ಪುಟ:ಶ್ರೀ ಕೃಷ್ಣ ಲೀಲೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೫ ಚತುರ್ಥಾ೦ಕಂ,

ಗಳು ನಿನಗೇ ಗೋಚರವಲ್ಲದೆ ನನ್ನಂತಹ ಪಾಮರಳಿಗೆ ತಿಳಿಯ
ಲಾರದು ಕೃಷ್ಣ! ಯಾವ ಜನ್ಮದ ಪುಣ್ಯಫಲದಿಂದ ನನಗೆ ನೀನು
ಪುತ್ರನಾಗಿ ಹುಟ್ಟಿದೆಯೋ, ನನ್ನ ಭಾಗ್ಯವೇ ಭಾಗ್ಯವು! ಕಾರುಣ್ಯಶೀಲ!
ಕರುಣಾಲವಾಲ!! ಗೋಪಾಲಬಾಲ!!!
      (ಎಂದು ಮುದ್ದು ಕೃಷ್ಣನನ್ನು ಯಶೋದಾ ದೇವಿಯು ಆಲಿಂಗನ
ಮಾಡಿಕೊಂಡು ಬ್ರಹ್ಮಾನಂದದಲ್ಲಿ ಮಗ್ನಳಾಗುವಳು.)





ಯಶೋದೆಯು, ಪೂರ್ಣ ಚಂದ್ರಿಕೆಯೆಂಬ ಆಕಳಿನಲ್ಲಿ ಹಾಲು
ಕರೆದು ಶ್ರೀ ಕೃಷ್ಣನಿಗೆ ಕೊಡುವಳು. ಶ್ರೀಕೃಷ್ಣನು ಹಾಲು ಕುಡಿ
ಯತ್ತ ಬೀದಿಗೆ ಬರುವನು. ಉದ್ಧವನು ಶ್ರೀಕೃಷ್ಣ ಸಂದರ್ಶನ
ಕ್ಕಾಗಿ ಬರುವನು.