವುದಲ್ಲಾ! ಒಂದು ವೇಳೆ ಈ ಕೃಷ್ಣನಲ್ಲಿಯೇ ಗುಪ್ತ
ವಾದ ಮಹಿಮೆ ಏನಾದರೂ ಇರಬಹುದೆ? ಇದ್ದರೂ ಇರಬಹುದು!
ಆಹಾ! ಈತನು ಸಾಕ್ಷಾದ್ಭವಗವಂತನೇ ಹೊರತು ಬೇರಲ್ಲ! (ಎಂದು
ನಿಶ್ಚಯಿಸಿಕೊಂಡು ಶ್ರೀ ಕೃಷನ ವಿಶ್ವರೂಪವನ್ನು ಕುರಿತು ಹೀಗೆಂ
ದು ಬಣ್ಣಿಸುವಳು.)
ದಂಡಕಂ:-ಶ್ರೀ ಮಾನಿನೀ ಮಾನಸಾಂಭೋಜ ಮಿತ್ರಾ| ಮುನಿಸ್ತೋತ್ರ ಪಾ
ಶ್ರಾ| ಸುರೇಂದ್ರಾದಿ ಬೃಂದಾರಕ ವ್ರಾತ ಸಂಸೇವಿತಾನಂದ ಗಾತ್ರಾ ! ಮಹಾದೇವ
ಗೋವಿಂದ ನಾರಾಯಣಾಧೋಕ್ಷಜಾ ವಾಮನಾ! ವಾಸುದೇವಾ ಹೃಷಿಕೇಶ ದಾ
ಮೋದರಾ! ವಿಶ್ವನಾಥಾಚ್ಯುತಾನಂತ ಶ್ರೀ ಪದ್ಮನಾಭಾ ಮುಕುಂದಾ | ಸದಾನಂದ
ಸಂದೋಹ ಶ್ರೀವತ್ಸ ಕೇಯೂರ ಮಾಣಿಕ್ಯ ವೈಡೂರ್ಯ ಸಂಕೀರ್ಣ ಸೌವರ್ಣ ಹಾರಾ
ವಳೀ ಭೂಷಣಾಲಂಕೃತಾ ಪಾರ ಶೋಭಾಯ ಮಾನಾ| ಗದಾ ಶಂಖ ಚಕ್ರಾದಿ ದಿವ್ಯಾ
ಯುಧಾಕೀರ್ಣ ರಾರಾಜಿತೋದ್ದಂಡ ಹಸ್ತ ಪ್ರಶಸ್ತಾ| ಮಹಾಭೀಷಣಾಕಾರದೌ
ರ್ಜನ್ಯ ಸಂಘಾತ ದುಷ್ಟ ಕ್ರಿಯಾಸಕ್ತ ದೈತ್ಯಾನ್ವಯಾನೀಕ ಕಂಠಾವಳೀ ಲುಂಠ
ನೋತ್ಕಂಠ ವೈಕುಂಠವಾಸಾ | ಸುಧೀಪೋಷ | ಕಾರುಣ್ಯ ದಾಕ್ಷಿಣ್ಯ ಸತ್ಯ ಕ್ಷಮಾ
ಮೋದ ಶಾಂತಾದಿ ಸದ್ದದ್ಮಭೂಷಾ | ಜಿಗೀಷಾ | ಅನನ್ಯಾಶ್ರಿತಾಶೇಷ ಗೋಪಾಂ
ಗನಾತೋಷ| ನಿರ್ದೋಷ ನಿರ್ಲಿಪ್ತತೇಜೋ ವಿಶೇಷಾ| ಪ್ರಪ೦ಚಾರ್ಥ ವೇದಾರ್ಥ
ನಿತ್ಯಾರ್ಥ ಸತ್ಯಾರ್ಥ ಸಂಪೂರ್ಣ ಸಂಭಾವ್ಯ ಲೀಲಾ ವಿನೋದಾ| ಸನಂದಾದಿ ಯೋ
ಗೀಂದ್ರ ಚಿತ್ತಾಬ್ಜ ಸಿಂಹಾಸನಾಸೀನ ಲೋಲಾ| ದಯಾಶೀಲ ಗೋಪಾಲ ಬಾಲಾ|
ಹರೇ ಕೃಷ್ಣ ತುಭ್ಯಂ ನಮೋ ಕೃಷ್ಣ ಕೃಷ್ಣಾ ನಮಸ್ತೇ ನಮಸ್ತೇನಮಃ ||