ಪುಟ:ಶ್ರೀ ಕೃಷ್ಣ ಲೀಲೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚತುರ್ಥಾಂಕಂ ೧೦೩

ಶ್ಲೋ|| ಅಥೋ ಯಥಾವನ್ನ ವಿತರ್ಕ ಗೋಚರಂ, ಚೇತೋಮನಃ ಕರ್ಮವಚೋ
ಭಿರಂಜಸಾ | ಯದಾಶ್ರಯ೦ ಏನಯತಃ ಪ್ರತೀಯತೇ, ಸದುರ್ವಿಭಾವ್ಯಂ
ಪ್ರಣತಾಸ್ಮಿ ತತ್ಪದಂ||
ಅಹಂ ಮಮಾಸೌಪತಿ ರೇಷಮೇ ಸುತೋ ವ್ರಜೇಶ್ವರ ಸ್ಯಾಖಿಲವಿತ್ತ ಪಾ
ಸತೀ | ಗೋಪ್ಯಶ್ಚ ಗೋಪಾಸ್ಸಹ ಗೋಧನಾಶ್ಚ, ಯಸ್ಮಾಯ ಯೇತ್ತಂ
ಕುಮತಿಸ್ಸಮೇಗತಿಃ ||

ಯಾವಾತನನ್ನು ಬುದ್ಧಿಯಿಂದಾಗಲಿ, ಮನಸ್ಸಿನಿಂದಾಗಲಿ, ಕರ್ಮಗ
ಳಿಂದಾಲಿ, ವಾಕ್ಕಿನಿಂದಾಗಲಿ ಯಥಾರ್ಥವಾಗಿ ತಿಳಿಯಲಾಗದೋ, ಈ
ಪ್ರಪಂಚವೆಲ್ಲವೂ ಯಾವಾತನನ್ನು ಆಶ್ರಯಿಸಿರುವುದೋ, ಚಕ್ಷುವೇ
ಮೊದಲಾದ ಇಂದ್ರಿಯಗಳಿಗೆ ಕಾರಣನಾಗಿಯೂ, ಚಿತ್ತವೃತ್ತಿಗಳಿಗೆ
ಅಭಿವ್ಯಕ್ತನಾಗಿಯೂ ಇರುವ ಯಾವಾತನಿಂದ ಸಮಸ್ತವೂ ಪ್ರಕಾಶಿತ
ವಾಗಿರುವುದೋ, ಅಂತಹ ವಾಚಾಮ ಗೋಚಾರನಾದ ಭಗವಂತನಿಗೆ
ನಮಸ್ಕರಿಸುವೆನು. “ಈತನು ನನ್ನ ಪತಿಯು, ಇವನು ನನ್ನ ಮಗನು,
ನಾನು ಗೋಕುಲದ ಅರಸನಾದ ನಂದಗೋಪನ ಸತಿಯು, ಈ ಗೋ
ಪಾಲಕರೂ ಗೋಪಿಯರೂ ಗೋವುಗಳೂ ಮುಂತಾದವರೆಲ್ಲರೂ ನನ್ನ
ವರು, ನಾನು ಸಕಲೈಶ್ವರ್ಯಸಂಪನ್ನಳು, ನಾನು ಮಹಾ ಸಾಧ್ವೀಮಣಿಯು
ಎಂಬೀ ವಿಧವಾದ ಅಹಂಕಾರ ಮಮಕಾರ ರೂಪವಾದ ಭೇದ ಬುದ್ಧಿ
ಯುಂಟಾಗಿರುವುದಕ್ಕೆ ಯಾವಾತನ ಮಾಯೆಯೇ ಕಾರಣವಾಗಿರುವುದೋ
ಅಂತಹ ಸರ್ವತಂತ್ರ ಸ್ವತಂತ್ರನಾದ ಭಗವಂತನೇ ನನ್ನನ್ನು ಕಾಪಾ
ಡಲಿ| ಓ ಭಗವಂತನೇ ! ಪರಮ ಕಾರುಣ್ಯಮೂರ್ತಿಯೇ! ಆಶ್ರಿತ
ವತ್ಸಲನೇ! ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೇ! ಅನಂತ ಕಲ್ಯಾಣ
ಗುಣ ಪರಿಪೂರ್ಣನೇ ! ವಿಶ್ವರೂಪನೇ! ವಿಶ್ವಾತ್ಮಕನೇ ! ವಿಶ್ವನಾಥನೇ !
ವಿಶ್ವ ಸಂರಕ್ಷಕನೇ! ವಿಮಲ ಚಾರಿತ್ರನೇ ! ವೇದಾಂತ ಸ್ವರೂಪನೇ !
ವೇಣುಗೋಪಾಲನೇ ! ಕೃಷ್ಣಾ ! ಕೃಷ್ಣಾ !! ಕೃಷ್ಣಾ!!! (ಎಂದು
ಧ್ಯಾನಮಾಡುತ್ತಾ ಯಶೋದಾ ದೇವಿಯು ಶ್ರೀ ಕೃಷ್ಣನ ಬಾಯನ್ನು
ಮತ್ತೊಂದು ಸಾರಿ ನೋಡುವಾಗ್ಗೆ ಆಕಗೆ ಎಂದಿನಂತೆಯೇ ಶ್ರೀ
ಕೃಷ್ಣನ ಮುದ್ದು ಮೊಗವು ಮಾತ್ರವೇ ಕಾಣಿಸುವುದು. ಆಕೆಯದನ್ನು
ನೋಡಿ, ಆಶ್ಚರ್ಯಚಕಿತಳಾಗಿ, ಏನು ಹೇಳುವುದಕ್ಕೂ ತೋಚದೆ ಅದರ
ಕಾರಣವನ್ನು ತಿಳಿಯಲೆಳಸಿ ಶ್ರೀ ಕೃಷ್ಣನನ್ನೇ ಕೇಳುವಳು.)