ಪುಟ:ಶ್ರೀ ಕೃಷ್ಣ ಲೀಲೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಕೃಷ್ಣಲೀಲೆ

ಯಶೋದೆ:-ಕೃಷ್ಣಾ! ಈಗ ನಿನ್ನ ಬಾಯಲ್ಲಿ ಸಮಸ್ತ ಪ್ರಪಂಚ
ವೂ ಕಾಣಿಸಿತಲ್ಲಾ! ಅದೇನು ಮಹಿಮೆಯೋ?

ಶ್ರೀ ಕೃಷ್ಣ:- ಅಮ್ಮಾ! ನೀನೆಲ್ಲಿಯೋ ಕನಸು ಕಂಡಿರಬಹುದು!
ಸಮಸ್ತ ಪ್ರಪಂಚಗಳೆಂದರೇನು? ನನ್ನ ಬಾಯಲ್ಲಿ ಕಾಣಿಸುವುದೆಂದ
ರೇನು? ಇದೆಲ್ಲವೂ ನಿನ್ನ ಭ್ರಾಂತಿಯಲ್ಲದೆ ಬೇರೊಂದಲ್ಲವಮ್ಮಾ!!

ಯಶೋದೆ:-ಅದು ಹೋಗಲಿ, ಈ ನಂದ ಗೋಕುಲದ ಹಿರಿ
ಯರು ಕಿರಿಯರೆಲ್ಲರೂ ನಿನ್ನನ್ನು ಕುರಿತು ಏನೇನೋ ವಿಚಿತ್ರಗಳು
ಹೇಳಿಕೊಳ್ಳುವರಲ್ಲಾ ! ಅದೇನು ಮಹಿಮೆಯೋ?

ಶ್ರೀ ಕೃಷ್ಯ:-ಅಮ್ಮಾ ! ಲೋಕದಲ್ಲಿ ಜನರು ತಮ್ಮ ತಮಗೆ
ತೋಚಿದ ಹಾಗೆಲ್ಲಾ ಹೇಳಿಕೊಳ್ಳುವರು. ಜನರ ಹೇಳಿಕೆಗೆ ಮೇರೆ
ಯುಂಟೇನಮ್ಮಾ?

ಯಶೋದೆ:-ಅದು ಸರಿ ! ಗಾರ್ಗ್ಯಾದಿ ಮಹರ್ಷಿಗಳೆಲ್ಲರೂ ನಿನ್ನ
ನ್ನು ಭಗವಂತನೆಂದು ಸ್ತೋತ್ರಮಾಡುವರಲ್ಲಾ ! ಅದರ ವಿವರವೇನೋ?

ಶ್ರೀ ಕೃಷ್ಣ:- ಅಮ್ಮಾ! ಅವರಿಗೆ ಮಾಡುವುದಕ್ಕೆ ಬೇರೆ ಕೆಲಸ
ವಾವುದಾದರೂ ಇದ್ದರಲ್ಲವೆ! ಕುಂತೆಡೆಯಲ್ಲಿ ಏನಾದರೂ ಒಂದು
ಕವಿತ್ವ ಮಾಡುತ್ತಿರುವುದೇ ಅವರ ಸ್ವಭಾವವಮ್ಮಾ!
.
ಯಶೋದೆ:-ಆಗಲಿ! ಇತರರ ಮಾತೇ ಬೇಡ. ಈಗ ನಾನೇ
ನಿನ್ನ ಬಾಯಲ್ಲಿ ಸಕಲ ಲೋಕಗಳನ್ನೂ ನೋಡಿದೆನಲ್ಲಾ ! ಆದೂ
ಸುಳ್ಳೇನೊ?
ಶ್ರೀಕೃಷ್ಣ:-ಅಮ್ಮಾ! ನೀನೆಷ್ಟು ಭ್ರಾಂತಚಿತ್ತಳು ! ನಿನ್ನಂ
ತಹ ಹುಚ್ಚು ತಾಯಿಯನ್ನು ನಾನೆಲ್ಲಿಯೂ ನೋಡಿಲ್ಲವಮ್ಮಾ!

ಯಶೋದೆ:-(ಕಳವಳದಿಂದ) ಏನು ಕೃಷ್ಣಾ! ನಾನು ಸುಳ್ಳು
ಹೇಳುವೆನೇನೊ?
ಶ್ರೀ ಕೃಷ್ಣ:-ಸುಳ್ಳಲ್ಲರಮ್ಮಾ! ಒಂದೊಂದು ವೇಳೆ ಮನಸ್ಸಿಗೆ
ಕಳವಳವಾಗುವುದೂ ಉಂಟಮ್ಮಾ!

ಯಶೋದೆ:-(ಸಂಭ್ರಮದಿಂದ ಶ್ರೀ ಕೃಷ್ಣನನ್ನಾಲಿಂಗಿಸಿ ಕೊಂ
ಡು) ಮುದ್ದು ಗೋಪಾಲಾ! ಎನು ಕಲಿತಿರುವೆಯೋ ? ನಿನ್ನ ವಿಚಿತ್ರ