ಈ ಪುಟವನ್ನು ಪ್ರಕಟಿಸಲಾಗಿದೆ
೧೧೭ಚತುರ್ಥಾ೦ಕ೦
ಉದ್ದವ- ದೇವೀ ! ಸೈರಿಸು ! ಸೈರಿಸು ! ಸ್ವಲ್ಪ ಕಾಲ ಸೈರಿಸು!
ಶ್ರೀ ಕೃಷ್ಣ:- (ತನ್ನಲ್ಲಿ) ಓಹೋ ! ಇನ್ನು ಸಾವಕಾಶಮಾಡಿ
ದರೆ ಇವರೆಲ್ಲರೂ ನಿಜವಾಗಿಯೇ ಪ್ರಾಣಗಳನ್ನು ತೊರೆದುಬಿಡುವರು.
ಆದ ಪ್ರಯುಕ್ತ ನಾನಿನ್ನು ಸಾವಕಾಶಮಾಡಬಾರದು, ಮದಾಂಧನಾದ
ಕಾಳೀಯನ ಗರ್ವವನ್ನು ಮುರಿಯುವೆನು..'
(ಎಂದು ಶ್ರೀ ಕೃಷ್ಣನು ತನ್ನ ಶರೀರವನ್ನು ಬೆಳಸಿ ಕಾಳೀ
ಯನ ಕಟ್ಟುಗಳನ್ನು ಮುರಿದು, ಅವನ ಹೆಡೆಗಳ ಮೇಲೆ ನಾಟ್ಯವಾಡುತ್ತ
ನೂರಾರು ಹೆಡೆಗಳುಳ್ಳ ಅವನ ತಲೆಯನ್ನು ನುಗ್ಗು ನುಗ್ಗಾಗಿ ತುಳಿಯು
ತ್ತಲೇ ಕಾಳೀಯನು ತನ್ನ ಮೂಗಿನ ಹೊಳ್ಳೆಗಳಿಂದ ನಿಟ್ಟುಸುರುಗ
ಳನ್ನು ಬಿಡುತ್ತ ಬಾಯಿಂದ ರಕ್ತವನ್ನು ಸುರಿಸುತ್ತ, ಕೊಳ್ಳಿಗಳಂತೆ
ಬೆಳಗುತ್ತಿರುವ ಕಣ್ಗಳಿಂದ ಬಿಸಿ ನೀರು ಸುರಿಯುತ್ತಿರಲು ದುರ್ಬಲ
ನಾಗಿ, ಕೃಷ್ಣನ ಪ್ರಭಾವವನ್ನರಿತು, ಚೆನ್ನಾಗಿ ಬಾಯಿ ಬಿಡುವುದಕ್ಕಾ
ದರೂ ಯತ್ನವಿಲ್ಲದೆ ಮನಸ್ಸಿನಲ್ಲಿಯೇ ಧ್ಯಾನಮಾಡುತ್ತ ಶರಣಾಗತ
ನಾಗುವನು.)
ಚತುರ್ಥಾಂಕಂ:-ಪಂಚಮರಂಗಂ.
Insert picture >>