ವಿಷಯಕ್ಕೆ ಹೋಗು

ಪುಟ:ಶ್ರೀ ಕೃಷ್ಣ ಲೀಲೆ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨ಕೃಷ್ಟಲೀಲೆ

ಶ್ರೀಕೃಷ್ಣ:-
ಸೀ||ಬಾ ಪೂರ್ಣ ಚಂದ್ರಿಕೆ | ಬಾರೆ ಗೋದಾವರಿ! ಬಾರೆ ಭಾಗೀರಥಿ ! ಬಾ ವಿಶಾಲೆ !
    ಬಾ ಸತ್ಯವತಿ ! ಶಾ೦ತೆ ! ಭಾರೆ ಚಿಂತಾಮಣಿ | ಬಾರೆ ಸೌದಾಮಿನಿ ! ಬಾ
    ಲತಾಂಗಿ | ಬಾ ಸರ್ವಮಂಗಳೆ | ಬಾರೆ ಮಂವಾಕಿನಿ ! ಬಾ ಸರಸ್ವತಿ ! ಬೇಗ
    ಬಾ ಧರಿತ್ರಿ|| ಬಾ ಶ್ರೀ ಮಹಾಲಕ್ಷ್ಮಿ ! ಬಾ ಬಾರೆ ನಂದಿನಿ ! ಬಾ ವೈಜಯಂತಿ !
    ನೀ ಬಾರೆ ಯಮುನೆ||

ಗೀ|| ಬಾ ಮನೋಹರಿ ! ಕಲ್ಯಾಣಿ! ಪಂಕಜಾಕ್ಷಿ | ಬಾ ಮದಾಲಸೆ! ಮೈತ್ರೇಯಿ||
     ಮಧುರವಾಣಿ| ಬಾ ಸರೋಜಿನಿ! ಮೋಹಿನಿ! ಕೃಷ್ಣವೇಣಿ! ಬಾರೆ ಮೀನಾಕ್ಷಿ!
     ಕಾಮಾಕ್ಷಿ ! ಬನ್ನಿ ! ಬನ್ನಿ ||

     (ಎಂದು ಶ್ರೀಕೃಷ್ಣನು ಕೂಗುತ್ತಲೇ ಗೋವುಗಳೆಲ್ಲವೂ, ಅನು
ರಾಗಪೂರಿತವಾಗಿ ಅರಚುತ್ತ ಓಡಿಬಂದು ಶ್ರೀಕೃಷ್ಣನ ಸುತ್ತಲೂ
ನಿಲ್ಲುವುವು.)

ಗೋಪಾಲಕರು:-ಕೃಷ್ಣಾ! ಈ ಗೋವುಗಳು ನೀನು ಹೇಳಿದ
ಹಾಗೆಲ್ಲಾ ಕೇಳುತ್ತಿರುವುವು.

ಶ್ರೀಕೃಷ್ಣ:-ಗೆಳೆಯರೇ ! ಅದು ಹೇಗೆ ?

ಗೋಪಾಲಕರು:-ಕೃಷ್ಣಾ ! ನೀನು ಕರೆಯುತ್ತಲೇ ಇವುಗಳೆ
ಲ್ಲವೂ ಇಷ್ಟು ಸೊಂಪಾಗಿ ಕೂಗಾಡುತ್ತ ಬಂದು ನಿಂತಿರುವುವು. ನಾ
ವೇನಾದರೂ ಕೂಗಿದ್ದರೆ ಈ ಮಡುವಿನ ಬಳಿಗೆ ಒಂದಾದರೂ ಬರುತ್ತಿ
ರಲಿಲ್ಲ.

ಶ್ರೀಕೃಷ:- ಮಿತ್ರರೇ ! ಈ ಮಡುವಿನ ಬಳಿಯಲ್ಲಿ ವಿಶೇಷ
ವೇನು?

ಗೋಪಾಲಕರು:-ಕೃಷ್ಣಾ! ಯಮುನಾ ನದಿಯಲ್ಲಿ ಅನೇಕ
ಮಡುವುಗಳಿರುವುವು. ಆದಾಗ್ಯೂ ಈ ಮಡುವಿನಂತಹ ಭಯಂಕರವಾ
ದುದು ಮತ್ತೆಲ್ಲಿಯೂ ಇರಲಾರದು. ಈ ಮಡುವಿನಲ್ಲಿ ಯಾವ ಪ್ರಾಣಿ
ಯಾದರೂ ಒಂದು ತೊಟ್ಟು ನೀರೇನಾದರೂ ಕುಡಿಯಿತಾದರೆ ಆ ಕ್ಷಣ
ದಲ್ಲಿಯೇ ತಲೆ ತಿರುಗಿ ಅಲ್ಲಿಯೇ ಬಿದ್ದು ಸಾಯುವುದು. ಆದುದರಿಂದ