ಪುಟ:ಶ್ರೀ ಕೃಷ್ಣ ಲೀಲೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ


ಚತುರ್ಥಾಂಕಂ.

ತನಕ ನನ್ನ ಮನಸ್ಸಿಗೆ ಸಮಾಧಾನವಿರುವುದಿಲ್ಲ. ನಾಥಾ! ಈ ಪರಿ
ತಾಪವನ್ನು ಸೈರಿಸಲಾರೆನು. ನಡೆಯಿರಿ. ಈಗಲೇ ಕಾಡಿಗೆ ತೆರಳುವೆ!

ನಂದ:-ದೇವೀ! ನನ್ನಭಿಪ್ರಾಯವೂ ಹಾಗೆಯೇ ಇರುವುದು.

ಗೋಪಿಯರು:- ಪೂಜ್ಯರೇ! ಶ್ರೀ ಕೃಷ್ಣಮೂರ್ತಿಯನ್ನು ನೋ
ಡದೆ ಕ್ಷಣಮಾತ್ರವೂ ಜೀವಿಸಲಾರೆವು. ನಿಮ್ಮೊ೦ದಿಗೆ ನಾವೂ ಬರುವೆವು.

ಗೋಪರು:- ಪ್ರಭುವೇ! ಶ್ರೀ ಕೃಷ್ಣನನ್ನು ನೋಡುವತನಕ
ನಾವು ಆಹಾರವನ್ನು ಸಹಾ ಕೊಳ್ಳುವುದಿಲ್ಲವು.
ನಂದ:- ಎಲ್ಲರೂ ತೆರಳಿರಿ. ಕಾಡಿಗೆ ಹೋಗುವ.
(ಎಲ್ಲರೂ ಕಾಡಿಗೆ ತೆರಳುವರು.)

ಗೋಪರು:-ಪ್ರಭುವೇ ! ಹೀಗೆ ಬನ್ನಿ, ಈ ದಾರಿಯಲ್ಲಿ ಹೋ
ಗುವುದು ಸುಲಭವು. ಇದು ದನಕರುಗಳು ಓಡಾಡುವ ದಾರಿಯು.
ಹೀಗೆ ದಯಮಾಡಿಸಿರಿ.
(ಸ್ವಲ್ಪ ದೂರ ಹೋಗುತ್ತಲೇ ಯಶೋದೆಯು ಶ್ರೀ ಕೃಷ್ಯನ
ಹೆಜ್ಜೆಗಳನ್ನು ಗುರ್ತಿಸುವಳು,)

ಯಶೋದೇ:- ರಾಗ - ತೋಡಿ - ಆಟತಾಳ.
   ಹೆಜ್ಜೆಗಳಿವೆ ನೋಡಿರೇ| ಶ್ರೀ ಕೃಷ್ಣನ ಹೆಜ್ಜೆಗಳಿವೆ ನೋಡಿರೇ||ಪ!
   ಅಬ್ಜ ಅಂಕುಶ ಧ್ವಜ ರೇಖಾಶೋಭಿತ ಮಾದ||ಹೆಜ್ಜೆ||ಅ-ಪ||

ನಂದಗೋಪ:-ಬಾಲ ಗೋಪಾಲ ನೀ ಕಾಂತಾರದೊಳಗಾವ ಲೀಲೆಗೈಯ್ಯುವನೊ
ಎಲ್ಲಿರ್ಪನೊ ನೋಡುವ ||ಹೆಜ್ಜೆ||
ಗೋಪಿಯರು:-ಚಂದ್ರನ ಯದುಕುಲ ಚ೦ದ್ರನ ನೋಡುವ, ಮಂದಗಮನೆಯರೆ
ಮುಂದಾಗಿ ಬನ್ನಿರಿ||ಹೆಜ್ಜೆ||
ಗೋಪರು:-ಭೂರಿ ಕಾನನದೊಳು ನೀರೇಜಲೋಚನನಾರೊಡಗೂಡಿ ಎಲ್ಲಿರುವ
ನೊ ನೋಡುವ ||ಹೆಜ್ಜೆ||
ಉದ್ದವ:-ದೇವಾ ಇವರ ದೀನ ಭಾವವನೀಕ್ಷಿಸಿ, ಕಾವುದೀಗಲೆ ಶಿವರಾಮದಾಸ
ನುತ|| ದೇವಾದಯಾ ಸಾಂದ್ರಾ||ಹೆಜ್ಜೆ||
(ಇಂತು ನಂದ ಯಶೋದಾದಿಗಳೆಲ್ಲವೂ ಕೃಷ್ಣನನ್ನು ಹುಡು
ಕುತ್ತ, ಯಮುನಾತೀರಕ್ಕೆ ಬಂದು, ಮಡುವಿನಲ್ಲಿ ಕಾಳೀಯನಿಂದ ಸುತ್ತ